ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದ ಪಕ್ಷ ನಿಮ್ಮೊಂದಿಗೆ ಇದೆ. ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿದ್ದಾರೆ, ಎಲ್ಲ ವರ್ಗದವರಿಗೆ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ, ಅನ್ನದಾಸೋಹ ಕಾರ್ಯಕ್ರಮ ಮಾಡಿದ್ದೆವು, ಅದನ್ನು ಬಿಜೆಪಿಯವರು ಕಡಿಮೆ ಮಾಡಿದರು, ನಾವು ಸಿದ್ದರಾಮಯ್ಯನವರು ನಿರ್ಧಾರ ಮಾಡಿದ್ದೇವೆ. ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕೋಲಾರ (ಫೆ.4) : ನನಗೆ ಪವಿತ್ರವಾದ ದಿನವೆಂದು ಪುರಂದರ ದಾಸರ ಕೀರ್ತನೆ ಹೇಳಿದ ಡಿ.ಕೆ. ಶಿವಕುಮಾರ್ ಮುಳಬಾಗಿಲಿನ ವಿಘ್ನ ವಿನಾಯಕನ ದರ್ಶನ ಮತ್ತು ದರ್ಗಾಕ್ಕೆ ಹೋಗಿ ಆಂಜನೇಯನ ದರ್ಶನಕ್ಕೆ ಹೋಗಿ ನಿಮ್ಮ ದರ್ಶನಕ್ಕೆ ಅವಕಾಶ ಸಿಕ್ಕಿದೆ, ನಾವೆಲ್ಲ ಬಂದಿರೋದು ನಿಮ್ಮ ಜಯಕಾರ ಹೂವಿನ ಹಾರಕ್ಕಲ್ಲ, ಮುಳಬಾಗಿಲಿನ ಜನರ ಜೊತೆ ನಾವಿದ್ದೇವೆ ಎಂದು ಹೇಳಲು ನಾವು ಬಂದಿದ್ದೇವೆ. ನಿಮ್ಮ ಸಮಸ್ಯೆ ಆಲಿಸಲು ನಾವು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದ ಎಂ.ಜಿ ಮಾರುಕಟ್ಟೆಯ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಯಾತ್ರೆಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಜಾಧ್ವನಿಯಾಗಿ ನಾವೆಲ್ಲ ನಿಲ್ಲಬೇಕು ಎಂದು ಈ ಪ್ರವಾಸ ಮಾಡುತಿದ್ದೇವೆ, ಜನಸಂಘಟನೆ ಮಾಡೋದು ಸುಲಭವಲ್ಲ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ರನ್ನ ಡಿಕೆಶಿ ಶ್ಲಾಘಿಸಿದರು.
ಶಾಸಕರ ಹೆಗಲ ಮೇಲೆ ಶನಿಮಹಾತ್ಮ ಕುಳಿತಿದ್ದಾನೆ: ಸಂಸದ ಮುನಿಸ್ವಾಮಿ...
ಕೋಲಾರ ಜಿಲ್ಲೆಯಲ್ಲಿ ಬಹಳ ದಣಿದ ಜನ ಇದ್ದೀರಾ, ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ವಿಫಲವಾಗಿದೆ, 15 ಲಕ್ಷವಲ್ಲ ಬರೀ ಅಕೌಂಟ್ ಓಪನ್ ಆಯಿತು, ಕರ್ನಾಟಕದಲ್ಲಿ ಆಪರೇಷನ್ ಮೂಲಕ ಬಂದ ಸರ್ಕಾರ ಇದೆ, ಜಾತ್ಯತೀತ ಸರ್ಕಾರಕ್ಕಾಗಿ ಜೆಡಿಎಸ್‌ಗೆ ಬಲ ನೀಡಿದ್ದೆವು, ಆದರೆ ಅವರಿಂದ ಸರ್ಕಾರ ಉಳಿಸಲು ಸಾಧ್ಯವಾಗಲಿಲ್ಲ, ಕುಮಾರಸ್ವಾಮಿಯವರೇ ನಂಬಿದ ಜನರಿರುತ್ತಾರೆ, ಈ ದೇಶಕ್ಕೆ ಕಾಂಗ್ರೆಸ್ ಮಾತ್ರ ಬೇಕಿರೋದು. ಬಿಜೆಪಿ ಆಡಳಿತ, ಕುಮಾರಸ್ವಾಮಿ ಆಡಳಿತ ಎಲ್ಲವನ್ನೂ ನೋಡಿದ್ದಾರೆ ಎಂದರು.
ಹತ್ತು ಕೆಜಿ ಅಕ್ಕಿ ನೀಡುತ್ತೇವೆ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದ ಪಕ್ಷ ನಿಮ್ಮೊಂದಿಗೆ ಇದೆ. ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿದ್ದಾರೆ, ನಾವೆಲ್ಲ ನಮ್ಮ ನೀರು ನಮ್ಮ ಹಕ್ಕು ಕಾರ್ಯಕ್ರಮಕ್ಕೂ ಬಂದಿದ್ದೀರಾ. ಸಿದ್ದರಾಮಯ್ಯರ ಸರ್ಕಾರದ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರು ಹರಿಸಿದ್ದಾರೆ, ಎಲ್ಲ ವರ್ಗದವರಿಗೆ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ, ಅನ್ನದಾಸೋಹ ಕಾರ್ಯಕ್ರಮ ಮಾಡಿದ್ದೆವು, ಅದನ್ನು ಬಿಜೆಪಿಯವರು ಕಡಿಮೆ ಮಾಡಿದರು, ನಾವು ಸಿದ್ದರಾಮಯ್ಯನವರು ನಿರ್ಧಾರ ಮಾಡಿದ್ದೇವೆ. ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪೆಟ್ರೋಲ್, ಡೀಸೆಲ್ ಹೆಚ್ಚಾಗಿದೆ, ಉಪ್ಪಿಗೂ ಜಿಎಸ್‌ಟಿ ಹಾಕಿದ್ದಾರೆ, ಚುನಾವಣೆಯಷ್ಟೆಮುಖ್ಯ ಅಲ್ಲ, ಎರಡೂ ಪಕ್ಷಗಳ ಆಡಳಿತ ನೋಡಿದ್ದೀರಾ, ಏನೂ ಪ್ರಯೋಜನ ಆಗಿಲ್ಲ ಎಂದ ಅವರು ನಾವು ಇನ್ನೂರು ಯುನಿಟ್ ಉಚಿತ ಕರೆಂಟ್ ನೀಡುತ್ತೇವೆ ಎಂದು ಸ್ಪಷ್ಪಪಡಿಸಿದರು.
ನಂದಿಬೆಟ್ಟದ ರೋಪ್ ವೇಗೆ ಈ ತಿಂಗಳಲ್ಲಿ ಭೂಮಿಪೂಜೆ; ಸಚಿವ ಸುಧಾಕರ್
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಜಿ.ರಾಮಲಿಂಗಾರೆಡ್ಡಿ, ಎಂ.ಆರ್.ಸೀತಾರಾಮ್, ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್, ಶಾಸಕರಾದ ಹೆಚ್.ನಾಗೇಶ್, ಕೆ.ವೈ.ನಂಜೇಗೌಡ, ಎಂ.ಎಲ್.ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ನಸೀರ್ ಅಹ್ಮದ್, ಟಿಕೆಟ್ ಅಕಾಂಕ್ಷಿಗಳಾದ ಎಸ್.ವೈ.ಶಂಭಯ್ಯ, ಮದ್ದೂರಪ್ಪ, ಕೊತ್ತೂರು ಆರ್.ಅಂಜುಬಾಸ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಶಾಸಕ ಚಿಂತಾಮಣಿ ಡಾ.ಎಂ.ಸಿ.ಸುಧಾಕರರೆಡ್ಡಿ, ಮುಖಂಡರಾದ ಸಲೀಂ ಅಹ್ಮದ್, ರಾಣಿಸತೀಶ್, ವಿ.ಎಸ್.ಉಗ್ರಪ್ಪ, ಚಂದ್ರಶೇಖರ್, ಎಂ. ಕೃಷ್ಣಪ್ಪ, ನಾರಾಯಣಸ್ವಾಮಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಕಾಂಗ್ರೆಸ್‌ನ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಲಕ್ಷಿತ್ರ್ಮೕನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಸಿ.ನೀಲಕಂಠೇಗೌಡ, ಅಮಾನುಲ್ಲಾ, ಸೇವಾದಳ ರಾಜ್ಯ ಮುಖಂಡ ಸಿ.ಎಂ.ವೆಂಕಟರಾಮೇಗೌಡ ಗಾಂಧಿ, ಉತ್ತನೂರು ಶ್ರೀನಿವಾಸ್ ಇದ್ದರು.
