Congress Ticket: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಭಾರೀ ಕಸರತ್ತು: 33 ಅರ್ಜಿ ಸಲ್ಲಿಕೆ

ವಿಧಾನಸಭೆ ಚುನಾವಣೆ ಮೂನಾಲ್ಕು ತಿಂಗಳು ಬಾಕಿಯಿದ್ದು, ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಂತೆ ಮಲೆನಾಡಿನಲ್ಲೂ ಚುನಾವಣೆ ಬಿಸಿ ಏರತೊಡಗಿದ್ದು, ಸದ್ಯ ಟಿಕೆಟ್ ಆಕಾಂಕ್ಷಿಗಳು ಲಿಸ್ಟ್ ಬೆಳೆಯುತ್ತಿದೆ. 

More Than 33 Aspirants Submits Application To Congress Ticket In Chikkamagaluru District gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.24): ವಿಧಾನಸಭೆ ಚುನಾವಣೆ ಮೂನಾಲ್ಕು ತಿಂಗಳು ಬಾಕಿಯಿದ್ದು, ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಂತೆ ಮಲೆನಾಡಿನಲ್ಲೂ ಚುನಾವಣೆ ಬಿಸಿ ಏರತೊಡಗಿದ್ದು, ಸದ್ಯ ಟಿಕೆಟ್ ಆಕಾಂಕ್ಷಿಗಳು ಲಿಸ್ಟ್ ಬೆಳೆಯುತ್ತಿದೆ. ತೆರೆಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ 5 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಜಾರಿತ್ತು. 2023ರ ಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶ್ರಮಿಸುತ್ತಿದೆ. ಬಿಜೆಪಿಯನ್ನು ಮಣಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಗ್ನವಾಗಿದೆ.

ತೆರೆಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಬಿ.ಎಂ.ತಿಮ್ಮಶೆಟ್ಟಿ ಸ್ಫರ್ಧಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ ಹಾಗೇ ಶೃಂಗೇರಿ ಕ್ಷೇತ್ರದಿಂದ ಸುಧಾಕರ್ ಶೆಟ್ಟಿ ಹೆಸರು ಮುನ್ನೆಲೆಯಲ್ಲಿದೆ. ಈಗಾಗಲೇ ಈ ಇಬ್ಬರು ಕ್ಷೇತ್ರದಲ್ಲಿ ಕಾರ್ಯಚಟುವಟಿಕೆಯನ್ನು ಆರಂಭಿಸಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಫರ್ಧಿಸಿ ಶಾಸಕರಾಗಿರುವರು ಈ ಭಾರೀ ಚುನಾವಣೆಯಲ್ಲಿ ಟಿಕೆಟ್ ಲಭ್ಯವಾಗಲಿದೆ ಎನ್ನಲಾಗುತ್ತಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋಲುಂಡ ಮಾಜಿ ಶಾಸಕ ಜೀವರಾಜ್‌ಗೆ ಟಿಕೆಟ್ ಖಾತ್ರಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್  ಪಕ್ಷದಿಂದ ಹಾಲಿ ಶಾಸಕರಾಗಿರುವ ಟಿ ಡಿ ರಾಜೇಗೌಡರ ಹೆಸರು ಕೇಳಿ ಬರುತ್ತಿದ್ದರೇ, ಜೆಡಿಎಸ್ ಪಕ್ಷದಿಂದ ಸುಧಾಕರ್ ಶೆಟ್ಟಿ ಹೆಸರು ಕೇಳಿ ಬರುತ್ತಿದ್ದು, ಕಡೂರು ಕ್ಷೇತ್ರದಲ್ಲಿ ವೈಎಸ್‌ವಿ ದತ್ತ ಗುಟ್ಟು ಬಿಟ್ಟಿಲ್ಲ. ಉಳಿದ ಕ್ಷೇತ್ರಗಳ ಬಗ್ಗೆ ಜೆಡಿಎಸ್ ಎಲ್ಲಿಯೂ ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಯಾರು ಅಭ್ಯರ್ಥಿಯಾಗಲಿದ್ದಾರೆಂಬ ಗುಟ್ಟು ಇನ್ನೂ ರಟ್ಟಾಗಿಲ್ಲ. ಗೆಲ್ಲುವ ಕುದುರೆ ಯಾರೆಂಬ ಕುತೂಹಲ ಜನರದಾಗಿದೆ.

100 ಹಾಸಿಗೆ ಆಸ್ಪತ್ರೆಗೆ ಆಗ್ರಹಿಸಿ ಶೃಂಗೇರಿ ಯುವಕರ ತಮಟೆ ಚಳವಳಿ

ಜಿಲ್ಲೆಯಿಂದ 33 ಅರ್ಜಿ: ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷ ಅರ್ಜಿ ಸಲ್ಲಿಸುವ ನೂತನ ಪ್ರಯೋಗಕ್ಕೆ ಮುಂದಾಗಿದ್ದು, ಜಿಲ್ಲೆಯಿಂದ 33 ಅರ್ಜಿಗಳು ಸಲ್ಲಿಕೆಯಾಗಿವೆ. ಟಿಕೆಟ್ ಪಡೆದುಕೊಳ್ಳಲು ಪೈಪೋಟಿ ಇದ್ದು, ತೆರೆ ಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ 7ಜನ ಆಕಾಂಕ್ಷಿಗಳು, ಕಡೂರು ಕ್ಷೇತ್ರದಿಂದ 6ಜನ ಆಕಾಂಕ್ಷಿಗಳು, ಮೂಡಿಗೆರೆ ಕ್ಷೇತ್ರದಿಂದ 5ಜನ ಆಕಾಂಕ್ಷಿಗಳು, ತರೀಕೆರೆ ಕ್ಷೇತ್ರದಿಂದ 13ಆಕಾಂಕ್ಷಿಗಳು ಹಾಗೂ ಶೃಂಗೇರಿ ಕ್ಷೇತ್ರದಿಂದ ಇಬ್ಬರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ತರೀಕೆರೆ ಕ್ಷೇತ್ರದಿಂದ ಅತೀ ಹೆಚ್ಚು ಅಕಾಂಕ್ಷಿಗಳು: ಜಾತಿಯ ಅಸ್ತ್ರವನ್ನು ಹೊಂದಿರುವ ತರೀಕೆರೆ ಕ್ಷೇತ್ರದಿಂದ 13 ಜನ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್‌ಗಾಗಿ ಬಾರೀ ಪೈಪೋಟಿ ಏರ್ಪಟ್ಟಿದ್ದು, ಎಐಸಿಸಿ, ಕೆಪಿಸಿಸಿ ನಾಯಕರು ಯಾರಿಗೆ ಮಣೆ ಹಾಕಲಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದು, ಯಾರಿಗೆ ಟಿಕೆಟ್ ಸಿಗಲಿದೆ. ಗೆಲ್ಲುವ ಕುದುರೆ ಯಾರೆಂದು ಕುತೂಹಲ ಜನರದಾಗಿದೆ.

ಕಾಂಗ್ರೆಸ್ ಪಕ್ಷದಿಂದ ಅರ್ಜಿ ಸಲ್ಲಿಸಿದವರ ವಿವರ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ
: ರೇಖಾ ಹುಲಿಯಪ್ಪಗೌಡ, ಬಿಎಚ್.ಹರೀಶ್, ಡಿ.ಎಲ್.ವಿಜಯಕುಮಾರ್, ಎ.ಎನ್.ಮಹೇಶ್, ಮಹಡಿಮನೆ ಸತೀಶ್, ರಸೂಲ್‌ಖಾನ್, ಮಹಮದ್ ನಯಾಜ್.

ಕಡೂರು ವಿಧಾನಸಭಾ ಕ್ಷೇತ್ರ: ಸಿ.ಆನಂದ್, ವಿನಾಯಕ, ಶರತ್, ಸಿ.ನಂಜಪ್ಪ, ಚಂದ್ರಪ್ಪ, ಮುದ್ದಣ್ಣ.

ಮೂಡಿಗೆರೆ ವಿಧಾನಸಭಾ ಕ್ಷೇತ್ರ: ನಯನ ಮೋಟಮ್ಮ, ಪ್ರಭಾಕರ, ಹೂವಪ್ಪ, ಪವನ್, ನಾಗರತ್ನ.

ತರೀಕೆರೆ ವಿಧಾನಸಭಾ ಕ್ಷೇತ್ರ: ಜಿ.ಎಚ್.ಶ್ರೀನಿವಾಸ್,ಧೃವಕುಮಾರ್, ಟಿ.ಎಚ್.ಶಿವಶಂಕರಪ್ಪ, ಗೋಪಿಕೃಷ್ಣ, ಪರಮೇಶ್, ಟಿ.ಎಲ್.ರಮೇಶ್, ಶಶಾಂಕ್, ರಮೇಶ್, ತಾಳಿಕಟ್ಟೆ ಲೋಕೇಶ್, ಗೋಪಿಕುಮಾರ್, ಕೃಷ್ಣಮೂರ್ತಿ, ಬಸವರಾಜ್, ರವೀಶ್ ಶ್ಯಾನಬೋಗ್.

ರಾಜ್ಯದಲ್ಲಿ ಟಿಪ್ಪು ಯೂನಿವರ್ಸಿಟಿ ಮಾಡ್ತೀವಿ: ಸಿಎಂ ಇಬ್ರಾಹಿಂ ಹೇಳಿಕೆ

ಶೃಂಗೇರಿ ವಿಧಾನಸಭಾ ಕ್ಷೇತ್ರ: ಟಿ.ಡಿ.ರಾಜೇಗೌಡ, ಸಚಿನ್ ಮೀಗಾ ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ .ಕೆ ಪಿ ಅಂಶುಮಂತ್ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿ ಜಿಲ್ಲೆಯಿಂದ ಅನೇಕರು ಅರ್ಜಿ ಸಲ್ಲಿಸಿದ್ದು, ಇದರಿಂದ ಜಿಲ್ಲೆ ಯಲ್ಲಿ ಕಾಂಗ್ರೆಸ್ ಸದೃಢವಾಗಿದೆ ಎನ್ನುವುದು ತಿಳಿಯುತ್ತದೆ. 5ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಭರವಸೆ ಇದೆ. ಪಕ್ಷ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದರು.

Latest Videos
Follow Us:
Download App:
  • android
  • ios