ಆರ್.ಅಶೋಕ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಎಚ್.ವಿಶ್ವನಾಥ್
ನಾನು ಬಾಲಕನಾಗಿದ್ದಾಗ ತುರ್ತು ಪರಿಸ್ಥಿತಿ ಕಾರಣ ಜೈಲು ಪಾಲಾಗಿದ್ದಾಗಿ ಆರ್. ಅಶೋಕ್ ಹೇಳಿದ್ದಾರೆ. ವಾಸ್ತವವಾಗಿ ಬಾಲರನ್ನು ಜೈಲಿಗಟ್ಟಲು ಸಾಧ್ಯವೇ? ಆದ್ದರಿಂದ ಅಶೋಕ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಚಾಟಿ ಬೀಸಿದರು.
ಮೈಸೂರು (ಜೂ.27): ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಳಸಿಕೊಂಡಿದ್ದರು ಎಂಬುದನ್ನು ಬಿಜೆಪಿಯವರು ಅರಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಚಾಟಿ ಬೀಸಿದರು. ತುರ್ತು ಪರಿಸ್ಥಿತಿಯ 49ನೇ ದಿನವನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿಯವರು ಕರಾಳ ದಿನವಾಗಿ ಆಚರಿಸಿದ್ದಾರೆ. ಆದರೆ ಆ ಸಂದರ್ಭವು ರಾಜ್ಯದ ಪಾಲಿಗೆ ಕರುಣಾಳ ದಿನವಾಗಿತ್ತು ಎಂಬುದನ್ನು ಬಿಜೆಪಿ ಅರಿಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ತುರ್ತು ಪರಿಸ್ಥಿತಿ ಜಾರಿಯಾಗಿ 49 ವರ್ಷ ಕಳೆದಿದೆ ಎಂದು ಪ್ರತಿಭಟಿಸಿರುವ ಬಿಜೆಪಿಯವರು ಏನು ಸಾಧನೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ದೇವರಾಜ ಅರಸರ ಆಡಳಿತದಲ್ಲಿ ಆ ವೇಳೆ ಕನ್ನಡ ಮತ್ತು ಕರ್ನಾಟಕದ ಮಟ್ಟಿಗೆ ಕರುಣಾಳು ಅಧ್ಯಾಯವಾಗಿತ್ತು. ಈ ವಾಸ್ತವ ತಿಳಿಯಬೇಕು. ನಾನು ಬಾಲಕನಾಗಿದ್ದಾಗ ತುರ್ತು ಪರಿಸ್ಥಿತಿ ಕಾರಣ ಜೈಲು ಪಾಲಾಗಿದ್ದಾಗಿ ಆರ್. ಅಶೋಕ್ ಹೇಳಿದ್ದಾರೆ. ವಾಸ್ತವವಾಗಿ ಬಾಲರನ್ನು ಜೈಲಿಗಟ್ಟಲು ಸಾಧ್ಯವೇ? ಆದ್ದರಿಂದ ಅಶೋಕ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದರು.
50 ವರ್ಷದ ಹಿಂದೆ ಹುಟ್ಟಿದವರು ಬಟ್ಟೆ, ಊಟದ ತಟ್ಟೆಯನ್ನು ಅಡವಿಟ್ಟು ಜೀತದಾಳಾಗಿ ದುಡಿದು ಜೀವನ ಸಾಗಿಸುತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ಅವರಿಗೆ ಮುಕ್ತಿ ದೊರಕಿಸಿದರು. ಭೂಮಿ ಇಲ್ಲದ ಲಕ್ಷಾಂತರ ಮಂದಿಗೆ ಭೂಮಿ ದೊರಕಿಸಿಕೊಟ್ಟರು. ಇನ್ನು ಅಶೋಕ್ ಅವರು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಬದಲಿಗೆ ಒಂದೇ ಮನೆಯವರು ಏಕೆ ಜೈಲಿನಲ್ಲಿದ್ದಾರೆ? ಪೋಕ್ಸೋ ಕಾಯ್ದೆಯಡಿ ಸ್ವಾಮೀಜಿಗಳು ಜೈಲಿಗೆ ಯಾಕೆ ಹೋಗಿದ್ದಾರೆ. ಪ್ರಧಾನಿ ಮೋದಿ ಅವರ ಕಾರಿನ ಮೇಲೆ ಚಪ್ಪಲಿ ತೂರಲು ಕಾರಣ ಏನು? ಸಂಸದೆ ಕಂಗನಾಗೆ ಓರ್ವ ಮಹಿಳಾ ಪೊಲೀಸ್ ಪೇದೆ ಕೆನ್ನೆಗೆ ಹೊಡೆದಿದ್ದು ಯಾಕೆ, ಒಂದೇ ಮಳೆಗೆ ರಾಮ ಮಂದಿರ ಸೋರುತ್ತಿರುವ ವರ್ತಮಾನದ ಬಗ್ಗೆ ಚಿಂತಸಬೇಕು ಎಂದರು.
ಬಿಜೆಪಿಯವರು ಕೇಂದ್ರದವರಿಗೆ ನೀಡಿರುವ ಕಪ್ಪು ಕಾಣಿಕೆ ಸ್ಪಷ್ಟಡಿಸಲಿ: ಸಚಿವ ಚಲುವರಾಯಸ್ವಾಮಿ
ಬೆಲೆ ಏರಿಕೆಯಿಂದ ಜನ ಕಂಗಾಲು: ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಾಗಲಿ ಏಕೆ ಚಿಂತಿಸುತ್ತಿಲ್ಲ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ರಾಜ್ಯದ ಈಗಿನ ವಿದ್ಯಮಾನ, ಪೆಟ್ರೋಲ್ಮತ್ತು ಹಾಲಿನ ಬೆಲೆ ಏರಿಕೆಯಿಂದ ಆಗಿರುವ ಸಂಕಷ್ಟದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯುವಂತೆ ಅವರು ಆಗ್ರಹಿಸಿದರು.