ಸಿದ್ದರಾಮಯ್ಯರೇ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ, ಕೇಜ್ರಿವಾಲ್ ಸ್ಥಿತಿ ಬರೋದು ಬೇಡ: ಪ್ರತಾಪ್ ಸಿಂಹ
ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ಆದೇಶ ಹೈಕೋರ್ಟ್ ಎತ್ತಿ ಹಿಡಿದಿದ್ದು ತಕ್ಷಣ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಲಿ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಪುತ್ತೂರು (ಸೆ.24): ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ಆದೇಶ ಹೈಕೋರ್ಟ್ ಎತ್ತಿ ಹಿಡಿದಿದ್ದು ತಕ್ಷಣ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಲಿ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಮುಡಾ ಹಗರಣ ವಿಚಾರ ಇಂದು ಹೈಕೋರ್ಟ್ ತೀರ್ಪು ಹಿನ್ನೆಲೆ ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಪತ್ನಿ ಹೆಸರಿನಲ್ಲಿರುವ ಮಾಡಿದ 14 ಸೈಟ್ ಸರ್ಕಾರಕ್ಕೆ ಹಸ್ತಾಂತರ ಮಾಡಿ. ಈ ಸಲಹೆಯನ್ನು ಹಿಂದೆಯೇ ಸಿದ್ದರಾಮಯ್ಯ ಅವರಿಗೆ ಗಿಣಿ ಹೇಳಿದಂತೆ ಹೇಳಿದ್ದೆ. ಆದ್ರೆ ಅವರು ನನ್ನ ಸಲಹೆ ಕೇಳಲಿಲ್ಲ, ಬದಲಾಗಿ ಅವರು ತಿಳಿಗೇಡಿಗಳ ಸಲಹೆಯನ್ನ ನೆಚ್ಚಿಕೊಂಡು ಕುಳಿತರು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಇಂತಹ ಸ್ಥಿತಿ ಬಂದಿದೆ. ಅವತ್ತೇ ಆ ಸೈಟ್‌ಗಳನ್ನು ಹಸ್ತಾಂತರ ಮಾಡಿದ್ದರೆ ಎಲ್ಲಾ ಪಕ್ಷದ ಕಳ್ಳರು ಸಿಕ್ಕಿಹಾಕಿಕೊಳ್ಳುತ್ತಿದ್ದರು. ಸೈಟ್‌ಗಳನ್ನು ಹಸ್ತಾಂತರ ಮಾಡಿದ್ದರೆ ಸಿಎಂ ಪಟ್ಟ ಉಳಿಯುತ್ತಿತ್ತು. ಕಳಂಕದಿಂದ ಮುಕ್ತರಾಗುತ್ತಿದ್ದರು. ಆದ್ರೆ ಸಿದ್ದರಾಮಯ್ಯ ಅವರು ನನ್ನ ಕಿವಿ ಮಾತು ಕೇಳಲಿಲ್ಲ. ಇದೀಗ ಅವರಾಗೇ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದರು
'ಸಿಎಂ ಮೇಲೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ..' ಡಿಸಿಎಂ ಡಿಕೆ ಶಿವಕುಮಾರ್!
ಸಿಎಂ ಸಿದ್ದರಾಮಯ್ಯ ಸ್ವಯಂಕೃತ ಅಪರಾಧ ಮಾಡಿದ್ದಾರೆ. ಇನ್ನು ವಿಳಂಬ ಮಾಡಬೇಡಿ ತಕ್ಷಣ ರಾಜೀನಾಮೆ ನೀಡಿ. ನೀವು ಪಟ್ಟಕ್ಕೆ ಅಂಟಿಕೊಂಡು ಹೇಮಂತ್ ಸೊರೇನ್, ಅರವಿಂದ ಕೇಜ್ರಿವಾಲ್ ಹಾದಿಯನ್ನು ಹಿಡಿಯಬಹುದು. ಆದರೆ ಅವರು ನಿನ್ನೆ ಮೊನ್ನೆ ಬಂದ ರಾಜಕಾರಣಿಗಳು. ಅವರಲ್ಲಿ ಯಾವುದೇ ಮೌಲ್ಯಯುತ ರಾಜಕಾರಣವಿಲ್ಲ. ನಿಮ್ಮದು ಅವರಂತಲ್ಲ. ನಾವು ನಿಮ್ಮನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತೇವೆ ಹೊರತು ವ್ಯಕ್ತಿಗತವಾಗಿ ಅಲ್ಲ. ನಿಮ್ಮ ಬಡವರ ಪರ ಕಾಳಜಿಯನ್ನು ನಾವು ಮೆಚ್ಚಿಕೊಂಡಿದ್ದೇವೆ. ನೀವು ಕಳಪೆ ರಾಜಕಾರಣಿಗಳನ್ನು ಅನುಕರಿಸಬೇಡಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ. ತನಿಖೆ ಮುಗಿದ ಬಳಿಕ ಬೇಕಾದರೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ. ಹಾಗೇ ಮಾಡದೇ ಹೋದಲ್ಲಿ ನಿಮ್ಮ 45 ವರ್ಷದ ರಾಜಕಾರಣ ಕಳಂಕಯುತ ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಕೋರ್ಟ್ ತೀರ್ಪಿಗೆ ಗೌರವ ಇದೆ, ಆದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡೋದಿಲ್ಲ: ರಾಮಲಿಂಗಾ ರೆಡ್ಡಿ
ರಾಜಕಾರಣದಲ್ಲಿ ಶತ್ರುಗಳು ಯಾವತ್ತೂ ಅಕ್ಕಪಕ್ಕದಲ್ಲಿದ್ದಾರೆ. ಸಂಸದನಾಗಿ ನನಗೂ ಅನುಭವ ಇದೆ. ನಿಮ್ಮ ಶತ್ರುಗಳು ಬಿಜೆಪಿ-ಜೆಡಿಎಸ್‌ನಲ್ಲಿಲ್ಲ, ನಿಮ್ಮ ಅಕ್ಕಪಕ್ಕದಲ್ಲಿ ಇದ್ದಾರೆ. ಕಾಂಗ್ರೆಸ್‌ನಲ್ಲೇ ಇದ್ದಾರೆ. ನಿಮ್ಮ ಜೊತೆಗಿದ್ದೇವೆ ಎನ್ನುವವರನ್ನು ನಂಬಬೇಡಿ. ಅವರೆಲ್ಲರಿಗಿಂತಲೂ ನೀವು ಉತ್ತಮ ರಾಜಕೀಯ ನಡೆಸಿದವರು, ಹಾಗಾಗಿ ದಯವಿಟ್ಟು ರಾಜೀನಾಮೆ ಕೊಡಿ ಎಂದು ಮನವಿ ಮಾಡಿದರು.