Asianet Suvarna News Asianet Suvarna News

ಬಿಜೆಪಿಯವರು ಕೇಂದ್ರದವರಿಗೆ ನೀಡಿರುವ ಕಪ್ಪು ಕಾಣಿಕೆ ಸ್ಪಷ್ಟಡಿಸಲಿ: ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸಿದ ಸಮಯದಲ್ಲಿ ಕೇಂದ್ರದವರಿಗೆ ಎಷ್ಟು ಕಪ್ಪು ಕಾಣಿಕೆ ನೀಡಿದ್ದರು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸವಾಲು ಹಾಕಿದರು. 

minister n chaluvarayaswamy slams on bjp at belagavi gvd
Author
First Published Jun 27, 2024, 6:46 PM IST

ಬೆಳಗಾವಿ (ಜೂ.27): ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸಿದ ಸಮಯದಲ್ಲಿ ಕೇಂದ್ರದವರಿಗೆ ಎಷ್ಟು ಕಪ್ಪು ಕಾಣಿಕೆ ನೀಡಿದ್ದರು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸವಾಲು ಹಾಕಿದರು. ರಾಹುಲ್ ಗಾಂಧಿಗೆ ಕಾಣಿಕೆ ನೀಡಲು ದರ ಏರಿಕೆ ಎಂಬ ಆರ್.ಅಶೋಕ ಆರೋಪಕ್ಕೆ ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇವರು ರಾಜ್ಯದಲ್ಲಿ ಆಡಳಿತ ಮಾಡಿದಾಗ ಎಷ್ಟು ಕೊಟ್ಟಿದ್ದಾರೆ? ಕೇಂದ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಎಷ್ಟು ಕೊಟ್ಟಿದ್ದಾರೆ? ನಾವು ಇವರ ರೀತಿ ಮಾಡಿಲ್ಲ ಎಂದು ತಿಳಿಸಿದರು.

ಹೊಸ ಸರ್ಕಾರ ಬಂದಾಗ ಬೆಲೆ ಏರಿಕೆ ಹೆಚ್ಚಾಗಿದೆ. ಶೇ.5 ರಿಂದ ಶೇ.10 ರಷ್ಟು ಹೆಚ್ಚಾಗುತ್ತದೆ. ಈ‌ ಹಿಂದೆ ಎನ್‌ಡಿಎ ಸರ್ಕಾರವಿದ್ದಾಗ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದರು. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಸೇರಿದಂತೆ ಇನ್ನಿತರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದರು.

ಸಂವಿಧಾನ ಬದಲಾಯಿಸಲು ಅದು ಮಗ್ಗಿ ಪುಸ್ತಕವಲ್ಲ: ಮಾಜಿ ಸಚಿವ ಎನ್.ಮಹೇಶ್

ಕರ್ನಾಟಕಕ್ಕೆ ಅನುದಾನ ಕೂಡ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದೆ. ಹಾಲು ಹೆಚ್ಚು ಶೇಖರಣೆ ಆಗುತ್ತಿದ್ದು, ಹೀಗಾಗಿ 50 ಎಂಎಲ್‌ ಹೆಚ್ಚು ಮಾಡಿದ್ದೇವೆ. ₹2 ಹೆಚ್ಚು ಮಾಡಿದ್ದು 50 ಎಂಎಲ್ ಹೆಚ್ಚು ಮಾಡಿದ್ದೇವೆ. ರೈತರಿಗೆ ಈಗಾಗಲೇ ₹5 ಕೊಡುತ್ತಿದ್ದೇವೆ. ಹೆಚ್ಚುವರಿ ಹಣ ಕೊಡುವುದಿಲ್ಲ. ಹಾಲು ಹೆಚ್ಚು ಉತ್ಪಾದನೆ ಆಗುತ್ತಿತ್ತು. ಅದನ್ನು ಕೊಳ್ಳಲು 50 ಎಂಎಲ್ ಜಾಸ್ತಿ ಮಾಡಿದ್ದೇವೆ. ಅದಕ್ಕೆ ₹2 ಹಣ ಪಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಟ್ಟಿದ್ದೇವೆ. ಅದನ್ನು ನಿಲ್ಲಿಸಿಲ್ಲ. 5 ವರ್ಷ ಬಿಜೆಪಿಯವರು ಆಡಳಿತ ನಡೆಸಲು ವಿಫಲರಾಗಿದ್ದಾರೆ. ಅದಕ್ಕಾಗಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಎನ್‌ಡಿಆರ್‌ಎಫ್ ಅನುದಾನ ಕೊಡಲಿಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗಿ ನಾವು ಅನುದಾನ ತಂದಿದ್ದೇವೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲದಿರುವುದರಿಂದ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಗೂಂಡಾ ಆಗಿ 'ರೂಪಾಂತರ'ಗೊಂಡ ರಾಜ್‌ ಬಿ.ಶೆಟ್ಟಿ: ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲಿ ಕಮಾಲ್‌!

ಬಿಜೆಪಿಯವರು 5 ವರ್ಷದ ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈಗ ವಿಪಕ್ಷದಲ್ಲಿ ಕುಳಿತು ವಿನಾಕಾರಣ ಆರೋಪ‌ ಮಾಡುವುದು ಬಿಜೆಪಿಯವರ ಕೆಲಸವಾಗಿದೆ. ಕೇಂದ್ರ ಸರ್ಕಾರ 10 ವರ್ಷದಲ್ಲಿ ಯಾವುದೇ ಭರವಸೆ ಈಡೇರಿಸಿಲ್ಲ. ಸಿಎಂ‌ ಮನೆಯ ಮುಂದೆ ಧರಣಿ ನಡೆಸುವ ಬಿಜೆಪಿಗೆ ಅದೆ ಕಾಯಕ.
-ಚಲುವರಾಯಸ್ವಾಮಿ, ಕೃಷಿ ಸಚಿವ.

Latest Videos
Follow Us:
Download App:
  • android
  • ios