Asianet Suvarna News Asianet Suvarna News

ಮೋದಿಗೆ ವಿಷ ಸರ್ಪ, ನಾಲಾಯಕ್‌ ಎಂದಿದ್ದಾಯ್ತು! ಈಗ ಮನುಷ್ಯತ್ವ ಇಲ್ಲದ ಪ್ರಧಾನಿಯಂತೆ!

ಈಗಾಗಲೇ ಕಾಂಗ್ರೆಸ್‌ ನಾಯಕರು ನರೇಂದ್ರ ಮೋದಿಗೆ ವಿಷ ಸರ್ಪ, ನಾಲಾಯಕ್‌ ಎಂದು ಹೇಳಿದ್ದಾರೆ. ಈಗ ಮಾಜಿ ಸಿಎಂ ಸಿದ್ದರಾಮಯ್ಯ ಮನುಷ್ಯತ್ವ ಇಲ್ಲದ ಪ್ರಧಾನಿ ಎಂದಿದ್ದಾರೆ.

Modi was a poisonous snake and Nalayak Now like Prime Minister without humanity sat
Author
First Published May 1, 2023, 9:50 PM IST

ತುಮಕೂರು (ಮೇ 1): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಷ್ಟ್ರ ಮತ್ತು ರಾಜ್ಯ ನಾಯಕರ ಮೇಲೆ ರಾಜಕೀಯ ನಾಯಕರು ನಾಲಿಗೆ ಹರಿಬಿಡುವ ಪ್ರಕರಣ ಹೆಚ್ಚಾಗುತ್ತಿವೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವಿಷ ಸರ್ಪ, ನಾಲಾಯಕ್‌ ಎಂದು ಹೇಳಿ ಕಾಂಗ್ರೆಸ್‌ ವಿವಾದ ಮಾಡಿಕೊಂಡಿದೆ. ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಷ್ಯತ್ವ ಇಲ್ಲದ ಪ್ರಧಾನಮಂತ್ರಿ ಎಂದು ಹೇಳಿಕೆ ನೀಡಿ ಮತ್ತೊಂದು ವಿವಾದ ಮೈಮೇಲೆ ಎಳದುಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಕಾಂಗ್ರೆಸ್‌ ಅಭ್ಯರ್ಥಿ ರಾಜಣ್ಣ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ನಾವು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತಂದು ಅಕೌಂಟ್ ಗೆ ಹಾಕ್ತಿವಿ ಎಂದಿದ್ದರು. ಆದರೆ ಇದುವರೆಗೂ 15 ಪೈಸೆ ಕೂಡ ಹಾಕಿಲ್ಲ. ನರೇಂದ್ರ ಮೋದಿ ಬಂದ ಮೇಲೆ ಎಲ್ಲಾ ಬೆಲೆ ಏರಿಕೆಯಾಗಿದೆ. ಕೋರೊನಾ, ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಈಗ ಬಂದು ಮತ ಕೇಳ್ತಾರೆ. ಇಂತಹ ಮನುಷ್ಯತ್ವ ಇಲ್ಲದ ಪ್ರಧಾನಿಗೆ ಮತ ಹಾಕಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮೋದಿ ನಾಲಾಯಕ್! ಮಲ್ಲಿಕಾರ್ಜುನ ಖರ್ಗೆ ಬೆನ್ನಲ್ಲೇ ವಿವಾದ ಸೃಷ್ಟಿಸಿದ ಮಗನ ಹೇಳಿಕೆ!

ಕುಮಾರಸ್ವಾಮಿ 2 ಬಾರಿ ಸಿಎಂ ಆದ್ರೂ ಸಾಲ ಮನ್ನಾ ಮಾಡ್ಲಿಲ್ಲ: ಬಿಜೆಪಿ ಸರ್ಕಾರ ಒಂದು ರೂಪಾಯಿ ಮನ್ನಾ‌ ಮಾಡಲಿಲ್ಲ. ಮನಮೋಹನ್ ಸಿಂಗ್ ಇದ್ದಾಗ ರೈತರ ಸಾಲ 72 ಸಾವಿರ ಕೋಟಿ ಮನ್ನಾ ಮಾಡಿದ್ದರು. ನಾನು 8, 165 ಕೋಟಿ ಮನ್ನಾ ಮಾಡಿದ್ದೆ. ಬಿಜೆಪಿಯವರಿಗೆ ರೈತರ ಸಾಲಮನ್ನಾ ಮಾಡಿ ಎಂದರೆ, ದೇಶ ಆರ್ಥಿಕವಾಗಿ ದಿವಾಳಿಯಾಗುತ್ತೆ ಅಂತಾ ಬಿಜೆಪಿ ಹೇಳುತ್ತಾರೆ. ಆದರೆ ಅಂಬಾನಿ ಅದಾನಿಯವರ ಸಾಲ 12 ಲಕ್ಷ ಕೋಟಿ ಮನ್ನಾ ಮಾಡಿದರು. ಇನ್ನು ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. 2 ಬಾರಿ ಸಿಎಂ ಆದ್ರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಯಾರಿಗೂ ಸೇರ್ತೋ ಗೊತ್ತಿಲ್ಲ ಎಂದು ಟೀಕೆ ಮಾಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀಸಲಾತಿ ಶೇ.75ಕ್ಕೆ ಏರಿಕೆ:  ನಾವು ಅಧಿಕಾರಕ್ಕೆ ಬಂದ್ರೆ ಮೀಸಲಾತಿ ಪ್ರಮಾಣ 50% ಯಿಂದ 75 % ವರೆಗೆ ಹೆಚ್ಚಿಸುತ್ತೇವೆ. ಲಿಂಗಾಯತ, ಒಕ್ಕಲಿಗ, ಹಿಂದುಳಿದ,ದಲಿತ ಹಾಗೂ ಮುಸ್ಲಿಮರಿಗೆ ಮೀಸಲಾತಿ ಕೊಡ್ತೀವಿ. ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸಲಾಗುವುದು. ನಾವು ಅಧಿಕಾರಕ್ಕೆ ಬಂದ ಮೇಲೆ ಎರಡು ವರ್ಷಕ್ಕೆ ಕೆರೆಗಳಿಗೆ ನೀರು ತುಂಬಿಸುತ್ತೇವೆ. ಒಟ್ಟು 54 ಕೆರೆಗಳಿಗೆ ‌ನೀರು ತುಂಬಿಸಲಾಗುವುದು. ರಾಜಣ್ಣ ಗೆದ್ದರೇ ಮಂತ್ರಿ ಮಾಡಬೇಕು ಎಂದಿದ್ದಾರೆ. ನಿವೇಲ್ಲಾ ಗೆಲ್ಲಿಸಿ ಮಂತ್ರಿ ಮಾಡೊದು ನಮಗೆ ಬಿಡಿ. ರಾಜಣ್ಣ ನಮಗೆ ಆತ್ಮೀಯ ಸ್ನೇಹಿತ. ನಮಗೆ ಶಕ್ತಿ ಬಂದರೆ ರಾಜಣ್ಣ ಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.

ಬೆಳಗಾವಿ ಯುವಕನ ಬರ್ಬರ ಕೊಲೆ: ಚಿತ್ರನಟ ಸುದೀಪ್‌ ರೋಡ್‌ ಶೋ ರದ್ದು

ಜೆಡಿಎಸ್‌ ಗೆದ್ದೆತ್ತಿನ ಬಾಲ ಹಿಡಿಯುತ್ತೆ: ಈ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ತಾನೆ ಎಂದು‌ ಮಾತು ತಪ್ಪಲ್ಲ. ಜೆಡಿಎಸ್ ಹೆಸರಿಗೆ ಮಾತ್ರ ಜೆಡಿ ಜನತಾದಳ ಸೆಕ್ಯೂಲರ್ ಅಷ್ಟೇ. ಸೆಕ್ಯೂಲರ್ ಅಂತಾ ಹೆಸರುಟ್ಟಿಕೊಂಡು ಬಿಜೆಪಿ ಜೊತೆ ಸರ್ಕಾರ ಮಾಡಿದರು. ಗೆದ್ದಿತ್ತಿನ ಬಾಲ ಜೆಡಿಎಸ್ ಹಿಡಿತಾರೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಆಗಿದೆ. ಪಂಚರತ್ನ ಅಲ್ಲ ದಶರತ್ನಗಳನ್ನ ಮಾಡಿದರೂ ಕೂಡ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ 20-25 ಬಿಜೆಪಿ 60-65 ಸೀಟ್ ಮಾತ್ರ ಗೆಲ್ಲುತ್ತದೆ. ಇನ್ನು ಕಾಂಗ್ರೆಸ್ 120-130 ಸೀಟ್ ಗೆಲ್ಲುತ್ತದೆ. ಇಲ್ಲಿ ಈ ಬಾರಿ ರಾಜಣ್ಣ ಗೆಲ್ಲಬೇಕು ಎಂದು ಹೇಳಿದರು. 

Follow Us:
Download App:
  • android
  • ios