ಸಿದ್ದರಾಮಯ್ಯನವರೇ ಕಾಂತರಾಜು ವರದಿ ಜಾರಿಗೆ ರಾಯಣ್ಣನ ಧೈರ್ಯವಿಲ್ಲವೇ: ಎಚ್.ವಿಶ್ವನಾಥ್

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂತರಾಜು ಆಯೋಗದ ವರದಿಯನ್ನು ಯಾಕೆ ಹೊರತರಲಿಲ್ಲ, ಅಷ್ಟೂ ಧೈರ್ಯ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು. 

Mlc H Vishwanath Slams On Cm Siddaramaiah Over Kantaraju Report gvd

ಮೈಸೂರು (ಸೆ.18): ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂತರಾಜು ಆಯೋಗದ ವರದಿಯನ್ನು ಯಾಕೆ ಹೊರತರಲಿಲ್ಲ, ಅಷ್ಟೂ ಧೈರ್ಯ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿ ಹೊರಗೆ ತರಲಿಲ್ಲ. ಇದೇನಾ ನಿಮ್ಮ ಧೈರ್ಯ ಸಿದ್ದರಾಮಯ್ಯ. ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತನಾಡ್ತೀರಾ. ಆದರೆ ಅವರ ಧೈರ್ಯ ನಿಮಗೇಕಿಲ್ಲ ಎಂದು ಮೊದಲಿಸಿದರು. ಬಸವಣ್ಣ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಎಂದು ಮಾತನಾಡುವ ಸಿದ್ದರಾಮಯ್ಯ ಕೇವಲ ಭಾಷಣಕ್ಕೆ ಸೀಮಿತರಾಗಿದ್ದಾರೆ.

ಸ್ವಾಮೀಜಿಗಳು ರಾಜಕಾರಣಿಗಳಂತಾಗಿದ್ದಾರೆ. ರಾಜಕಾರಣಿಗಳು ಸ್ವಾಮೀಜಿಗಳಂತಾಗಿದ್ದಾರೆ. ಯಾವ ಮಠವೂ ರಾಜಕೀಯದಿಂದ ಹೊರತಾಗಿಲ್ಲ. ಸ್ವಾಮೀಜಿಗಳು ಮೀಸಲಾತಿ ವಿಚಾರ ಮಾತನಾಡುವಾಗ ಚಿಂತಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಶೋಷಿತರ ಧ್ವನಿಯಾಗಿದ್ದರು. 2ನೇ ಅವಧಿಯಲ್ಲಿ ಸಿಎಂ ಆದ ಬಳಿಕ ಭ್ರಷ್ಟರ ಧ್ವನಿ ಆಗಿದ್ದಾರೆ. ಸಿದ್ದರಾಮಯ್ಯ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಮೊದಲಿನಂತೆ ಇಲ್ಲ, ಬದಲಾಗಿದ್ದಾರೆ ಎಂದು ಅವರು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಸಂಪತ್ತು: ಕೇಂದ್ರ ಸಚಿವ ವಿ.ಸೋಮಣ್ಣ

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಬಗ್ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸರಿಯಾಗಿ ತಿಳಿದುಕೊಂಡಿಲ್ಲ. ದೇವರಾಜ ಅರಸು ಅವರು ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿರುವುದು ಸರಿಯಲ್ಲ. ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ಅವರಿಗೆ ದೇವರಾಜ ಅರಸು ಅವರ ಬಗ್ಗೆ ಗೊತ್ತಿಲ್ಲ, ಓದಿಕೊಂಡಿಲ್ಲ ಎನಿಸುತ್ತದೆ ಎಂದು ಟೀಕಿಸಿದರು.

ಅರವಿಂದ ಬೆಲ್ಲದ್ ಅವರು ಮೊದಲು ಕರ್ನಾಟಕದ ಇತಿಹಾಸವನ್ನು ಓದಬೇಕು. ಹುಬ್ಬಳ್ಳಿಯಲ್ಲಿ ಸಾಕಷ್ಟು ಆಸ್ತಿಯನ್ನು ನೀವು ಹೊಂದಿದ್ದೀರಾ. ಬಡವರ ಕಷ್ಟ ನೋವು ನಿಮಗೆ ತಿಳಿದಿಲ್ಲ. ಲಿಂಗಾಯತರಿಗೆ ಅವರು ಮೀಸಲಾತಿ ನೀಡಲಿಲ್ಲ ಎಂದಿದ್ದೀರಾ. ಸಂವಿಧಾನ ಜಾರಿಗೆ ಬರುವ ಮುನ್ನವೇ ರಾಜಪ್ರಭುತ್ವದಲ್ಲಿ ಮೈಸೂರು ಮಹಾರಾಜರು ಮೀಸಲಾತಿ ನೀಡಿದ್ದಾರೆ. 3ಬಿ ನಲ್ಲಿ ಲಿಂಗಾಯತರಿಗೆ ಈಗಲೂ ಮೀಸಲಾತಿ ಇದೆ. ಲಿಂಗಾಯತರಲ್ಲಿ ಅನೇಕ ಬಡವರು ಇದ್ದಾರೆ ಎಂದು ಅವರು ಕುಟುಕಿದರು.

ದೇವರಾಜ ಅರಸು ಅವರು ಯಾವುದೇ ಒಂದು ಜಾತಿಯ ಪರವಾಗಿ ಕೆಲಸ ಮಾಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ನಾಗಮಂಗಲ ಗಲಭೆ ಪ್ರಕರಣ ಆಗಬಾರದಿತ್ತು. ಈ ಸಂಬಂಧ ಜಿಲ್ಲಾ ಸಚಿವರು ಸುಮ್ಮನೆ ಭಾಷಣ ಮಾಡುತ್ತಾರೆ. ಆದರೆ ಸೂಕ್ಷ್ಮವನ್ನೇ ಅರ್ಥ ಮಾಡಿಕೊಂಡಿಲ್ಲ ಎಂದಾದರೆ ಯಾವ ಸೀಮೆ ಮಂತ್ರಿ? ಎಲ್ಲರನ್ನು ಕರೆದು ಮೊದಲೇ ಶಾಂತಿ ಸಭೆ ಮಾಡಬಹುದಿತ್ತಲ್ಲವೇ ಎಂದು ಅವರು ಸಚಿವ ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 32.45 ಲಕ್ಷ ಜಾಗತಿಕ ಹೂಡಿಕೆ ಸೆಳೆದ ಭಾರತ: ಪ್ರಲ್ಹಾದ್ ಜೋಶಿ

ಮುನಿರತ್ನ ನಮ್ಮ ಬಿಜೆಪಿ ಶಾಸಕರು. ಅವರು ನಮ್ಮ ಜೊತೆಯಲ್ಲೇ ಬಿಜೆಪಿಗೆ ಬಂದವರು. ಕಾಂಗ್ರೆಸ್ ಬಿಟ್ಟು ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ನಮ್ಮ ಜೊತೆ ಬಂದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕೂಡ ಮಾಡಿದರು. ಆದರೆ ಜಾತಿ ನಿಂದನೆ ಮಾಡುವುದು ಅಂದರೆ ಏನರ್ಥ? ಮುನಿರತ್ನನ ಸಿ.ಟಿ. ರವಿ, ಅಶ್ವತ್ಥನಾರಾಯಣ್ ಅವರು ಸಮರ್ಥನೆ ಮಾಡಬಾರದು. ಒದ್ದು ಜೈಲಿಗೆ ಹಾಕಬೇಕು. ಮುನಿರತ್ನ ಎರಡು ದಿನ ಜೈಲಿನಲ್ಲಿ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios