ಪ್ರಜಾಧ್ವನಿ ಯಾತ್ರೆಯ ಬಸ್‌ ಶುಕ್ರವಾರ ಮುಳಬಾಗಿಲಿಗೆ ಹೋಗುವ ಮಾರ್ಗ ಮಧ್ಯದ ಕೋಲಾರದ ಪವನ್‌ ಕಾಲೇಜು ಮುಂಭಾಗ ಡಿ.ಕೆ.ಶಿವಕುಮಾರ್‌ ಅವರನ್ನು ಕೆಎಚ್‌.ಮುನಿಯಪ್ಪ ಮತ್ತು ಅವರ ಅಭಿಮಾನಿಗಳು ಸ್ವಾಗತಿಸಿದರು.

ಕೋಲಾರ (ಫೆ.4) : ಪ್ರಜಾಧ್ವನಿ ಯಾತ್ರೆಯ ಬಸ್‌ ಶುಕ್ರವಾರ ಮುಳಬಾಗಿಲಿಗೆ ಹೋಗುವ ಮಾರ್ಗ ಮಧ್ಯದ ಕೋಲಾರದ ಪವನ್‌ ಕಾಲೇಜು ಮುಂಭಾಗ ಡಿ.ಕೆ.ಶಿವಕುಮಾರ್‌ ಅವರನ್ನು ಕೆಎಚ್‌.ಮುನಿಯಪ್ಪ ಮತ್ತು ಅವರ ಅಭಿಮಾನಿಗಳು ಸ್ವಾಗತಿಸಿದರು.

ಈ ವೇಳೆ ಮುಳಬಾಗಿಲು ಕಾರ್ಯಕ್ರಮಕ್ಕೆ ಆಗಮಿಸುವಂತೆ ಬಸ್‌ ಹತ್ತಲು ಡಿ.ಕೆ.ಶಿವಕುಮಾರ್‌ ಮುನಿಯಪ್ಪಗೆ ಸೂಚಿಸಿದಾಗ ಅದನ್ನು ನಿರಾಕರಿಸಿದ ಮುನಿಯಪ್ಪ ಮತ್ತು ಅಭಿಮಾನಿಗಳು ಮುಳಬಾಗಿಲಿನಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳ ಬದಲಾವಣೆ ಸಂದರ್ಭದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಹಾಗೂ ಈ ಹಿಂದೆ ಇದ್ದ ಬ್ಲಾಕ್‌ ಅಧ್ಯಕ್ಷರುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಕೆಲಸ ಮಾಡಿದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಮತ್ತು ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೀರಿ, ಆದ ಕಾರಣ ನಾನು ಮುಳಬಾಗಿಲಿಗೆ ಬರುವುದಿಲ್ಲ ಎಂದು ಎಂದಿದ್ದಾರೆ.

Prajadhwani yatre: ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಸಂಪೂರ್ಣ ವಿಫಲ: ಡಿ.ಕೆ.ಶಿವಕುಮಾರ

ಅದನ್ನೆಲ್ಲ ಕುಳಿತು ಮಾತನಾಡೋಣ, ನೀವು ಬಸ್‌ ಹತ್ತಿ ಎಂದು ಡಿಕೆಶಿ ಸೂಚಿಸಿದರು, ಮುನಿದ ಮುನಿಯಪ್ಪ ಹಠಕ್ಕೆ ಬಿದ್ದು ನಾನು ಬರುವುದಿಲ್ಲ. ಕೆಜಿಎಫ್‌ಗೆ ಬರುತ್ತೇನೆಂದು ಹಠಕ್ಕೆ ಬಿದ್ದಾಗ, ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಮತ್ತು ಜಿಲ್ಲಾಧ್ಯಕ್ಷ ಲಕ್ಷ್ಮೇನಾರಾಯಣ ಜೊತೆಗೂಡಿ ಮುನಿಯಪ್ಪರನ್ನು ಬಲವಂತವಾಗಿ ಬಸ್‌ ಹತ್ತಿಸಿದ್ದಾರೆ, ನಾನು ಕುರುಡುಮಲೆ ದೇವಾಲಯಕ್ಕೆ ಬಂದು ವಾಪಸ್ಸು ಕೆಜಿಎಫ್‌ಗೆ ಬರುತ್ತೇನೆಂದು. ಕುರುಡುಮಲೆ ದೇವಾಲಯದಲ್ಲಿ ಡಿಕೆಶಿ ಜೊತೆಗೆಯಲ್ಲಿ ಕಾಣಿಸಿಕೊಂಡ ಮುನಿಯಪ್ಪ ಕುರುಡುಮಲೆಯಲ್ಲಿಯೇ ಉಳಿದುಕೊಂಡು ಇತರೇ ದೇವಾಲಯಗಳಿಗೆ ತೆರಳುವ ನೆಪದಲ್ಲಿ ಮುಳಬಾಗಿಲು ಕಾರ್ಯಕ್ರಮಕ್ಕೆ ತೆರಳದೆ ಕೆಜಿಎಫ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಡಿಕೆಶಿ ವಿರುದ್ಧ ಮುನಿಯಪ್ಪ ಬೆಂಬಲಿಗರ ಆಕ್ರೋಶ

ಡಿಕೆಶಿ ಪ್ರಜಾಧ್ವನಿ ಬಸ್‌ನಿಂದ ಕೆಳಗಿಳಿದು ಕೆ.ಹೆಚ್‌.ಮುನಿಯಪ್ಪ ಅವರನ್ನು ಬಸ್‌ ಹತ್ತಿಸುವ ಸಂದರ್ಭದಲ್ಲಿ ಕೆಎಚ್‌ ಅಭಿಮಾನಿಗಳು ಇದುವೆಗೂ ಮಾಡಿದ ಘನಕಾರ್ಯಗಳು ಸಾಕು, ಮತ್ತೆ ಮತ್ತೆ ನಮ್ಮನ್ನು ಹಾಳು ಮಾಡಬೇಡಿ, ಸಾಕು ನಿಮ್ಮ ಸಹವಾಸ ಎಂದು ಕಾರ್ಯಕರ್ತರು ಕೂಗಾಡುತ್ತಿದ್ದರು. ಶಾಸಕರ ಹೆಗಲ ಮೇಲೆ ಶನಿಮಹಾತ್ಮ ಕುಳಿತಿದ್ದಾನೆ: ಸಂಸದ ಮುನಿಸ್ವಾಮಿ