* ಅರುಣ್ ಸಿಂಗ್ ಭೇಟಿಯಾದ ಎಂಪಿ ರೇಣುಕಾಚಾರ್ಯ* ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅರುಣ್ ಸಿಂಗ್ ಬಳಿ ಅಸಮಾಧಾನ* ರೇಣುಕಾಚಾರ್ಯಗೆ ಭರವಸೆ ನೀಡಿದ ಅರುಣ್ ಸಿಂಗ್

ಬೆಂಗಳೂರು, (ಆ.04): ಸಚಿವ ಸಂಪುಟ ರಚನೆಯಾಗಿದ್ದು, 29 ಶಾಸಕರು ಇಂದು (ಬುಧವಾರ) ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆದ್ರೆ, ಕೆಲವರಿಗೆ ಮಂತ್ರಿ ಕೈತಪ್ಪಿದ್ದರಿಂದ ಅವರೆಲ್ಲರೂ ಅಸಮಾಧಾನಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂತಹ ಗುಂಪಿನಲ್ಲಿ ಎಂಪಿ ರೇಣುಕಾಚಾರ್ಯ ಸಹ ಒಬ್ಬರು...ಕಳೆದ ಬಾರಿ ಬಿಎಸ್‌ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಈ ಬಾರಿ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಅದ್ರೆ, ಸಿಗದಿರುವುದು ಅವರ ನಿರಾಸೆಗೆ ಕಾರಣವಾಗಿದೆ.

ನೂತನ ಸಚಿವರಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ ಸಿಎಂ: ಯಾರಿಗೆ ಯಾವ ಜಿಲ್ಲೆ?

ಇನ್ನು ಈ ಬಗ್ಗೆ ರೇಣುಕಾಚಾರ್ಯ ಅವರು ಇಂದು (ಆ.04) ರಾಜ್ಯ ಬಿಜೆಪಿ ಅರುಣ್ ಸಿಂಗ್ ಅವರನ್ನ ಭೇಟಿ ಮಾಡಿ ಚರ್ಚಿದ್ದಾರೆ. ಕುಮಾರಕೃಪಾ ಗೆಸ್ಟ್​ಹೌಸ್​ನಲ್ಲಿ ಅರುಣ್ ಸಿಂಗ್ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಂತರ ಅವರನ್ನು ಸಮಾಧಾನ ಮಾಡಿರುವ ಅರುಣ್​ ಸಿಂಗ್​, ಮುಂದೆ ಒಂದೊಳ್ಳೆ ಗೌರವಯುತ ಹುದ್ದೆ ಕೊಡುವುದಾಗಿ ಭರವಸೆ ನೀಡಿದ್ದಾರೆಂದು ಎನ್ನಲಾಗಿದೆ. ಬಳಿಕ ರೇಣುಕಾಚಾರ್ಯ ಅವರು ಅಲ್ಲಿಂದ ವಾಪಸ್ ಆಗಿದ್ದಾರೆ.

ಮುಂದಿನ ದಿನಗಳಲ್ಲಿ ರೇಣುಕಾಚಾರ್ಯ ಅವರಗೆ ಯಾವ ಹುದ್ದೆ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಈ ಹಿಂದೆ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿಯಾಗಿದ್ದರು.