ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನನ್ನ ಮಗನೂ ಪ್ರಬಲ ಆಕಾಂಕ್ಷಿ: ಶಾಸಕ ಎಸ್.ಆರ್.ವಿಶ್ವನಾಥ್

ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆ ಯುವಕರ ಆಗ್ರಹಕ್ಕೆ ಮಣಿದು ನಮೋ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

My son is also a strong aspirant for Chikkaballapur Lok Sabha seat Says SR Vishwanath gvd

ದಾಬಸ್‌ಪೇಟೆ (ಮಾ.01): ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆ ಯುವಕರ ಆಗ್ರಹಕ್ಕೆ ಮಣಿದು ನಮೋ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು. ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ತೋಪಿನ ಗಣಪತಿ ದೇವಾಲಯದಿಂದ ಬಿಜೆಪಿ ವತಿಯಿಂದ ಆಯೋಜಿಸಿದ್ದ ನಮೋ ಸಂಕಲ್ಪ ಯಾತ್ರೆ ಹಾಗೂ ಬೃಹತ್ ಕಾರ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಲೋಕಸಭಾ ಕ್ಷೇತ್ರದ ಕುಬೇರನ ಸ್ಥಾನದಲ್ಲಿ ದಕ್ಷಿಣಕಾಶಿ ಶಿವಗಂಗೆ ಇದೆ, ಆದ್ದರಿಂದ ಶಿವಗಂಗೆಯ ಪ್ರಸಿದ್ಧ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಂಘಟನೆ ಆರಂಭಿಸಿದ್ದೇವೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ 3.5 ಲಕ್ಷ ಮತದ ಅಂತರದಲ್ಲಿ ನಮ್ಮ ಅಭ್ಯರ್ಥಿಯ ಗೆಲವು ನಿಶ್ಚಿತ ಎಂದು ಹೇಳಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮ: ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬೀಳಬೇಕು, ನನ್ನ ಪುತ್ರ ಅಲೋಕ್ ವಿಶ್ವನಾಥ್ ಆಕಾಂಕ್ಷಿ, ಅಭ್ಯರ್ಥಿಯ ತೀರ್ಮಾನ ಹೈಕಮಾಂಡ್ ಗೆ ಬಿಟ್ಟ ವಿಚಾರ, ದೇವನಹಳ್ಳಿಯಲ್ಲಿ ಪಕ್ಷದ ಕಚೇರಿಯನ್ನು ಇಂದು ಪ್ರಾರಂಭಿಸಿದ್ದೇವೆ, ಅಲೋಕ್ ಸಹ ಪ್ರಬಲ ಆಕಾಂಕ್ಷಿ ಎಂದರು. ತಾಲೂಕು ಉಪಾಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಲೆ ಮತ್ತು ಯುವಕರ ಸಂಘಟನೆ ಹೆಚ್ಚಿದೆ.

ಓಬಿಸಿಗೆ 27% ಶಿಕ್ಷಣ ಮೀಸಲು ನೀಡಿದ ಪ್ರಧಾನಿ ಮೋದಿ: ಕೆ.ಎಸ್.ಈಶ್ವರಪ್ಪ

ಈ ಕಾರ್ ರ‍್ಯಾಲಿ ಮುಖಾಂತರ ಇಡೀ ಬೆಂಗ್ರಾ ಜಿಲ್ಲೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಪುತ್ರ ಅಲೋಕ್ ರಿಂದ ಹೊಸ ಅಲೆ ಸೃಷ್ಟಿಯಾಗಲಿದೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಟಿಕೇಟ್ ಆಕಾಂಕ್ಷಿ ಅಲೋಕ್ ವಿಶ್ವನಾಥ್ ಮಾತನಾಡಿ, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಅಪಾರ, ಉಕ್ರೇನ್ ಯುದ್ಧ ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿಗಳ ಸುರಕ್ಷತೆಯಾಗಿ ವಾಪಸಾತಿ, ವಿದೇಶಾಂಗ ನೀತಿಗಳು ಭಾರತವನ್ನು ತಲೆಎತ್ತಿ ನಿಲ್ಲುವಂತೆ ಮಾಡಿದೆಕ, ಯುವಕರ ಶಕ್ತಿ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಣಲಿದೆ ಎಂದರು.

ಪ್ರಧಾನಿ ಮೋದಿ ಪರವಾಗಿ ಬುಲೆಟ್ ರಾಣಿ ರಾಜ ಲಕ್ಷ್ಮಿಯಿಂದ ದೇಶಾದ್ಯಂತ ಪ್ರಚಾರ!

ಮಾಜಿ ಸಚಿವ ಮತ್ತು ಸಂಚಾಲಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕ ಎಂ.ವಿ.ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಹುಲ್ ಗೌಡ, ರೈಲ್ವೆ ಬೋರ್ಡ್ ಅಧ್ಯಕ್ಷ ಮಾದವಾರ ಸಿದ್ದರಾಜು, ಯಲಹಂಕ ಬಿಜೆಪಿ ಅಧ್ಯಕ್ಷ ಹನುಮಯ್ಯ, ಸಪ್ತಗಿರಿ ಶಂಕರ್ ನಾಯಕ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗ.ನಾಗರಾಜು, ಹೋಬಳಿ ಅಧ್ಯಕ್ಷ ಮುರುಳೀಧರ್, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ವಕ್ತಾರ ಗುಬ್ಬಣ್ಣಸ್ವಾಮಿ, ಯುವ ಮುಖಂಡರಾದ ರಾಯರಪಾಳ್ಯ ಮಹೇಶ್, ಬಾಬು, ರಾಜಮ್ಮ, ಮಹಿಳಾ ಪ್ರತಿನಿಧಿಗಳು, ನೂರಾರು ಕಾರ್ಯಕರ್ತರು, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಜರಿದ್ದರು.

Latest Videos
Follow Us:
Download App:
  • android
  • ios