ನಿನದೇ ನೆನಪು ದಿನವೂ... ಎಂದ ಸಂಸದ ತೇಜಸ್ವಿ ಸೂರ್ಯ ಭಾವಿ ಪತ್ನಿ: ವಿಡಿಯೋಗೆ ಸಕತ್ ಕಮೆಂಟ್ಸ್
ಸಂಸದ ತೇಜಸ್ವಿ ಸೂರ್ಯ ಅವರ ಭಾವಿ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರ ಗಾಯನವೊಂದು ಟ್ರೆಂಡಿಂಗ್ನಲ್ಲಿದ್ದು, ಇದಕ್ಕೆ ಸಕತ್ ಕಮೆಂಟ್ಸ್ ಬರುತ್ತಿವೆ. ಏನಿದು ವಿಷಯ?
ಸದ್ಯ ರಾಜಕೀಯ ವಲಯದಲ್ಲಿ ಆಡಳಿತ ಪಕ್ಷ- ಪ್ರತಿಪಕ್ಷಗಳ ನಡುವೆ ವಾಕ್ಸಮರದ ನಡೆದೇ ಇರುವ ನಡುವೆಯೇ ಹಾಟ್ ಟಾಪಿಕ್ ಆಗಿರುವುದು ಸಂಸದ ತೇಜಸ್ವಿ ಸೂರ್ಯ ಅವರ ಮದುವೆ. 'ಯಂಗ್ ಆ್ಯಂಡ್ ಡೈನಾಮಿಕ್' ಮತ್ತು 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಎಂದು ಕರೆಸಿಕೊಳ್ಳುತ್ತಿರುವ ಬೆಂಗಳೂರು ದಕ್ಷಿಣ ಸಂಸದ, 34 ವರ್ಷದ ತೇಜಸ್ವಿ ಸೂರ್ಯ ಅವರ ಮದುವೆ ಯಾವಾಗ ಎನ್ನುವುದು ಹಲವರಿಗೆ ಪ್ರಶ್ನೆ ಇತ್ತು. ಇದೀಗ ಕೊನೆಗೂ ಅವರ ಮದುವೆಯ ಬಗ್ಗೆ ರಿವೀಲ್ ಆಗಿದೆ. ಖ್ಯಾತ ಗಾಯಕಿ, , ಭರತನಾಟ್ಯ ಕಲಾವಿದೆ 28 ವರ್ಷದ ಶಿವಶ್ರೀ ಸ್ಕಂದಪ್ರಸಾದ್ ಅವರ ಜೊತೆ ಮದುವೆ ಫಿಕ್ಸ್ ಆಗಿದ್ದು, ಮಾರ್ಚ್ 4ರಂದು ಮದುವೆ ಎಂದು ಹೇಳಲಾಗುತ್ತಿದೆ. ಶಿವಶ್ರಿ ಅವರ ಮೂಲ ಚೆನ್ನೈ ಆಗಿದ್ದರೂ, ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಗಾಯನ ಅವರ ಕಂಠಮಾಧುರ್ಯದಲ್ಲಿ ಮೂಡಿ ಬಂದಿವೆ.
ಕಳೆದ ವರ್ಷದ ಜನವರಿಯಲ್ಲಿ ಅಯೋಧ್ಯೆಯ ಶ್ರೀರಾಮಲಲ್ಲಾ ಉದ್ಘಾಟನೆ ವೇಳೆ ಪೂಜಿಸಲೆಂದೇ ಹೂಗಳ ತಂದೆ ಹಾಡಿನ ಮೂಲಕ ಪ್ರಧಾನಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು ಶಿವಶ್ರೀ ಅವರು. ಇದೀಗ ಶಿವಶ್ರೀ ಯಾರು ಎಂಬ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಟ ಹೆಚ್ಚಾಗಿರುವ ಕಾರಣ, ಅವರ ಹಳೆಯ ವಿಡಿಯೋಗಳೆಲ್ಲಾ ವೈರಲ್ ಆಗುತ್ತಿವೆ. ಯೂಟ್ಯೂಬ್‌ನಲ್ಲಿ ಸುಮಾರು ಎರಡು ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಶಿವಶ್ರೀ ಅವರು ಅದರಲ್ಲಿ ಭರತನಾಟ್ಯ, ಗಾಯನಗಳ ವಿಡಿಯೋ ಶೇರ್ ಮಾಡಿದ್ದಾರೆ. ಅವುಗಳ ಪೈಕಿ ಹಲವು ಈಗ ಟ್ರೆಂಡಿಂಗ್ನಲ್ಲಿವೆ. ಅವುಗಳಲ್ಲಿ ಒಂದು ನಿನದೇ ನೆನಪು ದಿನವೂ ಮನದಲ್ಲಿ ಹಾಡು. 1976ರಲ್ಲಿ ಬಿಡುಗಡೆಗೊಂಡಿರುವ ಡಾ.ರಾಜ್ಕುಮಾರ್ ಅಭಿನಯದ, ರಾಜಾ ನನ್ನ ರಾಜಾ ಚಿತ್ರದ ಹಾಡನ್ನು ಶಿವಶ್ರೀ ಅವರು ಭಾವಪೂರ್ವಕವಾಗಿ ಹಾಡಿದ್ದಾರೆ. ಈ ಹಾಡಿಗೆ ಹಲವಾರು ಮಂದಿ ಕಮೆಂಟ್ಸ್ ಮಾಡುತ್ತಿದ್ದು, ತೇಜಸ್ವಿ ಸೂರ್ಯ ಅವರ ನೆನಪು ಕಾಡುತ್ತಿದೆ ಎಂದು ಗಾಯಕಿಯ ಕಾಲೆಳೆಯುತ್ತಿದ್ದಾರೆ. ಇನ್ನು ಸ್ವಲ್ಪ ದಿನವಷ್ಟೇ ತಡೆದುಕೊಳ್ಳಿ ಮೇಡಂ, ಆಮೇಲೆ ನೆನಪು ಕಾಡುವುದಿಲ್ಲ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.
ಕನಸಿನ ಕನ್ಯೆ ಹೀಗಿರ್ಬೇಕು: ಅಪ್ಪು ಜೊತೆ ಮನದ ಮಾತು ತೆರೆದಿಟ್ಟಿದ್ದ ತೇಜಸ್ವಿ ಸೂರ್ಯ ವಿಡಿಯೋ ವೈರಲ್
ಇನ್ನು ಶಿವಶ್ರೀ ಸ್ಕಂದಪ್ರಸಾದ್ ಕುರಿತು ಹೇಳುವುದಾದರೆ, ಆಗಸ್ಟ್ 1 1996ರಲ್ಲಿ ಜನಿಸಿದ್ದಾರೆ. ಜನಪ್ರಿಯ ಮೃದಂಗ ವಾದಕ ಸೀರ್ಕಾಳಿ ಜೆ. ಸ್ಕಂದಪ್ರಸಾದ್ ಅವರ ಪುತ್ರಿ ಇವರು. ಶಾಸ್ತ್ರ ವಿಶ್ವವಿದ್ಯಾನಿಲಯದಿಂದ ಬಯೋ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯಂನಲ್ಲಿ ಎಂಎ ಪದವಿಯನ್ನು ಪಡೆದಿರುವ ಶಿವಶ್ರೀ ಅವರು ಎಂಎ ಸಂಸ್ಕತ ಅಧ್ಯಯನವನ್ನೂ ಮಾಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಳಗಿರುವ ಇವರು ಹೆಚ್ಚು ಫೇಮಸ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘಿಸಿಕೊಂಡ ಬಳಿಕ. 12 ವರ್ಷವಿರುವಾಗಲೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು ಇವರು! ಮಣಿರತ್ನಂ ನಿರ್ದೇಶನ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1 ಸಿನಿಮಾದಲ್ಲಿ ಮೊದಲ ಬಾರಿಗೆ ಹಿನ್ನೆಲೆ ಗಾಯಕಿಯಾಗಿದ್ದರು. ಇದರಲ್ಲಿ ಎ.ಆರ್ ರೆಹಮಾನ್ ಅವರ ಜೊತೆಯಲ್ಲಿ ಹಾಡು ಹಾಡಿದ್ದರು. ಪೊನ್ನಿಯಿನ್ ಸೆಲ್ವನ್ ಪಾರ್ಟ್ 2 ಕನ್ನಡ ವರ್ಷನ್‌ಗೆ ದನಿ ಕೂಡ ನೀಡಿದ್ದಾರೆ.
ಇಷ್ಟೇ ಅಲ್ಲದೇ, ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಶಿವಶ್ರೀ ಅವರು, 64 ಪ್ರಕಾರದ ಕಲೆಗಳ ಬಗ್ಗೆ ಅರಿವನ್ನು ಮೂಡಿಸುವ ಆಹುತಿ ಎಂಬ ಫೌಂಡೇಷನ್ ನಡೆಸುತ್ತಿದ್ದಾರೆ. ಇದರಲ್ಲಿ ನೃತ್ಯ, ಸಂಗಿತ ಹೇಳಿಕೊಡಲಾಗುತ್ತದೆ. ಸೈಕಲಿಂಗ್, ಟ್ರೆಕ್ಕಿಂಗ್, ಮ್ಯಾರಥಾನ್ನಲ್ಲಿ ಕೂಡ ಇವರು ಮುಂದೆ. ಈಚೆಗೆ ನಡೆದ ಐರನ್ ಮ್ಯಾನ್ 4ನೇ ಎಡಿಷನ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ತೇಜಸ್ವಿ ಸೂರ್ಯ ಕೂಡ ಭಾಗವಹಿಸಿದ್ದು ವಿಶೇಷ.
ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ ಸಂಸದ ಸೂರ್ಯ! ಯಾರೀ ಚೆಲುವೆ? ಯಾವಾಗ ಮದುವೆ?