ಮುಡಾ ಹಗರಣ: ನಿಮಗೆ ಕಿಂಚಿತ್ ಮಾನ-ಮರ್ಯಾದೆ ಇದ್ರೆ ರಾಜೀನಾಮೆ ಕೊಡಿ - ಸಿಎಂ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಕಿಡಿ
ಇಡಿ, ಐಟಿ ಕೇಂದ್ರ ಸರಕಾರದ ಏಜೆಂಟ್ ರೀತಿ ವರ್ತಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ಬೊಗಳುತ್ತಾರೆ. ಈಗ ಹೈಕೋರ್ಟ್ ನ್ಯಾಯಧೀಶರ ವಿರುದ್ಧ ಏನು ಹೇಳ್ತೀರಾ? ನ್ಯಾಯಾಧೀಶರ ವಿರುದ್ಧವೂ ಪ್ರತಿಭಟನೆ ಮಾಡ್ತೀರಾ? ಸಿದ್ದರಾಮಯ್ಯನವರೇ ನೀವು ಕಳ್ಳರು, ಎಂದು ಹೈ ಕೋರ್ಟ್ ಘಂಟಾಘೋಷವಾಗಿ ಹೇಳಿದಂತಿದೆ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು (ಸೆ.24): ಮೈಸೂರು ಮುಡಾ ಹಗರಣ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದ ಪ್ರಾಸಿಕ್ಯೂಷನ್ ಅರ್ಜಿ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿರುವ ಹಿನ್ನೆಲೆ ಸಿಎಂ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಂಗಳೂರಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಸಿದ್ದರಾಮಯ್ಯ ನಾನ್ಯಾಕೆ ರಾಜೀನಾಮೆ ಕೊಡಲಿ ಎಂದು ಕೇಳುತ್ತಾರೆ. ಆದರೆ ಇದೇ ಸಿದ್ದರಾಮಯ್ಯ ಈ ಹಿಂದಿನ ಮುಖ್ಯಮಂತ್ರಿಗಳ ಮೇಲೆ ಆರೋಪ ಬಂದಾಗ ಕುರ್ಚಿ ಬಿಟ್ಟು ತೊಲಗಿ ಅಂತಾ ಹೇಳಿದ್ದರು. ಅದೇ ಕಾನೂನು ನಿಮಗೂ ಅನ್ವಯವಾಗುತ್ತೆ ಮೊದಲು ಕುರ್ಚಿ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಪ್ರಕರಣ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ಮುಂದಿರುವ ಆಯ್ಕೆಗಳೇನು?
ಇಡಿ, ಐಟಿ ಕೇಂದ್ರ ಸರಕಾರದ ಏಜೆಂಟ್ ರೀತಿ ವರ್ತಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ಬೊಗಳುತ್ತಾರೆ. ಈಗ ಹೈಕೋರ್ಟ್ ನ್ಯಾಯಧೀಶರ ವಿರುದ್ಧ ಏನು ಹೇಳ್ತೀರಾ? ನ್ಯಾಯಾಧೀಶರ ವಿರುದ್ಧವೂ ಪ್ರತಿಭಟನೆ ಮಾಡ್ತೀರಾ? ಸಿದ್ದರಾಮಯ್ಯನವರೇ ನೀವು ಕಳ್ಳರು, ಎಂದು ಹೈ ಕೋರ್ಟ್ ಘಂಟಾಘೋಷವಾಗಿ ಹೇಳಿದಂತಿದೆ. ಕಿಂಚಿತ್ ಮಾನ-ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಉಳಿಸಿಕೊಳ್ಳಿ ಎಂದು ಹರಿಹಾಯ್ದರು.
ನಾನು ಭ್ರಷ್ಟಾಚಾರ ಮಾಡಿಲ್ಲ, ನನ್ನಷ್ಟು ಮಿಸ್ಟರ್ ಕ್ಲೀನ್ ಯಾರು ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದಿರಿ. ಮೇಲ್ಮನವಿ, ಸುಪ್ರೀಂ ಕೋರ್ಟ್ ಎಂದು ಇದೆಲ್ಲ ಕಾಲಹರಣ ಮಾಡುವ ಬದಲು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ. ರಾಜೀನಾಮೆ ಕೊಡದಿದ್ರೆ ಬಿಜೆಪಿ ಇನ್ನಷ್ಟು ಪ್ರತಿಭಟನೆ ಹಮ್ಮಿಕೊಳ್ಳುತ್ತೆ. ನಾವು ಸಿದ್ದರಾಮಯ್ಯರನ್ನು ಆ ಕುರ್ಚಿಯಿಂದ ತೆಗೆದೇ ಸಿದ್ಧ ಎಂದು ಸವಾಲು ಹಾಕಿದರು.
ಅದೊಂದು ಕಾಲ ಇತ್ತು 'ಬ್ರಿಟಿಷರೆ ಭಾರತ ಬಿಟ್ಟು ತೊಲಗಿ' ಎಂದು ಹೇಳುತ್ತಿದ್ದರು. ಇದೀಗ ಕಾಲ ಬದಲಾಗಿದೆ. 'ಸಿದ್ದರಾಮಯ್ಯರೇ ಕುರ್ಚಿ ಬಿಟ್ಟು ತೊಲಗಿ' ಎಂದು ಹೇಳಬೇಕಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯರೇ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ, ಕೇಜ್ರಿವಾಲ್ ಸ್ಥಿತಿ ಬರೋದು ಬೇಡ: ಪ್ರತಾಪ್ ಸಿಂಹ
ಪೊಲೀಸರ ವಿರುದ್ಧವೂ ಕಿಡಿ:
ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಕೆಳಗೆ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳು ಅವರ ವಿರುದ್ಧ ತನಿಖೆ ಮಾಡುತ್ತಾರೆಯೇ? ಕರ್ನಾಟಕ ಪೊಲೀಸ್ ಇಲಾಖೆ ಮೇಲೆ ನಮಗೆ ವಿಶ್ವಾಸವಿಲ್ಲ.