ಬೆಂಗಳೂರು (ನ.19): ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ಹಾಗೆ ಬಂದು ಹೀಗೆ ಹೋಗಲು ನಾನು ಬಿಜೆಪಿಗೆ ಬಂದಿಲ್ಲ. ಸಚಿವ ಸ್ಥಾನ ಕೊಟ್ಟರೆ ಯಾರಾದ್ರೂ ಬೇಡ ಅಂತಾರಾ.? ಎಂದು ನೂತನ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ. 

 ಸುವರ್ಣ ನ್ಯೂಸ್. ಕಾಂ ಬಳಿ ಮಾತನಾಡಿದ ಪುಟ್ಟಣ್ಣ, ಯಡಿಯೂರಪ್ಪ ಮಾತಿನ ಮೇಲೆ ನಿಲ್ಲುವ ರಾಜಕಾರಣಿ ನಿಜ, ನಾನು ಸದ್ಯಕ್ಕೆ ಸಚಿವ ಸ್ಥಾನದ ಬಗ್ಗೆ ಏನೂ ಹೇಳಲಾರೆ.  ಆದರೆ ಸಚಿವ ಸ್ಥಾನದ ನಿರೀಕ್ಷೆ ಇರೋದಂತೂ ಸತ್ಯ ಎಂದರು. 

ಕಟೀಲ್ ಭೇಟಿ ಮಾಡಿದ ಶಾಸಕರ ನಿಯೋಗ : ಆ 10 ಸಚಿವರನ್ನು ಕೈ ಬಿಡಲು ಸೂಚನೆ-ರಹಸ್ಯ ಹೊರಕ್ಕೆ ...

ಕಳೆದ ಸರ್ಕಾರ ಬದಲಾವಣೆ ಸಂಧರ್ಭದಲ್ಲಿ ನಮ್ಮ  ಕಾರ್ಯವನ್ನು ವರಿಷ್ಟರ ಗಮನಕ್ಕೆ ತರಲಾಗಿದೆ. ನಾವು ಪಕ್ಷಕ್ಕೆ ಹೊಸದಾಗಿ ಬಂದಿರುವವರು.  ಹಲವಾರು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿರುವವರಿಗೂ ಆಸೆಗಳು ಇರುತ್ತವೆ. ಇದೊಂದು ಸಂದಿಗ್ಧ ಪರಿಸ್ಥಿತಿ.  ನನಗೆ ಸಚಿವ ಸ್ಥಾನ  ಸಿಗುವ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗಲ್ಲ ಎಂದು ಪುಟ್ಟಣ್ಣ ಹೇಳಿದರು. 

ನಾನು ಇರುವ ವರೆಗೂ ಬಿಜೆಪಿ ಯಲ್ಲೇ ಇದ್ದು ಕೆಲಸ ಮಾಡಲು ಬಂದಿದ್ದೇನೆ.  ಹಾಗೆ ಬಂದು ಹೀಗೆ ಹೋಗಲು ನಾನು ಬಿಜೆಪಿ ಗೆ ಬಂದಿಲ್ಲ. ಅಂತಿಮವಾಗಿ ವರಿಷ್ಠರ ತೀರ್ಮಾನಕ್ಕೆ  ನಾನು ಬದ್ದನಾಗಿರುತ್ತೇನೆ  ಎಂದು ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.