ಮೈಸೂರು ಜಿಲ್ಲೆಗೆ 4ನೇ ಬಾರಿಗೆ ಒಲಿದ ಸಿಎಂ ಹುದ್ದೆ: 2 ಬಾರಿ ಸಿಎಂ ಆಗುತ್ತಿರುವುದೂ ವರುಣದಿಂದ ಗೆದ್ದಾಗಲೇ!

ಮೈಸೂರು ಜಿಲ್ಲೆಗೆ 4ನೇ ಬಾರಿಗೆ ಸಿಎಂ ಹುದ್ದೆ ಒಲಿದು ಬಂದಿದೆ. 1972 ಹಾಗೂ 78ರಲ್ಲಿ ದಿ.ಡಿ.ದೇವರಾಜ ಅರಸು ಹಾಗೂ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಾರೆ. 

Mysuru district has got the post of CM for the 4th time gvd

ಮೈಸೂರು (ಮೇ.19): ಮೈಸೂರು ಜಿಲ್ಲೆಗೆ 4ನೇ ಬಾರಿಗೆ ಸಿಎಂ ಹುದ್ದೆ ಒಲಿದು ಬಂದಿದೆ. 1972 ಹಾಗೂ 78ರಲ್ಲಿ ದಿ.ಡಿ.ದೇವರಾಜ ಅರಸು ಹಾಗೂ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಾರೆ. ಜೊತೆಗೆ, ಮೈಸೂರು ಜಿಲ್ಲೆಯಿಂದ ಆಯ್ಕೆಯಾದ ಸಿದ್ದರಾಮಯ್ಯನವರಿಗೆ ದಿ.ಡಿ.ದೇವರಾಜ ಅರಸರ ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಹಿಂದುಳಿದ ವರ್ಗಗಳಿಂದ ಡಿ.ದೇವರಾಜ ಅರಸು, ಎಸ್‌.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ, ಎನ್‌. ಧರಂಸಿಂಗ್‌ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಹಿಂದುಳಿದ ವರ್ಗಗಳಿಂದ ಅರಸರ ನಂತರ ಎರಡನೇ ಬಾರಿಗೆ ಸಿಎಂ ಆಗುವ ಅವಕಾಶ ಸಿಕ್ಕಿದ್ದು ಸಿದ್ದರಾಮಯ್ಯಗೆ ಮಾತ್ರ.

ಈ ಹಿಂದೆ ದಿ.ಡಿ.ದೇವರಾಜ ಅರಸು ಅವರು ಹುಣಸೂರು ಕ್ಷೇತ್ರದಿಂದ 1952,1957, 1962, 1967, 1972 ಹಾಗೂ 1978- ಹೀಗೆ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 1962ರಲ್ಲಿ ಅವಿರೋಧ ಆಯ್ಕೆಯ ಗೌರವವೂ ಅವರಿಗೆ ಸಂದಿತ್ತು. 1972ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಅವರೇ ಮುಖ್ಯಮಂತ್ರಿಯಾದರು. ನಂತರ, ಡಿ.ಕರಿಯಪ್ಪಗೌಡ ಅವರು ಹುಣಸೂರಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಯಲ್ಲಿ ಅರಸರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ಅರಸು ಗೆದ್ದರು.ಹೀಗಾಗಿ, ಕರಿಯಪ್ಪಗೌಡರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು. 1978ರಲ್ಲಿ ಮತ್ತೊಮ್ಮೆ 2ನೇ ಬಾರಿಗೆ ಅರಸು ಅವರು ಸಿಎಂ ಆದರು.

ಔರಾದ್‌ ಅಭಿ​ವೃ​ದ್ಧಿಗೆ ಕೇಂದ್ರ ಸಚಿವ ಭಗ​ವಂತ ಖೂಬಾ ಅಡ್ಡ​ಗಾ​ಲು: ಪ್ರಭು ಚವ್ಹಾಣ್‌

ಈಗ ಸಿದ್ದು ಸರದಿ: ಚಾಮುಂಡೇಶ್ವರಿಯಿಂದ ಒಂದು ಉಪ ಚುನಾವಣೆ ಸೇರಿದಂತೆ ಐದು ಬಾರಿ (1983, 1985, 1994, 2004, 2006), ವರುಣದಿಂದ ಮೂರು ಬಾರಿ (2008, 2013, 2023) ಹಾಗೂ ಬಾದಾಮಿಯಿಂದ ಒಂದು ಬಾರಿ (2018) ಸೇರಿ ಒಟ್ಟು 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು, 2013ರ ಮೇ 13ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಾವಧಿ ಅಧಿಕಾರ ನಡೆಸಿದರು. ಅರಸರ ನಂತರ ಪೂರ್ಣಾವಧಿ ಅಧಿಕಾರ ನಡೆಸಿದ ಹಿಂದುಳಿದ ವರ್ಗಗಳ ನಾಯಕ ಎಂಬ ಹೆಗ್ಗಳಿಕೆಯೂ ಅವರದಾಯಿತು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದರೆ ಅವರು ಎರಡನೇ ಬಾರಿಗೆ ಸಿಎಂ ಆಗುವ ಅವಕಾಶವಿತ್ತು. ಆದರೆ ಸಾಧ್ಯವಾಗಿಲ್ಲ. ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾಯಿತಾದರೂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತು, ಬಾದಾಮಿಯಿಂದ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ ಸಿಎಂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಈ ಸಮ್ಮಿಶ್ರ ಸರ್ಕಾರ 14 ತಿಂಗಳಲ್ಲಿಯೇ ಪತನವಾಯಿತು. ಆಗಿನಿಂದಲೂ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಿಎಂ ಆಗಬೇಕು ಎಂದು ಕೊಂಡಿದ್ದರು.

ಅದಕ್ಕಾಗಿ ಈ ಬಾರಿ ಬಾದಾಮಿ, ಕೋಲಾರ ಎಂದೆಲ್ಲಾ ಸುತ್ತಾಡಿ ಕೊನೆಗೆ ಸ್ವಂತ ಊರು ಸಿದ್ದರಾಮನಹುಂಡಿ ಇರುವ ವರುಣ ಕ್ಷೇತ್ರಕ್ಕೆ ವಾಪಸ್‌ ಆಗಿದ್ದರು. ಅವರಿಗಾಗಿ ಅವರ ಪುತ್ರ ಡಾ.ಎಸ್‌.ಯತೀಂದ್ರ ಕ್ಷೇತ್ರತ್ಯಾಗ ಮಾಡಿದ್ದರು. ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಿಜೆಪಿಯಿಂದ ವಿ.ಸೋಮಣ್ಣ ಅವರನ್ನು ವರುಣದಲ್ಲಿ ಕಣಕ್ಕಿಳಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಸೋಮಣ್ಣ ಅವರನ್ನು 43,163 ಮತಗಳಿಂದ ಸೋಲಿಸಿದರು.

ಬಿಜೆಪಿ ಸೋಲಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಕಾರಣ: ಕುಮಾರ್‌ ಬಂಗಾರಪ್ಪ

2ನೇ ಬಾರಿಯೂ ಸಿಎಂ ಆಗಿದ್ದು ವರುಣದಿಂದ ಗೆದ್ದಾಗ: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡು ಬಾರಿ ಡಿಸಿಎಂ, ಎರಡು ಬಾರಿ ಪ್ರತಿಪಕ್ಷ ನಾಯಕರಾದವರು. ಈಗ ಎರಡನೇ ಬಾರಿಗೆ ಸಿಎಂ ಆಗುತ್ತಿದ್ದಾರೆ. ಅರಸು ಅವರು ಎರಡು ಬಾರಿ ಸಿಎಂ ಆಗಿದ್ದು ಹುಣಸೂರು ಕ್ಷೇತ್ರದಿಂದ ಗೆದ್ದಾಗ. ಅದೇ ರೀತಿ ಸಿದ್ದರಾಮಯ್ಯ ಕೂಡ ಎರಡು ಬಾರಿ ಸಿಎಂ ಆಗುತ್ತಿರುವುದು ವರುಣದಿಂದ ಗೆದ್ದಾಗಲೇ. 2013, 2023ರಲ್ಲಿ ವರುಣದಿಂದ ಗೆದ್ದು ಸಿಎಂ ಆಗಿದ್ದಾರೆ. 2008ರಲ್ಲಿ ವರುಣದಿಂದ ಮೊದಲ ಬಾರಿ ಗೆದ್ದಾಗ ಸಿದ್ದರಾಮಯ್ಯನವರು ಒಂದು ವರ್ಷದ ನಂತರ ಪ್ರತಿಪಕ್ಷ ನಾಯಕರಾಗಿದ್ದರು.

Latest Videos
Follow Us:
Download App:
  • android
  • ios