* ನೂತನ ಸಚಿವರಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ ಸಿಎಂ* 29 ನೂತನ ಸಚಿವರಿಗೆ ಜಿಲ್ಲೆಗಳನ ಜವಾಬ್ದಾರಿ ನೀಡಿದ ಬೊಮ್ಮಾಯಿ* ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ

ಬೆಂಗಳೂರು, (ಆ.04): ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಯಾಬಿನೆಟ್ ರಚನೆಯಾಗಿದ್ದು, ಇಂದು (ಆ.04) 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳಿಕ ಬಸವರಾಜ ಬೊಮ್ಮಯಿ ಅವರು ವಿಧಾನಸೌಧದಲ್ಲಿ ನೂತನ ಸಚಿವರ ಜೊತೆ ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲೆಗೆಳಿಗೆ ತೆರಳುವಂತೆ ನೂತನ ಸಚಿವರಿಗೆ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ.

ಸಭೆ ಅಂತ್ಯ: ಮೊದಲ ಸಭೆಯಲ್ಲಿಯೇ ನೂತನ ಸಚಿವರಿಗೆ ಮಹತ್ವ ಸೂಚನೆ ಕೊಟ್ಟ ಸಿಎಂ

ಅದರಂತೆ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳ ಪರಿಶೀಲನೆಗೆ ಹೋಗುವಂತೆ ಸಚಿವರುಗಳಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ್ದಾರೆ. ಈ ಕೆಳಕಂಡ ಜಿಲ್ಲೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಹಾಗಾದ್ರೆ ಯಾರಿಗೆ ಯಾವ ಜಿಲ್ಲೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

* ಗೋವಿಂದ ಕಾರಜೋಳ - ಬೆಳಗಾವಿ
* ಕೆ.ಎಸ್​.ಈಶ್ವರಪ್ಪ- ಶಿವಮೊಗ್ಗ
* ಆರ್​.ಅಶೋಕ್​- ಬೆಂಗಳೂರು ನಗರ
 * ಬಿ.ಶ್ರೀರಾಮುಲು- ಚಿತ್ರದುರ್ಗ
* ವಿ.ಸೋಮಣ್ಣ- ವಿ ಸೋಮಣ್ಣ
* ಉಮೇಶ್ ಕತ್ತಿ-ಬಾಗಲಕೋಟೆ
* ಎಸ್. ಅಂಗಾರ- ದಕ್ಷಿಣ ಕನ್ನಡ
* ಜೆ.ಸಿ.ಮಾಧುಸ್ವಾಮಿ- ತುಮಕೂರು
* ಡಾ. ಅಶ್ವಥ ನಾರಾಯಣ- ರಾಮನಗರ
 * ಸಿ.ಸಿ.ಪಾಟೀಲ್​ - ಗದಗ
* ಆನಂದ್​ ಸಿಂಗ್- ಬಳ್ಳಾರಿ, ವಿಜಯನಗರ 
* ಕೋಟಾ ಶ್ರೀನಿವಾಸ ಪೂಜಾರಿ- ಕೊಡಗು
 * ಪ್ರಭು ಚೌಹ್ವಾಣ್​- ಬೀದರ್
 * ಮುರುಗೇಶ್​ ನಿರಾಣಿ- ಕಲಬುರಗಿ
 * ಶಿವರಾಮ್​ ಹೆಬ್ಬಾರ್- ಉತ್ತರ ಕನ್ನಡ​
 * ಎಸ್​.ಟಿ. ಸೋಮಶೇಖರ್​- ಮೈಸೂರು, ಚಾಮರಾಜನಗರ
 * ಬಿ.ಸಿ.ಪಾಟೀಲ್- ಹಾವೇರಿ
* ಬಸವರಾಜ ಬೈರತಿ- ದಾವಣಗೆರೆ
, * ಡಾ.ಕೆ.ಸುಧಾಕರ್​- ಚಿಕ್ಕಬಳ್ಳಾಪುರ
* ಗೋಪಾಲಯ್ಯ- ಹಾಸನ
* ಶಶಿಕಲಾ ಜೊಲ್ಲೆ- ವಿಜಯಪುರ
* ಎಂಟಿಬಿ ನಾಗರಾಜ್​- ಬೆಂಗಳೂರು ಗ್ರಾಮಾಂತರ
* ಅರಗ ಜ್ಞಾನೇಂದ್ರ- ಚಿಕ್ಕಮಗಳೂರು
* ಸುನಿಲ್ ಕುಮಾರ್- ಉಡುಪಿ
* B C ನಾಗೇಶ್- ಯಾದಗಿರಿ
* ಹಾಲಪ್ಪ ಆಚಾರ್- ಕೊಪ್ಪಳ
* ಶಂಕರ್ ಪಾಟೀಲ್ ಮುನೇನಕೊಪ್ಪ- ಧಾರವಾಡ
* ಮುನಿರತ್ನ-ಕೋಲಾರ