Asianet Suvarna News Asianet Suvarna News

ಪ್ರಧಾನಿ ಮೋದಿ ಪರವಾಗಿ ಬುಲೆಟ್ ರಾಣಿ ರಾಜ ಲಕ್ಷ್ಮಿಯಿಂದ ದೇಶಾದ್ಯಂತ ಪ್ರಚಾರ!

ಲೋಕಸಭಾ ಚುನಾವಣೆ ಕಾವು ನಿಧಾನಕ್ಕೆ ಏರುತ್ತಿದ್ದಂತೆ ಪ್ರಚಾರದ ಭರಾಟೆ ಸಹಾ ವೇಗ ಪಡೆಯುತ್ತಿದೆ. ಪ್ರಧಾನಿ ಮೋದಿ ಪರ ದೇಶಾದ್ಯಂತ ಬೈಕ್ ಸಂಚಾರ ಆರಂಭಿಸಿರುವ ತಮಿಳುನಾಡಿನ ಬುಲೆಟ್ ರಾಣಿ ರಾಜಲಕ್ಷ್ಮಿ ಇಂದು ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಈಗಾಗಲೇ 4200 ಕಿಮೀ ಕ್ರಮಿಸಿರುವ ಅವರು ಪ್ರಧಾನಿ ಮೋದಿ ಪರ ಪ್ರಚಾರ ಕೈಗೊಂಡಿದ್ದಾರೆ. 

Nationwide campaign by bullet Raja Rani Lakshmi on behalf of PM Narendra Modi gvd
Author
First Published Mar 1, 2024, 8:22 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಮಾ.01): ಲೋಕಸಭಾ ಚುನಾವಣೆ ಕಾವು ನಿಧಾನಕ್ಕೆ ಏರುತ್ತಿದ್ದಂತೆ ಪ್ರಚಾರದ ಭರಾಟೆ ಸಹಾ ವೇಗ ಪಡೆಯುತ್ತಿದೆ. ಪ್ರಧಾನಿ ಮೋದಿ ಪರ ದೇಶಾದ್ಯಂತ ಬೈಕ್ ಸಂಚಾರ ಆರಂಭಿಸಿರುವ ತಮಿಳುನಾಡಿನ ಬುಲೆಟ್ ರಾಣಿ ರಾಜಲಕ್ಷ್ಮಿ ಇಂದು ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಈಗಾಗಲೇ 4200 ಕಿಮೀ ಕ್ರಮಿಸಿರುವ ಅವರು ಪ್ರಧಾನಿ ಮೋದಿ ಪರ ಪ್ರಚಾರ ಕೈಗೊಂಡಿದ್ದಾರೆ. 

ತಮಿಳುನಾಡಿನಿಂದ ಪ್ರಚಾರ ಆರಂಭ: ದೇಶಾದ್ಯಂತ 15 ರಾಜ್ಯಗಳ ಸಂಚಾರ 21 ಸಾವಿರ ಕಿಲೋಮೀಟರ್ ಕ್ರಮಿಸುವ ಗುರಿಯೊಂದಿಗೆ ತಮಿಳುನಾಡಿನ ಮಧುರೈನಿಂದ ಹೊರಟಿರುವ ಬೈಕ್ ರ್ಯಾಲಿ ಬುಲೆಟ್ ರಾಣಿ ರಾಜಲಕ್ಷ್ಮಿ ನೇತೃತ್ವದಲ್ಲಿ ಸಂಚರಿಸುತ್ತಿದೆ. ಇಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ದರು, ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ಕೈಗೊಂಡಿರುವ 21 ಜನರ ತಂಡ ಮತ್ತೊಮ್ಮೆ ಮೋದಿ ಆಯ್ಕೆಗೆ ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿತ್ತು. ನಗರದ ವಿವಿಧಡೆ ಸಂಚಾರಿಸಿದ ತಂಡ ಪ್ರಧಾನಿ ಮೋದಿ ಆಡಳಿತ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ವನ್ನು ಮಾಡಿದರು. 

5 ಹೊಸ ಬಸ್ ಸಂಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿಶಾನೆ!

ಏಪ್ರೀಲ್ 18ಕ್ಕೆ ದೆಹಲಿಗೆ: ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಅವರು ದೇಶದಲ್ಲಿ ಬಡವರ ಬಗ್ಗೆ ಕಾಳಿಜಿಯನ್ನು ಮೋದಿ ವಹಿಸಿದ್ದಾರೆ. ದೇಶದ ರಕ್ಷಣೆಯಲ್ಲಿ ಪ್ರಧಾನಿ ಮೋದಿಅವರು  ಪಾತ್ರ ಬಹಳ ದೊಡ್ಡದ್ದು,  ಮಹಿಳೆಯರ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಫೆಬ್ರವರಿ 18 ರಂದು ತಮಿಳುನಾಡಿನ ಮಧುರೈನಿಂದ ಆರಂಭಗೊಂಡಿರುವ ರ್ಯಾಲಿ ಆಂದ್ರಪ್ರದೇಶ ತೆಲಂಗಾಣ ಕಡೆಯಿಂದ ಕರ್ನಾಟಕ ಪ್ರವೇಶಿಸಿದ್ದು ಈಗಾಗಲೇ 4200 ಕಿಲೋಮೀಟರ್ ಕ್ರಮಿಸಿದ್ದು ಬೆಳಗಾವಿ ಮೂಲಕ ಮಹಾರಾಷ್ಟ್ರ ಗೋವಾ ಮಧ್ಯಪ್ರದೇಶ ಉತ್ತರಪ್ರದೇಶ ಜಾರ್ಖಂಡ್ ದೆಹಲಿ ಮೂಲಕ ಸಂಚರಿಸಿ 21 ಸಾವಿರ ಕಿಲೋ  ಮೀಟರ್ ಕ್ರಮಿಸಿ ಏಪ್ರಿಲ್ 18 ಕ್ಕೆ ಕೊನೆಗೊಳ್ಳಲಿದೆ.

Follow Us:
Download App:
  • android
  • ios