ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು: ಸಿದ್ದುಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ
ಗುಜರಾತ್‌ನ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು ಹೂಳಿಡುತ್ತಾರೆ? ಸಿದ್ದರಾಮಯ್ಯ ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಮೇ 10 ರಂದು ಈ ಭಯ ಮತ್ಯಾವಾ ರೀತಿ ಗೋಚರವಾಗುತ್ತೆ ನೋಡಿ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟರು.
ಮೈಸೂರು (ಏ.10): ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ (ಏ.9) ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 2 ಗಂಟೆ ಕಾಲ 20 ಕಿ.ಮೀ ಸಫಾರಿ ಮಾಡಿದ್ದರು. ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲವೆಂದು ವಿಪಕ್ಷಗಳು ಕುಹಕವಾಡುತ್ತಿವೆ. ಇದೀಗ ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಗುಜರಾತ್‌ನ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು ಹೂಳಿಡುತ್ತಾರೆ? ಸಿದ್ದರಾಮಯ್ಯ ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಮೇ 10 ರಂದು ಈ ಭಯ ಮತ್ಯಾವಾ ರೀತಿ ಗೋಚರವಾಗುತ್ತೆ ನೋಡಿ. ಪ್ರಧಾನಿಗಳು ವನ್ಯಜೀವಿಗಳ ಕಾಳಜಿಗಾಗಿ ದೆಹಲಿಯಿಂದ ಬಂಡೀಪುರಕ್ಕೆ ಬಂದಿದ್ದಾರೆ ಎಂದರು.
ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಿದ್ರಿ. ಒಂದು ದಿನವೂ ಬಂಡೀಪುರ, ನಾಗರಹೊಳೆ ಹೋಗಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು, ನಿಮ್ಮಿಂದ ಪ್ರಧಾನಿಗಳ ಹುಲಿ ಬಗ್ಗೆ ಪಾಠ ಬೇಡ. ಏರ್ ಪೋರ್ಸ್‌ನ ಮೂರು ಹೆಲಿಕಾಪ್ಟರ್‌ಗಳು ಏಕ ಕಾಲಕ್ಕೆ ಬಂದ ಕಾರಣ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಇಷ್ಟು ಕನಿಷ್ಟ ಲೋಕಾ ಜ್ಞಾನವೂ ನಿಮಗೆ ಇಲ್ಲ ಎಂದರೆ ಹೇಗೆ ಹೇಳಿ?ಭ್ರಷ್ಟರ ಪಾಲಿಗೆ ಹುಲಿಯಂತಿದ್ದ ಲೋಕಾಯುಕ್ತ ಎಂಬ ಹುಲಿಯನ್ನೆ ಮುಗಿಸಿದವರು ನೀವು. ನಿಮ್ಮಿಂದ ನಮಗೆ ಪಾಠ ಬೇಡ ಎಂದು ಎಚ್ಚರಿಸಿದರು.
ನನಗೆ ಜಾತಿ, ಹಣ ಬಲ ಎರಡೂ ಇಲ್ಲ: ವೈ.ಎಸ್.ವಿ.ದತ್ತ
ಕೆಎಂಎಫ್ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗೆ ಇದೆ: ಕೆಎಂಎಫ್‌ನಲ್ಲಿ ಅಮುಲ್ ವಿಲೀನ ವಿಚಾರವಾಗಿ ನಮ್ಮ ಸರಕಾರ ಘಂಟಾ ಘೋಷವಾಗಿ ಹೇಳಿದೆ ವಿಲೀನ ಇಲ್ಲ ಅಂತಾ. ಆದರೂ ಸುಳ್ಳು, ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್, ಜೆಡಿಎಸ್ ಸುಳ್ಳು ಆರೋಪವನ್ನೆ ಪುನರಾವರ್ತನೆ ಮಾಡುತ್ತಿವೆ. ಮೊದಲು ಹಿಂದಿ ಹೇರಿಕೆ ಅಂದರು ಈಗ ಅಮುಲ್ ಹೇರಿಕೆ ಅಂತಾ ಸುಳ್ಳು ಹರಡಿಸುತ್ತಿದ್ದಾರೆ. ಹೆರಿಟೇಜ್, ದೊಡ್ಲ, ಆರೋಕ್ಯ ಎಂಬ ಹಾಲಿನ ಬ್ರಾಂಡ್‌ಗಳು ನಂದಿನಿಯ ಅಕ್ಕತಂಗಿಯರಾ? ಅಥವಾ ತಮಿಳು ನಾಡು ಮತ್ತು ಆಂಧ್ರದಿಂದ ಬಂದ ಸೊಸೆ, ಅಳಿಯಂದಿರಾ? ಇಷ್ಟು ವರ್ಷ ದಿಂದ ಈ ಬ್ರಾಂಡ್‌ಗಳು ಕರ್ನಾಟಕದಲ್ಲಿ ಮಾರಾಟ ಆಗ್ತಿಲ್ವಾ? ಬಿಜೆಪಿ ಬಂದ ಮೇಲೆ ಇವು ರಾಜ್ಯಕ್ಕೆ ಬಂದವಾ ಎಂದರು.
ಚನ್ನಗಿರಿ ಚದುರಂಗ: ಜೆ.ಎಚ್.ಪಟೇಲ್ ಕ್ಷೇತ್ರದಲ್ಲಿ ಶಿವಗಂಗಾ vs ಮಾಡಾಳ್ ಪುತ್ರ ಕದನ
ಕೆಎಂಎಫ್ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗೆ ಇದೆ. ಕಾಂಗ್ರೆಸ್, ಜೆಡಿಎಸ್‌ನಿಂದ ನಾವು ಪಾಠ ಕಲಿಯ ಬೇಕಾಗಿಲ್ಲ. ಯಾವ ಹಸು ಹಾಲು ಕೊಡುತ್ತಾದೋ ಅದನ್ನು ಕಡಿಯುವವರ ಪರ ಇರುವುದು ಸಿದ್ದರಾಮಯ್ಯ. ಸಿದ್ದರಾಮಯ್ಯರಿಗೆ ಅಧಿಕಾರ ಕೊಟ್ಟರೆ ಗೋವು ತಿನ್ನೋರೆ ಜಾಸ್ತಿ ಆಗುತ್ತಾರೆ. ಸಿದ್ದರಾಮಯ್ಯ ಅವರು ಗೋ ಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗ ಗೊತ್ತಿದೆ. ನಂದಿನಿ ಹಾಲಿಗೆ ಪ್ರೋತ್ಸಾಹ ಧನ ಕೊಟ್ಟವರು ಯಡಿಯೂರಪ್ಪ. ಸಿದ್ದರಾಮಯ್ಯಗೆ ಹಾಲು ಕೊಡುವ ಗೋವು ಬೇಕಾಗಿಲ್ಲ. ಗೋವು ತಿನ್ನುವವರ ಮತ ಬೇಕು ಅಷ್ಟೆ ಎಂದು ಪ್ರತಾಪ್ ಸಿಂಹ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.