Asianet Suvarna News Asianet Suvarna News

ಮುಡಾ ಪ್ರಕರಣ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ಮುಂದಿರುವ ಆಯ್ಕೆಗಳೇನು?

ಮುಡಾ ಹಗರಣದಲ್ಲಿ ಏಕ ಸದಸ್ಯ ಪೀಠದಲ್ಲಿ ಹಿನ್ನೆಲೆ ಆಗಿರುವ ಹಿನ್ನೆಲೆ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದು, ಅಲ್ಲೂ ಪರಿಹಾರ ಸಿಗದಿದ್ದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇಬಹುದು. ಹೀಗಾಗಿ ಸುಪ್ರೀಂ ತೀರ್ಪು ಬರುವತನ ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ.

muda case will karnataka cm siddaramaiah resign rav
Author
First Published Sep 24, 2024, 6:32 PM IST | Last Updated Sep 24, 2024, 7:02 PM IST

Muda case Karnataka CM siddaramaiah: ಮೈಸೂರು ಮುಡಾ ಹಗರಣ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದ ಪ್ರಾಸಿಕ್ಯೂಷನ್ ಅರ್ಜಿ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಮೈಸೂರು ಮುಡಾ ಹಗರಣ ಪ್ರಕರಣದಲ್ಲಿ ರಾಜ್ಯ  ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠದಿಂದ ಮಂಗಳವಾರ (24 ಸೆಪ್ಟೆಂಬರ್ 2024) ವಜಾಗೊಂಡಿದ್ದು. ಇದೀಗ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಅಥವಾ ರಾಜೀನಾಮೆ ನೀಡದೇ ಕಾನೂನು ಹೋರಾಟ ಮುಂದುವರಿಸುತ್ತಾರಾ? ಮುಂದಿರುವ ಆಯ್ಕೆಗಳೇನು ಎಂಬುದು ಸದ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.  ಹೈಕೋರ್ಟ್ ನಲ್ಲಿ ಸಿದ್ದರಾಮಯ್ಯರ ಮನವಿ ವಜಾಗೊಳಿಸುತ್ತಿದ್ದಂತೆ ಇತ್ತ ಕರ್ನಾಟಕ ಬಿಜೆಪಿ-ಜೆಡಿಎಸ್ ರಾಜ್ಯಾದ್ಯಂತ ಪ್ರತಿಭಟನೆಗಳಿದಿದ್ದು ರಾಜೀನಾಮೆಗೆ ಆಗ್ರಹಿಸಿದೆ.

ಬೇರೆಯವರಿಗೆ ಇಲ್ಲದ ನೈತಿಕತೆ ಸಿದ್ದರಾಮಯ್ಯಗೆ ಯಾಕೆ?: ಸಚಿವ ಎಂಬಿ ಪಾಟೀಲ್

 ಹೈಕೋರ್ಟ್‌ನಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ದ್ವಿಸದಸ್ಯ ಪೀಠದ ಮುಂದೆ ನಾಳೆ ಅಂದರೆ ಬುಧವಾರ (25 ಸೆಪ್ಟೆಂಬರ್ 2024) ಮೇಲ್ಮನವಿ ಸಲ್ಲಿಸಬಹುದು. ಮೂಲಗಳ ಪ್ರಕಾರ ಈಗಾಗಲೇ ಸಿಎಂ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಈ ವಿಚಾರವಾಗಿ ತಜ್ಞರೊಂದಿಗೆ, ಪಕ್ಷದ ಶಾಸಕರು ಸಚಿವರೊಂದಿಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಮಂಗಳವಾರ ತಿರಸ್ಕರಿಸಿದೆ. ವೈಯಕ್ತಿಕ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲು ಅನುಮತಿ ನೀಡುವ ಹಕ್ಕು ರಾಜ್ಯಪಾಲರಿಗೆ ಇದೆ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪು ಬರುವತನಕ ರಾಜೀನಾಮೆ ನೀಡಲ್ಲ?

ಇಂದು ಏಕಸದಸ್ಯ ಪೀಠದಲ್ಲಿ ಹಿನ್ನೆಡೆಯಾಗಿದ್ರು. ಮೇಲ್ಮನವಿ ಸಲ್ಲಿಸಲು ಮುಂದೆ ಅವಕಾಶಗಳಿವೆ. ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲೂ ಹಿನ್ನೆಡೆಯಾದ್ರೆ ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಬಹುದು. ನಾಳೆ ಒಂದು ವೇಳೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರೆ, ಈ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಕೆಳ ನ್ಯಾಯಾಲಯದಲ್ಲಿ ವಿಚಾರಣೆಗೆ ತಡೆ ನೀಡುವಂತೆ ಮೇಲ್ಮನವಿ ಸಲ್ಲಿಸಬಹುದು. ಉಭಯ ಪೀಠ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದರೆ ಸಿದ್ದರಾಮಯ್ಯ ಅವರಿಗೆ ಸಮಾಧಾನ ಸಿಗಲಿದೆ. ಒಂದು ವೇಳೆ ದ್ವಿಸದಸ್ಯ ಪೀಠದಿಂದಲೂ ಪರಿಹಾರ ನೀಡದಿದ್ದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಸಿಎಂ ಪಾಳಯ ಸ್ಪಷ್ಟಪಡಿಸಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಹೈಕೋರ್ಟ್ ವಜಾಗೊಳಿಸಿದ ಬಳಿಕ ಸಿಎಂ ಹೇಳಿದ್ದೇನು?

  • ಹೈಕೋರ್ಟ್‌ನ ಸಂಪೂರ್ಣ ಆದೇಶ ಇನ್ನೂ ಓದಿಲ್ಲ. ಸಂಪೂರ್ಣ ಆದೇಶವನ್ನು ಓದಿದ ನಂತರ ನಾನು (ಪತ್ರಕರ್ತರ) ಪ್ರಶ್ನೆಗಳಿಗೆ ಉತ್ತರಿಸುತ್ತೇನೆ.
  • 17ಎ ಅಡಿಯಲ್ಲಿ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಹೇಳಿದೆ. 218 ಮತ್ತು 19 ಪಿಸಿ ಆಕ್ಟ್ ಅಡಿಯಲ್ಲಿ ಅನುಮತಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸೆಕ್ಷನ್ 218 ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ.
  • ತೀರ್ಪನ್ನು ಓದಿದ ನಂತರ, ನಾನು ಕಾನೂನು ತಜ್ಞರು ಮತ್ತು ಸಂಪುಟ ಸಹೋದ್ಯೋಗಿಗಳು, ಪಕ್ಷದ ಮುಖಂಡರು ಮತ್ತು ಹೈಕಮಾಂಡ್‌ನೊಂದಿಗೆ ಮಾತನಾಡುತ್ತೇನೆ ಮತ್ತು ಯಾವ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸುತ್ತೇನೆ.
  • ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಹಣಬಲದಿಂದ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಿದರು ಆದರೆ ಅದು ಯಶಸ್ವಿಯಾಗಲಿಲ್ಲ. 
  • ನಾನು ಬಿಜೆಪಿ ಮತ್ತು ಜೆಡಿಎಸ್‌ಗೆ ಹೆದರುವುದಿಲ್ಲ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ನಾಯಕರು ಜೊತೆಗಿರುವುದರಿಂದ ಅವರ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ. ಸಾರ್ವಜನಿಕರು 136 ಶಾಸಕರ ಜನಾದೇಶ ನೀಡಿದ್ದಾರೆ.
  • ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ನಮ್ಮ ಜನ ಕಲ್ಯಾಣ ಕಾರ್ಯಕ್ರಮಗಳ ವಿರುದ್ಧ. ಗ್ಯಾರಂಟಿ ಯೋಜನೆಗಳ ವಿರುದ್ಧ ಇದ್ದಾರೆ.
  • ಎಲ್ಲೆಲ್ಲಿ ವಿರೋಧ ಪಕ್ಷವಾಗಿದೆಯೋ ಅಲ್ಲೆಲ್ಲ ಸರ್ಕಾರವನ್ನು ಬಿಳಿಸುವ ಕುತಂತ್ರ ನಡೆಸುತ್ತಿದೆ. ಹಲವು ಕಡೆ ಯಶಸ್ಸು ಕಂಡಿದೆ ಆದರೆ ಕರ್ನಾಟಕದಲ್ಲಿ ಹಾಗಾಗುವುದಿಲ್ಲ. ಇಲ್ಲಿನ ಜನರು ಬಂಡೆಯಂತೆ ನಮ್ಮೊಂದಿಗೆ ನಿಂತಿದ್ದಾರೆ. ನಮ್ಮ ಪಕ್ಷದ ಎಲ್ಲಾ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಹೈಕಮಾಂಡ್ ನನ್ನ ಜೊತೆಗಿದ್ದಾರೆ.

ಅರ್ಜಿಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ತನಿಖೆಗೆ ಮತ್ತು ಭಾರತೀಯ ನಾಗರಿಕ ಭದ್ರತಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 218 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಅನುಮತಿ ನೀಡಿ ಆಗಸ್ಟ್ 17 ರಂದು ರಾಜ್ಯಪಾಲರು ಹೊರಡಿಸಿದ ಆದೇಶವನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ತಮ್ಮ ಅಧಿಕೃತ ಕಾರ್ಯಗಳು ಅಥವಾ ಕರ್ತವ್ಯಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಅಧಿಕಾರಿಗಳು ಮಾಡಿದ ಶಿಫಾರಸುಗಳು ಅಥವಾ ನಿರ್ಧಾರಗಳಿಗೆ ಸಂಬಂಧಿಸಿದ ಅಪರಾಧಗಳ ತನಿಖೆಗಾಗಿ ವಿಭಾಗ 17A ಒದಗಿಸುತ್ತದೆ.

ಸಿದ್ದರಾಮಯ್ಯರೇ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ, ಕೇಜ್ರಿವಾಲ್ ಸ್ಥಿತಿ ಬರೋದು ಬೇಡ: ಪ್ರತಾಪ್ ಸಿಂಹ

ಸರಿಯಾದ ಚರ್ಚೆಯಿಲ್ಲದೆ ಅನುಮೋದನೆ ಆದೇಶವನ್ನು ನೀಡಲಾಗಿದೆ, ಇದು ಕಾನೂನನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ 163 ನೇ ವಿಧಿಯ ಅಡಿಯಲ್ಲಿ ಮಂತ್ರಿಗಳ ಪರಿಷತ್ತಿನ ಸಲಹೆಯನ್ನು ಒಳಗೊಂಡಂತೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿಯ ಅರ್ಜಿಯಲ್ಲಿ ಹೇಳಲಾಗಿದೆ.

ಅನುಮತಿ ಆದೇಶವು ದುರುದ್ದೇಶಪೂರಿತವಾಗಿದೆ ಮತ್ತು ರಾಜಕೀಯ ಕಾರಣಗಳಿಗಾಗಿ ಕರ್ನಾಟಕದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಘಟಿತ ಪ್ರಯತ್ನದ ಭಾಗವಾಗಿದೆ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios