ಮುಖ್ಯಮಂತ್ರಿ ಸ್ಥಾನ ರೇಸ್‌ನಲ್ಲಿರುವ ಕಾಂಗ್ರೆಸ್ ನಾಯಕರ ಪಟ್ಟಿ ಬಹಿರಂಗಪಡಿಸಿದ ಎಂಬಿ ಪಾಟೀಲ್!
ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಹಲವು ನಾಯಕರು ಕಾಂಗ್ರೆಸ್ ನಲ್ಲಿ ಸಮರ್ಥರಿದ್ದಾರೆ ಎಂದಿರುವ ಎಂಬಿ ಪಾಟೀಲ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಬೆಂಗಳೂರು (ಏ.15): ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಹಲವು ನಾಯಕರು ಕಾಂಗ್ರೆಸ್ ನಲ್ಲಿ ಸಮರ್ಥರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಎಲ್ಲ ರಾಜ್ಯಗಳ ಕಾಂಗ್ರೆಸ್ ಸಿಎಂ ಗಳ ಮುಖ್ಯಸ್ಥರು ಕೂಡ ಮಲ್ಲಿಕಾರ್ಜುನ ಖರ್ಗೆ ಅವರೇ ಆಗಿದ್ದಾರೆ. ಸಿಎಂ ಆಗುವ ಮೊದಲ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ, ಎರಡನೇ ಸಾಲಿನಲ್ಲಿ ನಾನು, ಡಿಕೆಶಿ, ಎಚ್ ಕೆ ಪಾಟೀಲ್, ಪರಮೇಶ್ವರ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ರಾಮಲಿಂಗರೆಡ್ಡಿ ಇದ್ದೇವೆ ಎನ್ನುವ ಮೂಲಕ ಸಿಎಂ ಆಗುವ ನಾಯಕರ ಪಟ್ಟಿಯನ್ನು ಎಂಬಿ ಪಾಟೀಲ್ ಬಹಿರಂಗಪಡಿಸಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಎರಡನೇ ಪಟ್ಟಿಯಲ್ಲಿದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯವನ್ನು ಮೂಲೆಗುಂಪು ಮಾಡುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿಕೆ ನಿಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ ಅಲ್ವಾ ಅದೇ ಸತ್ಯ. ಲಿಂಗಾಯತ ಸಮುದಾಯ ಬಿಟ್ಟು ಬೇರೆ ಸಮುದಾಯಕ್ಕೆ ಮನ್ನಣೆ ಕೊಡಲು ತಯಾರಿ ನಡೆಯುತ್ತಿದೆ ಎಂದಿದ್ದಾರೆ. ( ರಾಜ್ಯದಲ್ಲಿ ಬ್ರಾಹ್ಮಣ ಸಿಎಂ ಮಾಡುವುದಕ್ಕೆ ಬಿಜೆಪಿಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದ ಎಚ್ಡಿಕೆ )
ಯಡಿಯೂರಪ್ಪ ಅವರನ್ನು ಯಾಕೆ ಸಿಎಂ ಸ್ಥಾನದಿಂದ ಕೆಳಗಡೆ ಇಳಿಸಿದ್ರು? ಲಿಂಗಾಯತ ಸಮುದಾಯದ ಪ್ರಬಲ ನಾಯಕ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ್ದಾರೆ.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಬೊಮ್ಮಾಯಿಗೆ ಯಾಕೆ ಸಿಎಂ ಸ್ಥಾನ ನೀಡಿದ್ರು..? ಲಿಂಗಾಯತ ಸಮುದಾಯದವನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಸವದಿ ಕಾಂಗ್ರೆಸ್ ಸೇರಿದ್ದಕ್ಕೆ ಪೀಡೆ ತೊಲಗಿತು ಎಂಬ ರಮೇಶ್ ಜಾರಕಿಹೊಳಿ ಮಾತಿನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಎಂಬಿ ಪಾಟೀಲ್, ರಮೇಶ್ ಜಾರಕಿಹೊಳಿ ತಮ್ಮ ತಲೆ ಮೇಲೆ ತಾವೇ ಕಲ್ಲು ಹಾಕ್ಕೋತಿದಾರೆ. ರಮೇಶ್ ಮಾತು ಅವರಿಗೇ ಹೊಡೆತ ಕೊಡುತ್ತದೆ. ಸವದಿ ಪರ ಮತ್ತಷ್ಟು ಅನುಕಂಪ ಸೃಷ್ಟಿಯಾಗುತ್ತದೆ ಎಂದರು.
Jagadish Shettar: ಪಕ್ಷೇತರವಾಗಿ ಸ್ಪರ್ಧೆ ಮಾಡುವ ಸುಳಿವು ನೀಡಿ ಭಾವುಕರಾದ ಶೆಟ್ಟರ್!
ಇನ್ನು ಮೂರನೇ ಪಟ್ಟಿ ವಿಳಂಬ ಅಂತಾ ಏನೂ ಇಲ್ಲ. ಸವದಿಯನ್ನ ಪಕ್ಷಕ್ಕೆ ಸೇರಿಸಿಕೊಳ್ಳಬೇಕಿತ್ತು. ನಮ್ಮ ಉಸ್ತುವಾರಿ ಬಂದಿದ್ದಾರೆ. ಇವತ್ತು ರಾತ್ರಿ ಮೂರನೇ ಪಟ್ಟಿ ಬಿಡುಗಡೆ ಆಗಲಿದೆ. ಅರ್ಜೆಂಟ್ ಏನೂ ಇಲ್ಲ. ಸವದಿ ಲಿಂಗಾಯತ ಗಾಣಿಗ ಸಮಾಜದ ಹಿರಿಯ ನಾಯಕ. ಬಾಗಲಕೋಟೆ, ಗುಲ್ಬರ್ಗಾ, ಕೊಪ್ಪಳ ಸೇರಿ ಹತ್ತನ್ನೆರಡು ಕ್ಷೇತ್ರಗಳಲ್ಲಿ ಜನ ಇದ್ದಾರೆ. ಬಿಜೆಪಿಯಿಂದ ನಿಷ್ಠೆಯಿಂದ ಕೆಲಸ ಮಾಡಿದ್ರು. ಡಿಸಿಎಂ ಮಾಡಿ ಹೇಳದೇ ಕೇಳದೇ ತೆಗೆದು ಹಾಕಿದ್ರು. ಟಿಕೆಟ್ ಕೊಡ್ತೀವಿ ಅಂತಾ ಹೇಳಿ ಅನ್ಯಾಯ ಮಾಡಿದ್ರು. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್‌ಗೆ ಹೊಸ ಶಕ್ತಿ ಬಂದಿದೆ ಅನುಕೂಲ ಆಗಲಿದೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ತರೀಕೆರೆ ಕದನ: ತರೀಕೆರೆಯಲ್ಲಿ ಪಕ್ಷಕ್ಕಿಂತ ಜಾತಿ ಗೆಲುವೇ ಪ್ರತಿಷ್ಠೆಯ ಪ್ರಶ್ನೆ
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ