ಸೋಮಣ್ಣ ಬಲಿ ತೆಗೆದುಕೊಳ್ತಾರೆ, ಬಲಿಪಶು ಅಲ್ಲ: ಪ್ರತಾಪ್ ಸಿಂಹ
ವರುಣದಲ್ಲಿ 15 ವರ್ಷಗಳ ಅಪ್ಪ ಮಗನ ದರ್ಬಾರ್ ಅಂತ್ಯ ಕಾಲ ಬಂದಿದೆ. ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರು (ಏ.15): ಎಸ್ ಡಿ ಪಿ ಐ ನವರು ಕಾಂಗ್ರೆಸ್ ಗೆ ಬೆಂಬಲ ಕೊಡಬೇಕು ಅಂತಾ ಜಿ. ಪರಮೇಶ್ವರ್ ಕರೆ ಕೊಟ್ಟಿದ್ದಾರೆ. ಅಧಿಕಾರಕ್ಕೆ ಬರಲು ನಿಷೇಧಿತ ಸಂಘಟನೆಯ ರಾಜಕೀಯ ವಿಭಾಗದ ಬೆಂಬಲ ಕೇಳುತ್ತಿದ್ದಿರಾ? ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರಾ? ಪಿಎಫ್‌ಐ, ಕೆಎಫ್ ಡಿ ಸಂಘಟನೆಗಳು ಎಸ್ ಡಿ ಪಿ ಐ ನ ಮಾತೃ ಸಂಸ್ಥೆಗಳು. ಪಿಎಫ್ ಐ ಮತ್ತು ಕೆಎಫ್ ಡಿ ಯನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದೆ. ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಸಮಾಜ ಘಾತುಕರ ಜೊತೆ ಕಾಂಗ್ರೆಸ್ ಕೈ ಜೋಡಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಪಿಎಫ್‌ಐ, ಕೆಎಫ್ ಡಿ, ಎಸ್ ಡಿ ಪಿಐ ಸಂಘಟನೆಯ ಕಾರ್ಯಕರ್ತರು ಸಿದ್ದರಾಮಯ್ಯ ಗೆ ದತ್ತು ಮಕ್ಕಳು ಇದ್ದಂತೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ತಾಲಿಬಾನ್ ಸರಕಾರ ತರಲು ಹೊರಟ್ಟಿದ್ದಾರೆ. ಸಮಾಜಘಾತುಕ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯರ ಸಾಕು ಮಕ್ಕಳಿಂದ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ. ಕರ್ನಾಟಕ ಇನ್ನೊಂದು ಕೇರಳ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಏನೂ ಬೇಕಾದರು ಮಾಡುತ್ತದೆ. ನಾಳೆ ರಾಜ್ಯ ಎಸ್ ಡಿ ಫಿಐ ಕೈಗೆ ಹೋದರು ಪರವಾಗಿಲ್ಲ ನಾವು ಅಧಿಕಾರಕ್ಕೆ ಬರಬೇಕು ಅನ್ನೋದು ಕಾಂಗ್ರೆಸ್ ಮನಸ್ಥಿತಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ವರುಣದಲ್ಲಿ 15 ವರ್ಷಗಳ ಅಪ್ಪ ಮಗನ ದರ್ಬಾರ್ ಅಂತ್ಯ ಕಾಲ ಬಂದಿದೆ. ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆ ಒಳ್ಳೆ ಅಭಿಪ್ರಾಯವಿದೆ. ಮೈಸೂರು ಹಳೆ ಮೈಸೂರು ಭಾಗದಲ್ಲಿ 8 - 10 ಸ್ಥಾನ ಬಿಜೆಪಿ ಗೆ ಬರುತ್ತದೆ. 16 ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರಚಾರದಲ್ಲಿ ಜನರ ಸ್ಪಂದನೆ ಖುಷಿ ತಂದಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
Jagadish Shettar: ಪಕ್ಷೇತರವಾಗಿ ಸ್ಪರ್ಧಿಸುವ ಸುಳಿವು ನೀಡಿ ಭಾವುಕರಾದ ಶೆಟ್ಟರ್!
ವಿ.ಸೋಮಣ್ಣ ವರುಣಾದಲ್ಲಿ ಬಲಿಪಶು ಆಗುತ್ತಾರೆ ಎಂಬ ಕಾಂಗ್ರೆಸ್ ಟೀಕೆಗೆ ಸಂಬಂಧಿಸಿ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಬಲಿ ಯಾರದ್ದು ಆಗುತ್ತದೆ ಎಂಬುದು ಫಲಿತಾಂಶದ ದಿನ ಗೊತ್ತಾಗುತ್ತದೆ. ಸೋಮಣ್ಣ ಬಲಿ ತಗೆದುಕೊಳ್ಳಲು ಇಲ್ಲಿಗೆ ಬಂದಿದ್ದಾರೆ ಹೊರತು ಬಲಿಯಾಗಲು ಅಲ್ಲ. ಬಲಿಪಶು ಆಗುತ್ತೇನೆ ಎಂಬ ಭಯ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ. ಬಲಿಪಶು ಆಗುತ್ತೇನೆ ಅಂತಾ ಆ ಕ್ಷೇತ್ರ ಬೇಡ, ಈ ಕ್ಷೇತ್ರ ಬೇಡ ಅಂತಾ ಹುಡುಕಿದ್ದು ಸಿದ್ದರಾಮಯ್ಯ. ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತಾ ವರುಣಕ್ಕೆ ಬಂದಿದ್ದಾರೆ.
ಮುಖ್ಯಮಂತ್ರಿ ಸ್ಥಾನ ರೇಸ್‌ನಲ್ಲಿರುವ ಕಾಂಗ್ರೆಸ್ ನಾಯಕರ ಪಟ್ಟಿ
ಸಿದ್ದರಾಮಣ್ಣನಿಗೆ ವರುಣ ಜನ ತಕ್ಕ ಪಾಠ ಕಲಿಸುತ್ತಾರೆ. ನಾವು ವರುಣದಲ್ಲಿ ಯಾರ ಜೊತೆಯೂ ಸಂಧಾನ ಮಾಡಿಕೊಂಡಿಲ್ಲ. ನಮ್ಮದು ನೇರ ಫೈಟ್. ನಮ್ಮ ಮೈತ್ರಿ ಮತದಾರರ ಜೊತೆ. ಈ ಬಾರಿ ವರುಣದಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ಕೇವಲ ವರುಣ ಮಾತ್ರವಲ್ಲ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಹೋಗುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ.