ಬಿಜೆಪಿ ಸುಳ್ಳಿನ ಸುಂದರ ಮನೆ: ಎಚ್.ವೈ.ಮೇಟಿ
ನವನಗರದ ಸೆಕ್ಟರ್ ನಂ.46 ನೂರಾರು ಯುವಕರು, ಹಿರಿಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಎಚ್.ವೈ.ಮೇಟಿ ಅವರು ಪಕ್ಷಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಬಾಗಲಕೋಟೆ(ಏ.18): ಭಾರತೀಯ ಜನತಾ ಪಕ್ಷ ಅಂದರೆ ಅದೊಂದು ಸುಳ್ಳಿನ ಸುಂದರವಾದ ಮನೆ. ಅಲ್ಲಿ ಯಾರಿಗೂ ಗೌರವವಿಲ್ಲ. ಹೀಗಾಗಿ ಹಲವಾರು ಹಿರಿಯ ನಾಯಕರೇ ಇಂದು ಕಾಂಗ್ರೆಸ್ ಪಕ್ಷದತ್ತ ಬರುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸುಳ್ಳಿನ ಮನೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಹೇಳಿದರು.
ತಾಲೂಕಿನ ಮುಚಖಂಡಿ ತಾಂಡಾದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಜನತೆಗೆ ಭರವಸೆ ನೀಡಿತ್ತು. ಯಾವ ಭರವಸೆಯನ್ನೂ ಈಡೇರಿಸದೆ ಜನತೆಗೆ ಮೋಸ ಮಾಡಿದೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ
ಪ್ರವಾಹ, ಕೊರೋನಾದಿಂದ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಿ ಎಂದು ಕೇಳಿಕೊಂಡರೆ, ಆ ಪಕ್ಷದ ಸಂಸದರೊಬ್ಬರು ರೈತರಿಗೇ ಅವಮಾನ ಮಾಡುವ ರೀತಿ ಮಾತನಾಡಿದ್ದಾರೆ. ಆದರೆ, ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಉದ್ಯಮಿಗಳ ಸಾಲ ಮನ್ನಾ ಮಾಡಿದರೆ ಬಡವರ ಹೊಟ್ಟೆ ತುಂಬುತ್ತದೆಯೇ? ಎಂದು ಪ್ರಶ್ನಿಸಿದರು.
ಕಳೆದ ನನ್ನ ಅವಧಿಯಲ್ಲಿ ತಾಂಡಾಗಳ ಅಭಿವೃದ್ಧಿಗೆ ಒತ್ತು ನೀಡಿದ್ದೆ. ಮುಚಖಂಡಿ ತಾಂಡಾ-2ರಲ್ಲಿ ಸಿಸಿ ರಸ್ತೆ ಅಭಿವೃದ್ಧಿಗಾಗಿ .2 ಕೋಟಿ ಅನುದಾನ ನೀಡಿದ್ದೇನೆ. ಆದರೆ, ಬಿಜೆಪಿ ಸರ್ಕಾರದಿಂದ ತಾಂಡಾ ಅಭಿವೃದ್ಧಿಗಳು ಕುಂಠಿತಗೊಂಡಿದ್ದು, ಈ ಬಾರಿ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿ. ತಾಂಡಾ ಅಭಿವೃದ್ಧಿಗೆ ಶ್ರಮಿಸುವೆ ಎಂದು ಮನವಿ ಮಾಡಿದರು. ಇದೇ ವೇಳೆ ಮುಚಖಂಡಿ ತಾಂಡಾದ ಹಲವಾರು ಪ್ರಮುಖರು ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಭೈರಮಟ್ಟಿ ಗ್ರಾಮಸ್ಥರು ಕಾಂಗ್ರೆಸ್ ಸೇರ್ಪಡೆ:
ಭೈರಮಟ್ಟಿಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ 100ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತರನ್ನು ಹಾಗೂ ರೆಡ್ಡಿ ಸಮುದಾಯದ ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾದರು. ಮುಖಂಡರಾದ ಬಸವಂತಪ್ಪ ಮೇಟಿ, ಸಂಗಮೇಶ ದೊಡ್ಡಮನಿ, ನಿಂಗಪ್ಪ ಕೋಟಿ, ಲಕ್ಷ್ಮಣ್ಣಾ ದಡ್ಡಿ, ಜೆಟ್ಟೆಪ್ಪ ಮಾದಾಪೂರ, ಗುರುಬಸಪ್ಪ ವಡ್ರಕಲ್, ಪ್ರಭು ಅಳವಂಡಿ, ಮಲ್ಲಣ್ಣಾ ಬಳೂಲದ, ಬಸವರಾಜ ಬಳಲೂದ, ಗೌಡಪ್ಪ ವಡ್ರಕಲ್, ಯಂಕಣ್ಣಾ ಗೌಡರ, ಶಂಕರಗೌಡ ಹಳ್ಳೂರ, ಬಸವಂತಪ್ಪ ಹಣಸನಗೌಡರ, ಯಂಕಣ್ಣ ಕುರಹಟ್ಟಿ, ಯಂಕಣ್ಣ ಭರಮಗೌಡರ, ಮಲ್ಲಣ್ಣ ಭರಮಗೌಡರ ಸೇರಿದಂತೆ ಹಲವರು ಇದ್ದರು. ರೆಡ್ಡಿ ಸಮುದಾಯದ ಪ್ರಮುಖ ಕಲ್ಲು ಹಳ್ಳೂರ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಾನು ಮಾಡಿದ ಅಭಿವೃದ್ಧಿ ಮುಂದಿಟ್ಟು ಮತ ಕೇಳುವೆ: ಶಾಸಕ ವೀರಣ್ಣ ಚರಂತಿಮಠ
ಸೆಕ್ಟರ್ ನಂ.46ರ ಪ್ರಮುಖರು ಸೇರ್ಪಡೆ:
ನವನಗರದ ಸೆಕ್ಟರ್ ನಂ.46 ನೂರಾರು ಯುವಕರು, ಹಿರಿಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಎಚ್.ವೈ.ಮೇಟಿ ಅವರು ಪಕ್ಷಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.