ಔರಾದ್‌ ಅಭಿ​ವೃ​ದ್ಧಿಗೆ ಕೇಂದ್ರ ಸಚಿವ ಭಗ​ವಂತ ಖೂಬಾ ಅಡ್ಡ​ಗಾ​ಲು: ಪ್ರಭು ಚವ್ಹಾಣ್‌

ಔರಾದ್‌ ಅಭಿ​ವೃ​ದ್ಧಿಗೆ ಕೇಂದ್ರ ಸಚಿವ ಭಗ​ವಂತ ಖೂಬಾ ಅಡ್ಡ​ಗಾ​ಲು ಹಾಕು​ತ್ತಿ​ದ್ದಾರೆ ಎಂದು ಬಿಜೆ​ಪಿಯ ಶಾಸ​ಕ​ರಾ​ಗಿ ಮರು ಆಯ್ಕೆ​ಯಾ​ಗಿ​ರುವ ಮಾಜಿ ಸಚಿವ ಪ್ರಭು ಚವ್ಹಾಣ್‌ ಆರೋ​ಪಿ​ಸಿ​ದರು. 

Ex Minister Prabhu Chauhan Slams On Bhagavant Khuba At Bidar gvd

ಬೀದ​ರ್‌ (ಮೇ.18): ಔರಾದ್‌ ಅಭಿ​ವೃ​ದ್ಧಿಗೆ ಕೇಂದ್ರ ಸಚಿವ ಭಗ​ವಂತ ಖೂಬಾ ಅಡ್ಡ​ಗಾ​ಲು ಹಾಕು​ತ್ತಿ​ದ್ದಾರೆ ಎಂದು ಬಿಜೆ​ಪಿಯ ಶಾಸ​ಕ​ರಾ​ಗಿ ಮರು ಆಯ್ಕೆ​ಯಾ​ಗಿ​ರುವ ಮಾಜಿ ಸಚಿವ ಪ್ರಭು ಚವ್ಹಾಣ್‌ ಆರೋ​ಪಿ​ಸಿ​ದರು. ಅವರು ಈ ಕುರಿ​ತಂತೆ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾಡಿ, ಸಾವರಗಾಂವ್‌- ಹಂಗರಗಾ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ ಲಿಂಗಿ ಸಮೀಪ ಬಾಂದಾರ ಸೇತುವೆ ನಿರ್ಮಾಣ ಮಾಡಲು ಟೆಂಡರ್‌ ಕರೆದಿದ್ದೆ ಆದರೆ ಮುಖ್ಯ ಅಭಿ​ಯಂತ​ರ​ರಿಗೆ ಹೇಳಿ ಅದನ್ನು ರದ್ದುಪಡಿಸಿದ್ದಾರೆ ಎಂದ​ರು. 

ಔರಾದ್‌ ಪಟ್ಟಣದ ಅಮರೇಶ್ವರ ದೇವ​ಸ್ಥಾ​ನ ಮಹಾದ್ವಾರ ಕಾಮಗಾರಿ ಪೂಜೆ ನಾನು ಮಾಡಿದ್ದೆ ಆದರೆ ಅಧಿಕಾರಿಗಳಿಗೆ ಕಾಮಗಾರಿ ಆರಂಭಿಸಬೇಡಿ ಎಂದು ಔರಾದ್‌ನ ಕುಲದೇವತೆಯ ಕಾಮಗಾರಿಯನ್ನು ತಾ​ವೇ ನಿಲ್ಲಿಸಿ ತಮ್ಮ ಬೆಂಬಲಿಗರಿಂದ ಸುಳ್ಳು ಹೇಳಿಕೆ ನೀಡಿಸು​ತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಖೂಬಾ ವಿರುದ್ಧ ಕಿಡಿ​ಕಾ​ರಿ​ದ​ರು.

ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ

ತಾಲೂಕಿನಲ್ಲಿ ಸುಮಾರು 200ಕೋಟಿ ರು.ಗಳ ಜೆಜೆಎಂ ಯೋಜ​ನೆ ಮಂಜೂರಾಗಿದೆ ಅದಕ್ಕೂ ಕೂಡ ಮರು ಟೆಂಡರ್‌ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ನನ್ನ 15 ವರ್ಷದ ಅವಧಿಯಲ್ಲಿ ನಾನು ಯಾವ ಜಾತಿಯನ್ನೂ ನೋಡದೆ ಎಲ್ಲರಿಗೂ ಸಹಾಯ ಮಾಡಿದ್ದೇನೆ. ಆದರೆ, ಪ್ರಭು ಚವ್ಹಾಣ್‌ ಜಾತಿಯ ಭೇದ ಭಾವ ಮಾಡುತ್ತಿದ್ದಾನೆ ಎಂದ ಅವರು, ಬಿ-ಟೀಮ್‌ ಮುಖಾಂತರ ಅಪಪ್ರಚಾರ ಮಾಡಿಸಿದ್ದಾರೆ. ಖೂಬಾ ಅವರ ಬಿ-ಟೀಮ್‌ನಲ್ಲಿರುವ ಎಲ್ಲರೂ ನಾನು ಕೆಲಸ ನೀಡಿದ ಮೇಲೆಯೆ ವಾಹನ ಖರೀದಿ, ಮನೆ ಖರೀದಿ ಮಾಡಿದ್ದಾರೆ ಎಂದರು.

ಎಂಪಿ ಚುನಾವಣೆ ಬಂದರೆ ಹೊಂದಾ​ಣಿಕೆ ನೀತಿ​ಯತ್ತ ಖೂಬಾ: ನನ್ನ ಚುನಾವಣೆ ಬಂದರೆ ವಿರೋಧ ಮಾಡುತ್ತಾರೆ ಖೂಬಾ ಅವರ ಲೋಕ​ಸ​ಭಾ ಚುನಾವಣೆ ಬಂದರೆ ಹೊಂದಾಣಿಕೆ ನೀತಿ ಅನುಸರಿಸುತ್ತಾರೆ ಇದ್ಯಾಕೆ ಅಂತಹ ಯಾವ ತಪ್ಪನ್ನು ನಾನು ಮಾಡಿದ್ದೇನೆ ಹೇಳಿ ಎಂದರು. ಕಳೆದ ಚುನಾವಣೆಯಲ್ಲಿ ಭಗವಂತ ಖೂಬಾ ಅವರಿಗೆ ಪಕ್ಷ ಟಿಕೇಟ್‌ ನೀಡದೆ ಇದ್ದಲ್ಲಿ ನಾನು ವೀಷ ಸೇವಿಸುತ್ತೇನೆ ಎಂದು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದೆ. ನಾನು 18 ವರ್ಷದವನಾಗಿದ್ದಿನಿಂದ ಬಿಜೆಪಿ ಪಕ್ಷದಲ್ಲಿದ್ದೇನೆ. ಖೂಬಾ ಕಾಂಗ್ರೆಸ್‌ನಿಂದ ಇತ್ತೀಚೆಗೆ ಬಿಜೆಪಿಗೆ ಬಂದಿದ್ದಾರೆ ಎಂದು ಆರೋ​ಪಿ​ಸಿ​ದರು.

ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಮಾಜಿ ಸದಸ್ಯ ಶಿವಾಜಿರಾವ ಕಾಳೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ಕಾರ್ಯದರ್ಶಿ ಕಿರಣ ಪಾಟೀಲ, ಮಂಡಲ ಅಧ್ಯಕ್ಷ ರಾಮಶೆಟ್ಟಿಪನ್ನಾಳೆ, ಜಿಪಂ ಮಾಜಿ ಸದಸ್ಯ ವಸಂತ ಬಿರಾದಾರ, ಮಾಜಿ ಮಂಡಲ ಅಧ್ಯಕ್ಷ ಸುರೇಶ ಭೋಸ್ಲೆ, ರಮೇಶ ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ಗಿರೀಶ್‌ ವಡೆಯರ್‌, ಮಂಡಲ ಉಪಾಧ್ಯಕ್ಷ ಶಿವಕುಮಾರ ಪಾಂಚಾಳ, ಎಪಿಎಂಸಿ ಉಪಾಧ್ಯಕ್ಷ ನರಸಿಂಗ್‌ ಮೇತ್ರೆ, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ ಉಪಾಸೆ, ಬಾಬುರಾವ ತೋರ್ಣಾವಾಡಿ, ವೆಂಕಟರಾವ ಡೊಂಬಾಳೆ, ಪಟ್ಟಣ ಪಂಚಾಯತ್‌ ಉಪಾಧ್ಯಕ್ಷ ಸಂತೋಷ ಪೋಕಲವಾರ, ಸದಸ್ಯ ದೊಂಡಿಬಾ ನರೋಟೆ, ಗುಂಡಪ್ಪ ಮುಧಾಳೆ, ದಯಾನಂದ ಘೂಳೆ, ಮೈಲಾರ ಮಲ್ಲಣ್ಣ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ ಸೇರಿದಂತೆ ಔರಾದ್‌ ತಾಲೂಕಿನ ಅನೇ​ಕ ಪ್ರಮುಖರು ಹಾಜರಿದ್ದರು.

Latest Videos
Follow Us:
Download App:
  • android
  • ios