ನಾನು ಕೆಲಸಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡೀತೀನಿ: ಸಂಸದ ಪ್ರತಾಪ್‌ಸಿಂಹ

ನಾನು ಮೈಸೂರಿನ ಅಭಿವೃದ್ಧಿ ಕೆಲಸಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿದುಕೊಳ್ಳುತ್ತೇನೆ. ನಾನೊಬ್ಬ ಸೇವಕ ಕೈಕಾಲು ಹಿಡಿದು, ಅಂಗಲಾಚುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

MP Pratap Sinha appeal for the development work of Mysuru sat

ಮೈಸೂರು (ಮೇ 25): ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್, ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ವಿಮಾನ ನಿಲ್ದಾಣದ ವಿಸ್ತರಣೆ, ಗ್ರೇಟರ್ ಮೈಸೂರಿಗೆ ಅವಕಾಶ ಮಾಡಿ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳುತ್ತೇನೆ. ಮೈಸೂರು ಅಭಿವೃದ್ಧಿ ಕೆಲಸವನ್ನು ಒಂದಾಗಿ ಮಾಡೋಣ. ನಾನು ಕೆಲಸ ಆಗಬೇಕೆಂದರೆ ಯಾರ ಕಾಲನ್ನು ಬೇಕಾದರೂ‌ ಹಿಡಿತೀನಿ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ  ಅವರು (Pratap Simha), ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಬಹಳ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗ್ತಾ ಇತ್ತು. ಈ‌ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ (Sopt inspection) ಮಾಡಲಾಗಿದೆ. ಕೆಂಪೇಗೌಡ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಆದ್ದರಿಂದ ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರವಾಗಿ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೈಕಾಲು ಹಿಡಿದು ಅಂಗಲಾಚುತ್ತೇನೆ:  ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್, ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ವಿಮಾನ ನಿಲ್ದಾಣದ ವಿಸ್ತರಣೆ, ಗ್ರೇಟರ್ ಮೈಸೂರಿಗೆ ಅವಕಾಶ ಮಾಡಿ ಕೊಡಿ ಎಂದು ಸಿದ್ದರಾಮಯ್ಯ ರವರನ್ನು ಕೇಳಿಕೊಳ್ಳುತ್ತೇನೆ.ಮೈಸೂರು ಅಭಿವೃದ್ಧಿ ದೃಷ್ಟಿಯಿಂದ ನಿಮ್ಮಲ್ಲಿ ವಿನಮ್ರ ವಾಗಿ ಕೇಳಿಕೊಳ್ಳುತ್ತೇನೆ. ಮೈಸೂರು ಸುತ್ತ ಪೆರಿಪಲ್ ರಿಂಗ್ ರಸ್ತೆ ಸುಮಾರು 103km ಬರುತ್ತದೆ.  ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಆದರೆ, ಈಗ ಮೈಸೂರು ಅಭಿವೃದ್ಧಿ ಕೆಲಸವನ್ನು ಒಂದಾಗಿ ಮಾಡೋಣ. ನಾನು ಕೆಲಸ ಆಗಬೇಕೆಂದರೆ ಯಾರ ಕಾಲನ್ನು ಬೇಕಾದರೂ‌ ಹಿಡಿತೀನಿ. ನಾನೊಬ್ಬ ಸೇವಕ ಕೈಕಾಲು ಹಿಡಿದು, ಅಂಗಲಾಚಿ, ಹೋರಾಟ ಮಾಡಿಯಾದರೂ ನಾನು ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅತಿ ಶೀಘ್ರದಲ್ಲಿ ಭೇಟಿ ಆಗುತ್ತೇನೆ. ಮೈಸೂರು ಅಭಿವೃದ್ಧಿಗಾಗಿ ಸಿದ್ದರಾಮಯ್ಯರವರ ಮನೆಯ ಬಾಗಿಲಿಗೆ ಹೋಗುತ್ತೇನೆ ಎಂದರು.

ರಾಜ್ಯದ ಆರ್ಥಿಕತೆ ದಿವಾಳಿ ಮಾಡಬೇಡಿ: ಕರ್ನಾಟಕ ಮತದಾರರಿಂದ ಲೋಕಸಭಾ ಚುನಾವಣೆಯಲ್ಲಿ ಇದೇ ಫಲಿತಾಂಶ ನಿರೀಕ್ಷೆ ಮಾಡಲು ಸಾದ್ಯವಿಲ್ಲ. ಹಿಂದಿನ ಫಲಿತಾಂಶ ಗಮನಿಸಿ. ಕಷ್ಟದಲ್ಲಿ ಇರುವಂತ ಜನರು ನನಗೆ ಏನ್ ಕೊಡ್ತೀರಾ ಅನ್ನೋ ಮಟ್ಟದಲ್ಲಿ ಇದ್ದಾರೆ. ಗ್ಯಾರೆಂಟಿ ಯೋಜನೆ ಕಾಂಗ್ರೆಸ್ ಕೈಹಿಡಿದಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿ ಮಾಡಿದ ಹೆಗ್ಗಳಿಕೆ ಎಸ್.ಎಂ.ಕೃಷ್ಣ ಕಾಲದಲ್ಲಿ ಜಾರಿಗೆ ತಂದರು. ಈ ಮೇಲ್ಪಂಕ್ತಿಯ ಅನುಗುಣವಾಗಿ ಬಜೆಟ್ ಮಂಡಿಸಿ, ಮುಂದಿನ ತಲೆಮಾರಿಗೆ ಹೊರೆ ಮಾಡಬೇಡಿ ಎಂದು ಕಿಡಿಕಾರಿದರು.

ಜೂನ್‌ 1 ರಿಂದ ಗ್ಯಾರಂಟಿ ಜಾರಿಗೆ ಆಗ್ರಹ: ರಾಜ್ಯದಲ್ಲಿ ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್ ಯೋಜನೆಯಲ್ಲಿ ಕಂಡೀಷನ್ ಅಪ್ಲೈ ಅಂತಾ ಎಲ್ಲೂ ಹಾಕಿಲ್ಲ. ಯಾಕೆ ಈ ಪ್ರಶ್ನೆ?. ಇದರ ಜಾರಿಗೆ ಜೂನ್ 01 ರ ವರಗೂ ನಾವು ಕಾಯುತ್ತೇವೆ. ರಾಜ್ಯದ ಜನತೆಗೆ ಈಗಲೇ ಕರೆ ಕೊಡ್ತಾ ಇದ್ದೀನಿ. ಜೂನ್ 01 ರಿಂದ 200 ಯುನಿಟ್ ವಿದ್ಯುತ್ ಫ್ರೀಯಾಗಿ ಸಿಗಲಿದೆ. ಮಹಿಳೆಯರು ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ.  ನಿಮ್ಮ ಮುಖ ನೋಡಿಕೊಂಡು ಓಟ್ ಹಾಕಿಲ್ಲ. ಗ್ಯಾರೆಂಟಿ ಕಾರ್ಡ್ ನೋಡಿ ಓಟ್ ಹಾಕಿದ್ದಾರೆ. ನಾವು ಜನರ ಪರವಾಗಿ ವಕಾಲತ್ತು ವಹಿಸಿ ಗ್ಯಾರೆಂಟಿ ಕಾರ್ಡ್ ಯೋಜನೆ ಜಾರಿ ಮಾಡುತ್ತೇವೆ. ಇಲ್ಲದಿದ್ದರೆ ನಾನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್‌ ಮೇಲಿನ ಧಮ್ಕಿ ಬಿಡಿ- ಹಳೆ ಪಿಂಚಣಿ ಜಾರಿ ಮಾಡಿ: ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು. ವಿದ್ಯೆಯಿಂದ, ವೃತ್ತಿಯಿಂದ ಸಿದ್ದರಾಮಯ್ಯ ರವರು ವಕೀಲರು ಯಾರು ಇಲ್ಲಿ ಆರ್ಥಿಕ ತಜ್ಞರಲ್ಲ. ವಿಧಾನ ಸೌಧದಲ್ಲಿ ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವುದನ್ನು ನಿಲ್ಲಿಸಿ. ಅಶ್ವಥ್‌ನಾರಾಯಣ್ ಅವರ ಹೇಳಿಕೆಯನ್ನು ನಾವು ಸಹ ಒಪ್ಪಲ್ಲ. ಮೂರು ತಿಂಗಳ ಹಿಂದೆ ಬಾಯಿ ತಪ್ಪಿನಿಂದ ಆದ ಹೇಳಿಕೆಗೆ ಈವಾಗ ಎಫ್‌ಐಆರ್ ಹಾಕಿದ್ದಾರೆ. ಇದು ಪೊಲೀಸ್ ಇಲಾಖೆ ಮೇಲೆ ದಬ್ಬಾಳಿಕೆ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮೂರು ದಿನಗಳ ಹಿಂದೆ ಯಾವುದೇ ಯೋಜನೆಗಳ ಫಂಡಿಂಗ್ ನಿಲ್ಲಿಸುವಂತೆ ಆದೇಶ ಮಾಡಿದ್ದಾರೆ. ಇದರ ಹಿಂದೆ ಇರುವ ಉದ್ದೇಶ ಏನು? ಎಷ್ಟು ಪರ್ಸೆಂಟ್ ಕೇಳ್ತಾ ಇದ್ದೀರಾ. ನಿಮ್ಮ ಸರ್ಕಾರ ಇದೆ, ಯಾರು 40% ತೆಗೆದುಕೊಂಡಿದ್ದಾರೆ, ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಶೀಘ್ರವಾಗಿ ಬಂಧಿಸುವ ಕೆಲಸ ಮಾಡಬೇಕು. ಈ ವಿಚಾರಗಳನ್ನು ತಾರ್ಕಿಕ ಅಂತ್ಯ ತರಬೇಕು ಎಂದು ಹೇಳಿದರು.

ಮಹಿಷ ದಸರಾ ಚಾಮುಂಡಿ ಬೆಟ್ಟದಲ್ಲಿ ನಡೆಯೊಲ್ಲ: ನೂತನ ಸಂಸತ್ ಭವನ ನಿರ್ಮಾಣ ಉದ್ಘಾಟನೆಗೆ ರಾಷ್ಟ್ರಪತಿ ರವರಿಗೆ ಆಹ್ವಾನ ನೀಡಿಲ್ಲ? ಎಂಬ ವಿಚಾರವಾಗಿ ಮಾತನಾಡಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ರವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗುತ್ತದೆ. ಬಿಜೆಪಿ ಪಕ್ಷ ಅಭಿವೃದ್ಧಿ ಕೆಲಸ ಮಾಡಿದ್ದರೂ ಸಹ ಬಿಜೆಪಿ ಜನರಿಗೆ ತಿಳಿಸುವಲ್ಲಿ ವಿಫಲವಾಯಿತು. ಎಸ್‌ಡಿಪಿಐ ಮತ್ತು ಪಿಎಫ್‌ಐ ನವರ ಕೇಸ್‌ಗಳನ್ನು ವಾಪಸ್ ಪಡೆದಂತಹ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಿರುವುದು ನಮ್ಮ ಕಾರ್ಯಕರ್ತರು ಧೈರ್ಯ ಕಳೆದುಕೊಂಡಿದ್ದಾರೆ. ಮಹಿಷ ದಸರ ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಆಗಲು‌ ಬಿಡಲ್ಲ ಎಂದು ಹೇಳಿದರು. 

Latest Videos
Follow Us:
Download App:
  • android
  • ios