ಲೋಕಸಭೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಬೇಕು: ಸಿಎಂ ಸಿದ್ದು, ಡಿಕೆಶಿ ಸೂಚನೆ

ಲೋಕಸಭೆ ಚುನಾವಣೆಗೆ ಸಿದ್ಧತೆ ತೀವ್ರಗೊಳಿಸಿರುವ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಕನಿಷ್ಠ 20 ಸ್ಥಾನ ಗೆಲ್ಲಬೇಕು ಎಂದು ಸೂಚನೆ ನೀಡಲಾಗಿದೆ.

Must win at least 20 seats in Lok Sabha Election CM Siddaramaiah DK Shivakumar notice gvd

ಬೆಂಗಳೂರು (ಮಾ.22): ಲೋಕಸಭೆ ಚುನಾವಣೆಗೆ ಸಿದ್ಧತೆ ತೀವ್ರಗೊಳಿಸಿರುವ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಕನಿಷ್ಠ 20 ಸ್ಥಾನ ಗೆಲ್ಲಬೇಕು ಎಂದು ಸೂಚನೆ ನೀಡಲಾಗಿದೆ. ಲೋಕಸಭೆ ಚುನಾವಣೆ ಹದಿನೇಳು ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಮೊದಲೇ ಗುರುವಾರ ಸಂಜೆ ಸಚಿವರು, ಹಿರಿಯ ಶಾಸಕರು ಹಾಗೂ ಲೋಕಸಭೆ ಚುನಾವಣೆ ಕೈ ಅಭ್ಯರ್ಥಿಗಳ ಜತೆ ಕಾಂಗ್ರೆಸ್ ನಾಯಕರು ಚುನಾವಣಾ ಸಿದ್ಧತೆ ಸಭೆ ನಡೆಸಿದರು. 

ಈ ವೇಳೆ ಸಚಿವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಎಲ್ಲಾ ರೀತಿಯಲ್ಲೂ ಶ್ರಮವಹಿಸಬೇಕು. ಜತೆಗೆ ಹಿರಿಯ ಶಾಸ ಕರೂ ನೆರವಾಗಬೇಕು. ಹಿರಿಯ ಶಾಸಕರು, ಸಚಿವರುಹಾಗೂ ಅಭ್ಯರ್ಥಿಗಳು ಸಮನ್ವಯ ತೆಯಿಂದ ಚುನಾವಣೆ ಎದುರಿಸಿ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬರಬೇಕು. ಎಲ್ಲರನ್ನೂ ವಿಶ್ವಾಸಕ್ಕೆತೆಗೆದುಕೊಂಡು ಕೆಲಸಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಸಂಗಣ್ಣ ಕರಡಿ ಬಿಜೆಪಿ ಬಿಡಲ್ಲ, ಸ್ಪರ್ಧೆ ಮಾಡಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

20 ಸ್ಥಾನ ಗೆಲ್ಲುವುದು ಗ್ಯಾರಂಟಿ- ಸಿಎಂ: ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ ಹಾಗೂ ಹೆಣ್ಣು ಮಕ್ಕಳು, ತಾಯಂದರಿಗೆ ಧನ್ಯತೆ ಇದೆ. ಇವರು ಯಾರೂನಮ್ಮಕೈ ಬಿಡಲ್ಲ.ವಿಧಾನಸಭೆಯಲ್ಲಿ 136 ಸ್ಥಾನ ಗೆದ್ದಂತೆ ಲೋಕಸಭೆಯಲ್ಲಿ 20 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ಗೆ ಅವಕಾಶಗಳಿವೆ. ಇದನ್ನು ಸಾಧಿಸಲು ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಎಂದು ಕರೆ ನೀಡಿದರು. ಈ ವೇಳೆ ಬಾಗಲಕೋಟೆ, ಬೆಂಗಳೂರು ಸೆಂಟ್ರಲ್, ಧಾರವಾಡ, ಚಿತ್ರದುರ್ಗ, ಉಡುಪಿ, ಅಭ್ಯರ್ಥಿಗಳು ಹಾಜರಿದ್ದರು.

ಮೈತ್ರಿ ಬಳಿಕ ದಳ ಮೊದಲ ಆತ್ಮಹತ್ಯೆ ಪ್ರಯತ್ನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಮ್ಮ ಅಳಿಯ ಡಾ.ಸಿ.ಎನ್‌. ಮಂಜುನಾಥ್‌ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದು ಜೆಡಿಎಸ್‌ ಪಕ್ಷದ ಮೊದಲ ಆತ್ಮಹತ್ಯೆ ಪ್ರಯತ್ನವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಟುಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭೆ ಚುನಾವಣಾ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಲಿದೆ ಎಂಬುದು ನನಗೆ ಮೊದಲೇ ಗೊತ್ತಿದ್ದ ವಿಚಾರ. ದೇವೇಗೌಡರು ತಮ್ಮ ಅಳಿಯನನ್ನು ಬಿಜೆಪಿಯ ಚಿಹ್ನೆಯಡಿ ಲೋಕಸಭಾ ಚುನಾವಣಾ ಕಣಕ್ಕಿಳಿಸಿದ್ದು ಜೆಡಿಎಸ್‌ನ ಮೊದಲ ಆತ್ಮಹತ್ಯೆ ಯತ್ನವಾಗಿದೆ. ಇದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಅವರ ಪಕ್ಷಕ್ಕೆ ದೊಡ್ಡ ಮುಜುಗರ ಉಂಟಾಗಿದೆ’ ಎಂದರು,

Neuralink: ಮೆದುಳಿಗೆ ಚಿಪ್‌ ಹಾಕಿದ ಬಳಿಕ ತಲೇಲಿ ಯೋಚಿಸಿ ಕಂಪ್ಯೂಟರಲ್ಲಿ ಚೆಸ್‌ ಆಡಿದ!

‘ಜೆಡಿಎಸ್‌ ಪಕ್ಷಕ್ಕೆ ಅದರದ್ದೇ ಶಕ್ತಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಹಾಲಿ ಶಾಸಕರು, ಸಂಸದರು ಇದ್ದಾರೆ. ಆ ಶಕ್ತಿ ಬಿಜೆಪಿಯವರಿಗೆ ಬೇಕಾಗಿತ್ತು. ಅದಕ್ಕೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಸ್ಟೈಲ್‌ ಇರೋದೆ ಹೀಗೆ. ಕರ್ನಾಟಕ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಲ್ಲೂ ಹೀಗೆ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಹೇಳಿದರು. ಇದೇ ವೇಳೆ, ‘ಮೈತ್ರಿ ಅಂದ ಮೇಲೆ ಎಲ್ಲರೂ ಮತ ಹಾಕಲೇಬೇಕಿತ್ತು. ಆದರೆ, ಅದು ಅವರ ಪಕ್ಷದ ತೀರ್ಮಾನ, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಮಧ್ಯಪ್ರವೇಶಿಸುವುದು ಸರಿಹೋಗುವುದಿಲ್ಲ’ ಎಂದೂ ನುಡಿದರು.

Latest Videos
Follow Us:
Download App:
  • android
  • ios