Asianet Suvarna News Asianet Suvarna News

Mysuru ಬಿಜೆಪಿ ಟಿಕೆಟ್ ವಿಚಾರ : ಸಂದೇಶ್ ಬಗ್ಗೆ ವಿಶ್ವನಾಥ್ ಅಸಮಾಧಾನ

 • ಮೈಸೂರು ಚಾಮರಾಜನಗರ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್
 • ಬಿಜೆಪಿ ಟಿಕೆಟ್ ನೀಡುವುದಕ್ಕೆ ಎಚ್.ವಿಶ್ವನಾಥ್ ವಿರೋಧ 
Mysuru H Vishwanath opposes to giving MLC ticket to Sandesh Nagaraj From BJP snr
Author
Bengaluru, First Published Nov 18, 2021, 2:00 PM IST
 • Facebook
 • Twitter
 • Whatsapp

 ಮೈಸೂರು (ನ.18):  ಮೈಸೂರು (Mysuru) ಚಾಮರಾಜನಗರ (Chamarajanagar) ದ್ವಿಸದಸ್ಯ ವಿಧಾನ ಪರಿಷತ್ (MLC Election) ಕ್ಷೇತ್ರದಲ್ಲಿ ಜೆಡಿಎಸ್ (JDS) ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ (Sandesh Nagaraj) ಬಿಜೆಪಿ ಟಿಕೆಟ್ (BJP Ticket) ನೀಡುವುದಕ್ಕೆ ಎಚ್.ವಿಶ್ವನಾಥ್ (H Vishwanath) ವಿರೋಧ ವ್ಯಕ್ತಪಡಿಸಿದ್ದಾರೆ. 

ಜೆಡಿಎಸ್  ಎಂಎಲ್‌ಸಿ ಸಂದೇಶ್ ನಾಗರಾಜ್ ಸದ್ಯ ಬಿಜೆಪಿಯಿಂದ ಸ್ಪರ್ಧಿಸಲು ಮುಂದಾಗಿದ್ದು,  ಕಳೆದ ಬಾರಿ ಹಿಂದುಳಿದ ವರ್ಗದ ರಘುಗೆ (Raghu) ಬಿಜೆಪಿ ಟಿಕೆಟ್ ನೀಡಲಾಗಿತ್ತು. ಆಗ ರಘು ಅವರು ಹತ್ತು ಕೋಟಿ ಸಾಲ ಮಾಡಿಕೊಂಡು ಇನ್ನೂ ತೀರಿಸಿಲ್ಲ. ಸಂದೇಶ್ ನಾಗರಾಜ್ ಗೂ ಬಿಜೆಪಿ ಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. 

 ಜೆಡಿಎಸ್ ಎಂಎಲ್‌ಸಿಯಾಗಿರುವ ಸಂದೇಶ್ ನಾಗರಾಜ್ ಇನ್ನು ಬಿಜೆಪಿಯನ್ನೇ ಸೇರಿಲ್ಲ. ಪಕ್ಷಕ್ಕೆ ಸೇರದವರಿಗೆ ಚುನಾವಣೆ ಟಿಕೆಟ್ (Election Ticket) ಕೊಡಲು ಹೇಗೆ ಸಾಧ್ಯ. ಕಳೆದ ಬಾರಿ ನಿಂತಿದ್ದ ಕೌಟಿಲ್ಯ ರಘುಗೇ ಟಿಕೇಟ್ ಕೊಡಬೇಕು ಎಂದು ವಿಶ್ವನಾಥ್ ಹೇಳಿದರು. 

ಕಡೇ ಗಳಿಗೆಯಲ್ಲಿ ಬಿಜೆಪಿ ಸೇರಿದರೆ ಟಿಕೆಟ್ ನೀಡುವುದು ಸರಿಯಲ್ಲ.  75 ವರ್ಷ ದಾಟಿದವರಿಗೆ ಬಿಜೆಪಿ ಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ನಿಯಮವಿದೆ. ಹಾಗಾಗಿ ಸಂದೇಶ್ ನಾಗರಾಜ್ ಬಿಜೆಪಿ ಸೇರಿ ಕೆಲಸ ಮಾಡಲಿ. ಪಕ್ಷಕ್ಕೆ ದುಡಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್  ಅಸಮಾಧಾನ ವ್ಯಕ್ತಪಡಿಸಿದರು. 

 ದಲಿತ ಸಿಎಂ ವಿಚಾರ :  ಸಿದ್ದರಾಮಯ್ಯ (Siddaramaiah) ದಲಿತ ಮುಖ್ಯಮಂತ್ರಿಗೆ (Dalit CM ) ನನ್ನ ಬೆಂಬಲ ಎಂದು ಯಾವಾಗಲೂ ಹೇಳುತ್ತಾರೆ. ಮತ್ತೊಂದೆಡೆ ನಾನೆ ದಲಿತ ಅಂತ ಸಿದ್ದರಾಮಯ್ಯ ಹೇಳುತ್ತಾರೆ.  ನಾನೇ ಮುಂದಿನ ಮುಖ್ಯಮಂತ್ರಿ (CM) ಎಂದು ಈ ಮಾತಿನ ಅರ್ಥವಾಗಿದೆ.  ಮಲ್ಲಿಕಾರ್ಜುನ್ ಖರ್ಗೆ (Mallikarjun kharge) ಇಲ್ಲವಾ, ಪರಮೇಶ್ವರ (Parameshwar) ಇಲ್ಲವಾ.  ಇವರುಗಳು ಮುಖ್ಯ ಮಂತ್ರಿಯಾಗಬಾರದ ಎಂದು ಪ್ರಶ್ನೆ ಮಾಡಿದರು. 
 
ಯೂತ್ ಕಾಂಗ್ರೆಸ್ ನಲ್ಲಿ (Youth Congress) ನಲಪಾಡ್ (Nalapad) ಗೆದ್ದರೂ ಅಧ್ಯಕ್ಷ ಆಗಲು ಅವಕಾಶ ಕೊಡಲಿಲ್ಲ. ನಿನ್ನ ಮೇಲೆ ಕೇಸ್ ಇದೆ ಎಂದು ಹೇಳಿ ಅಧಿಕಾರ ತಪ್ಪಿಸಿದ್ದೀರಿ. ಯಾಕೆ ಕೊಡಲಿಲ್ಲ ಅಪಾದನೆ ಇದೆ ಎಂದು ಕೊಡಲಿಲ್ಲವೇ. ಹಾಗಿದ್ದರೆ ನಲಪಾಡ್ ಮೇಲಿರುವ ಆಪಾದನೆ ಏನೂ ಹೇಳಿ ಎಂದು ವಿಶ್ವನಾಥ್ ಕೇಳಿದರು. 

ಇನ್ನು ಹ್ಯಾಕರ್ ಶ್ರೀಕಿಯದ್ದು (hacker shriki)  ಹೈಪ್ ಬ್ರೈನ್ (Hype brain).  ಅವನು 8 ನೇ ತರಗತಿ ಇದ್ದಾಗಲೇ ಏನೇನೋ ಮಾಡುತ್ತಿದ್ದ. ಹ್ಯಾಕಿಂಗ್ ಬಗ್ಗೆ ಅವನಿಗೆ ಆಗಲೇ ಗೊತ್ತಿತ್ತು. ಅವನನ್ನು ಕರೆದು ಕೂರಿಸಿಕೊಂಡು ಕೇಳಿಕೊಳ್ಳಿ. ಅವನ ಬುದ್ದಿವಂತಿಕೆ ಒಳ್ಳೆಯದಕ್ಕೆ ಬಳಸಿಕೊಳ್ಳಿ ಎಂದು ಸುದ್ದಿಗೋಷ್ಟಿಯಲ್ಲಿ ಹೆಚ್.ವಿಶ್ವನಾಥ್ ಹೇಳಿದರು.

 • ಮೈಸೂರು ಚಾಮರಾಜನಗರ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್  
 • ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ಎಚ್ ವಿಶ್ವನಾಥ್ ವಿರೋಧ.
 • ಕಳೆದ ಬಾರಿ ಹಿಂದುಳಿದ ವರ್ಗಕ್ಕೆ ಬಿಜೆಪಿ ಟಿಕೆಟ್ ನೀಡಿದಂತೆ ಈ ಬಾರಿಯು ಸಿಗಲಿ
 • ಈ ಬಾರಿಯೂ ಕೌಟಿಲ್ಯ ರಘುಗೇ ಟಿಕೇಟ್ ಕೊಡಿ ಎಂದ ವಿಶ್ವನಾಥ್ 
 • ಕಡೇ ಗಳಿಗೆಯಲ್ಲಿ ಬಿಜೆಪಿ ಸೇರಿದರೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ಅಸಮಾಧಾನ
 • 75 ವರ್ಷ ದಾಟಿದವರಿಗೆ ಬಿಜೆಪಿ ಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ನಿಯಮದ ಬಗ್ಗೆ ಮಾತನಾಡಿದ ಹಳ್ಳಿಹಕ್ಕಿ
 • ಪಕ್ಷಕ್ಕೆ ದುಡಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದ ವಿಶ್ವನಾಥ್
Follow Us:
Download App:
 • android
 • ios