'ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ಗೆ 150ಕ್ಕೂ ಹೆಚ್ಚು ಸ್ಥಾನ'

ಮಾಜಿ ಶಾಸಕ ಸುರೇಶ ಮಾರಿಹಾಳ ಕುಟುಂಬಸ್ಥರ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಎಂಎಲ್ಸಿ ಚನ್ನರಾಜ ಭವಿಷ್ಯ

More than 150 Seats for Congress This Time in Karnataka Says Channaraj Hattiholi grg

ಚನ್ನಮ್ಮನ ಕಿತ್ತೂರು(ಏ.18):  ಕ್ಷೇತ್ರದಲ್ಲಿ ಮಲಪ್ರಭೆ ಇದ್ದು, ಇಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಜಾರಿಗೆ ತರಬಹುದಿತ್ತು. ಶಾಸಕರ ನಿರ್ಲಕ್ಷ್ಯ ಧೋರಣೆಯಿಂದಾಗಿ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಕಾಂಗ್ರೆಸ್‌ ಅಭ್ಯರ್ಥಿ ಪಾಟೀಲ ಅವರನ್ನು ಬೆಂಬಲಿಸಿ ಈ ಬಾರಿ ನಡೆಯುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಹೆದ್ದಾರಿ ಪಕ್ಕದಲ್ಲಿರುವ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಅಭ್ಯರ್ಥಿ ಬಾಬಾಸಾಹೇಬ್‌ ಪಾಟೀಲ ಸಮ್ಮುಖದಲ್ಲಿ ಮಾಜಿ ಶಾಸಕ ಸುರೇಶ ಮಾರಿಹಾಳ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರ ಕುಟುಂಬದ ಸದಸ್ಯರು ಇಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಸಂತಸ ತಂದಿದೆ. ವಿಪ ಚುನಾವಣೆಯ ಸಂದರ್ಭದಲ್ಲಿ ಕಿತ್ತೂರು ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿರುವುದು, ಭ್ರಷ್ಟಾಚಾರ, ಕಳಪೆ ಕಾಮಗಾರಿಗಳಿಗೆ ಬೇಸತ್ತು ಮತದಾರರು ಬಾಬಾಸಾಹೇಬ್‌ ಪಾಟೀಲ ಅವರಿಗೆ ಪಕ್ಷದ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆಯೇ ಇಂದು ಅವರಿಗೆ ಟಿಕೆಟ್‌ ದೊರೆತಿದ್ದು, ಅವರನ್ನು ಚುನಾಯಿತರನ್ನಾಗಿ ಮಾಡಿ ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಕಾಂಗ್ರೆಸ್‌ನ 4ನೇ ಪಟ್ಟಿ ಬಿಡುಗಡೆ: ಶೆಟ್ಟರ್‌ಗೆ ಟಿಕೆಟ್‌- ಪುಲಿಕೇಶಿನಗರ ಸೇರಿ 8 ಕ್ಷೇತ್ರ ಬಾಕಿ

ಮುಖಂಡ ಸಚಿನ ಮಾರಿಹಾಳ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಪಕ್ಷ ನಿಷ್ಠರಿಗೆ ಯಾವುದೇ ಬೆಲೆ ಇಲ್ಲ. ಸುರೇಶ ಮಾರಿಹಾಳ ಶಾಸಕರ ಇದ್ದಾಗ ಆಗಿನ ಸಿಎಂ ಜಗದೀಶ ಶೆಟ್ಟರ ಅವರು ರಾಜ್ಯದಲ್ಲಿಯೇ ಕಿತ್ತೂರನ್ನು ಏಕಮಾತ್ರ ತಾಲೂಕನ್ನಾಗಿ ಘೋಷಣೆ ಮಾಡುವ ಮೂಲಕ ಕಿತ್ತೂರಿಗೆ ಸ್ಥಾನಮಾನ ನೀಡಿದ್ದರು. ಆದರೆ, ಬಿಜೆಪಿ ಪಕ್ಷ ಇದೀಗ ಅವರಿಗೂ ಟಿಕೆಟ್‌ ನೀಡದೇ ಮೊಸ ಮಾಡಿದೆ. ಇದರಿಂದಾಗಿ ಜಗದೀಶ ಶೆಟ್ಟರ ಅವರನ್ನು ಬೆಂಬಲಿಸುವ ಮೂಲಕ ನಾವುಗಳು ಸಹ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದು ತಿಳಿಸಿದರು.

ಪಪಂ ಸದಸ್ಯ ಸಿದ್ದಣ್ಣ ಮಾರಿಹಾಳ, ಪ್ರವೀಣ ಮಾರಿಹಾಳ, ದೀಪಕ ಮಾರಿಹಾಳ, ಸೇರಿದಂತೆ ಅವರ ಅಪಾರ ಅಭಿಮಾನಿಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಶಿಷ್ಯ ಶಾಸಕ ದೊಡ್ಡಗೌಡರ ವಿರುದ್ಧ ಪ್ರಚಾರಕ್ಕೆ ಮಾಜಿ ಡಿಸಿಎಂ ಸವದಿ!

ಶಾಸಕ ಮಹಾಂತೇಶ ದೊಡ್ಡಗೌಡರ ಅವರ ರಾಜಕೀಯ ಭವಿಷ್ಯದಲ್ಲಿ ಗುರುವಾಗಿದ್ದ ಲಕ್ಷ್ಮಣ ಸವದಿಯವರು ಇದೀಗ ಕಾಂಗ್ರೆಸ್‌ ಸೇರಿದ್ದಾರೆ. ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸವದಿ ತಮ್ಮ ಶಿಷ್ಯ ದೊಡ್ಡಗೌಡರ ವಿರುದ್ಧವೇ ಪ್ರಚಾರಕ್ಕೆ ಆಗಮಿಸುವ ಸನ್ನಿವೇಶ ರಾಜಕೀಯ ಚದುರಂಗದಾಟದಲ್ಲಿ ಎದುರಾಗಿದ್ದು, ಕ್ಷೇತ್ರದ ಜನರು ಯಾರ ಪ್ರಚಾರಕ್ಕೆ ಮನಸೋತು ಮತ ನೀಡಲಿದ್ದಾರೆಂದು ಕಾಯ್ದು ನೋಡಬೇಕಿದೆ. ಪ್ರಚಾರದ ದಿನಗಳನ್ನು ಮತದಾರರು ಕೂತುಹಲದಿಂದ ಎದುರು ನೋಡುವಂತಾಗಿದೆ.

ಬಿಜೆಪಿ ಸುಳ್ಳಿನ ಸುಂದರ ಮನೆ: ಎಚ್‌.ವೈ.ಮೇಟಿ

ಚುನಾವಣಾ ಪ್ರಚಾರಕ್ಕಾಗಿ ಇತ್ತೀಚೆಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಕಿತ್ತೂರು ಮತಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅವರ ಜೊತೆಗೂಡಿ ಲಕ್ಷ್ಮೇ ಹೆಬ್ಬಾಳ್ಕರ, ವಿನಯ ಕುಲಕರ್ಣಿ ಸೇರಿದಂತೆ ಪ್ರಮುಖ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಅಂತ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios