ಎಲೆಕ್ಷನ್ ಟೈಂನಲ್ಲೇ ಹೇಳ್ಬೇಕಿತ್ತಾ?' ಸಚಿವ ಜಮೀರ್ 'ಕರಿಯ' ಹೇಳಿಕೆಗೆ ಎಸ್‌ಟಿ ಸೋಮಶೇಖರ್ ಅಸಮಾಧಾನ

ಜಮೀರ್-ಹೆಚ್‌ಡಿಕ ಗಳಸ್ಯ-ಕಂಠಸ್ಯ ದೋಸ್ತರು. ಅವ್ರದ್ದು ಇವ್ರಿಗೆ, ಇವ್ರದ್ದು ಅವ್ರಿಗೆ ಎಲ್ಲವೂ ಗೊತ್ತಿದೆ. ಎಲೆಕ್ಷನ್ ಸಮಯದಲ್ಲಿ ಒಬ್ಬ ಕ್ಯಾಬಿನೆಟ್ ಮಂತ್ರಿ ಹೇಗೆ ಮಾತಾಡ್ಬೇಕು ಅನ್ನೋದು ಗೊತ್ತಿರ್ಬೇಕು. ಸಚಿವ ಜಮೀರ್ ವಿರುದ್ಡ ಎಸ್‌ಟಿಎಸ್ ಅಸಮಾಧಾನ

MLA ST Somashekha reacts about minister zameer ahmed khan controversy statement against hdk rav

ಬೆಂಗಳೂರು (ನ.15): ಯಶವಂತಪುರದ ವಾಜರಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ಹಲವು ಕುಟುಂಬಗಳು ವಾಸ ಮಾಡುತ್ತಿವೆ. ಅವರಿಗೆ ಹಕ್ಕುಪತ್ರ ನೀಡುವಂತೆ ಬಿಡಿಎ ಕೂಡ‌ ಹೇಳಿದೆ. ಅದರಂತೆ ತಹಶೀಲ್ದಾರ್ ಹಕ್ಕುಪತ್ರ ಕೂಡ ಕೊಟ್ಟಿದ್ದಾರೆ. ಆದ್ರೆ ಜಂಟಿ ಆಯುಕ್ತರು ಮಾತ್ರ ಸಹಿ ಮಾಡಿ ಕೊಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ ಎಂದು ಶಾಸಕ ಎಸ್‌ಟಿ ಸೋಮಶೇಖರ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂಟಿ ಆಯುಕ್ತರು ಬಡವರ ಬಗ್ಗೆ ಯಾಕೆ ಗಮನ ಕೊಡ್ತಿಲ್ಲ? ನಾನು ಶಾಸಕನಾದಾಗಿಂದ ಇಂಥ ಜಂಟಿ ಆಯುಕ್ತರನ್ನು ನೋಡಿರಲಿಲ್ಲ. ಇದುವರೆಗೂ ಸಹಿ ಮಾಡಿ ಕೊಟ್ಟಿಲ್ಲ. ಇಂಥ ಲಜ್ಜೆಗೆಟ್ಟ ಅಧಿಕಾರಿಗಳನ್ನು ಕೂಡಲೇ ಇಲ್ಲಿಂದ ಎತ್ತಂಗಡಿ ಮಾಡ್ಬೇಕು. ಇಂಥ ಅಧಿಕಾರಿಗಳು ಇರ್ಬಾದು ಎಂದು ಸಿಎಂ ಡಿಸಿಎಂ ಗೆ ಮನವಿ ಮಾಡಿದರು. ಒಂದು ವೇಳೆ ಕ್ರಮ ಆಗದಿದ್ದರೆ ನಾಳೆ ಸಂಜೆ ಸಿಎಂ ಭೇಟಿ ಮಾಡಿ ಅಧಿಕಾರಿಗಳ ದರ್ಪದ ಬಗ್ಗೆ ದೂರು ನೀಡುತ್ತೇನೆ ಎಂದರು.

ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ 'ಕಳ್ಳ' ಎಂದಾಗ ಯಾಕೆ ಚರ್ಚಿಸಲಿಲ್ಲ? ಸಚಿವ ಜಮೀರ್ ಬೆನ್ನಿಗೆ ನಿಂತ ಡಿಕೆ ಸುರೇಶ್

ಸಿಪಿವೈ ಒಬ್ಬ ಮಹಾನ್ ಕಲಾಕಾರ:

ಸಚಿವ ಜಮೀರ್ ಹೇಳಿಕೆ ಬಗ್ಗೆ ಸಿಪಿವೈ ಅಸಮಾಧಾನ ಕುರಿತಂತೆ ಪ್ರತಿಕ್ರಿಯಿಸಿದ ಎಸ್‌ಟಿ ಸೋಮಶೇಖರ್ ಅವರು, ಸಿಪಿವೈ ಒಬ್ಬ ಮಹಾನ್ ಕಲಾಕಾರ, ಕಲಾಪುರುಷ, ಯೋಗಪುರುಷ. ಚುನಾವಣೆವರೆಗೂ ಸುಮ್ಮನಿದ್ದು ಚುನಾವಣೆ ಆದ್ಮೇಲೆ ಯಾಕೆ ಹೀಗೆ ಮಾತಾಡ್ತಿದ್ದಾನೆ. ಅದ್ರಲ್ಲೇನೋ ಟ್ರಿಕ್ಸ್ ಇರ್ಬೇಕು. ವಾಸ್ತವಾಂಶ ಹೇಳಿದಂತೆ ಕಾಣ್ತಿದೆ, ಯಾಕೆ‌ ಹೇಳಿದ್ರೋ ಗೊತ್ತಿಲ್ಲ. 23 ರಂದು ಎಲ್ಲವೂ ಗೊತ್ತಾಗಲಿದೆ. ಸಿಪಿವೈ 100 ಪರ್ಸೆಂಟ್ ಸೋಲುವ ಪ್ರಶ್ನೆಯೇ ಇಲ್ಲ. ಯೋಗೇಶ್ವರ್ ಮಾಡಿರುವ ಸಾಧನೆಗಳು, ಕೆಲ್ಸಗಳು ಅವ್ರ ಕೈ ಹಿಡಿಯುತ್ತವೆ ಎಂದರು.

ಜಮೀರ್ ಹೇಳಿಕೆಯಿಂದ ಎಫೆಕ್ಟ್ ಇಲ್ಲ:

ಹೆಚ್‌ಡಿಕೆಗೆ 'ಕರಿಯ'ಎಂಬ ಸಚಿವ ಜಮೀರ್ ಹೇಳಿಕೆಯಿಂದ ಯಾವುದೇ ಎಫೆಕ್ಟ್ ಇಲ್ಲ. ಆದರೆ ಜಮೀರ್ ಹೇಳಿಕೆಯಿಂದ ಸ್ವಲ್ಪ ಜನರಿಗೆ ಅಸಮಾಧಾನವಾಗಿರುವುದು ನಿಜ. ಎಲೆಕ್ಷನ್ ಸಮಯದಲ್ಲಿ ಈ ರೀತಿ ಹೇಳಬಾರದಿತ್ತು. ಅದು ಅವರ ವೈಯಕ್ತಿಕವಾಗಿ ಮಾತನಾಡಿರಬಹುದು. ಅವರ ಫ್ರೆಂಡ್ಶಿಪ್ ಬಿಟ್ಟ ನಂತರ ಈ ರೀತಿ ಮಾತನಾಡಿರಲಿಲ್ಲ. ಆದರೆ ಎಲೆಕ್ಷನ್ ದಿನನೆ ಇದ್ನೆಲ್ಲ ಹೇಳ್ಬೇಕಿತ್ತಾ? ಎಂದು ಪ್ರಶ್ನಿಸಿದರು.

'ಸಚಿವ ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಒಂದಷ್ಟು ನಷ್ಟ ಆಗಿದೆ' ಎಂದ ಸಿಪಿವೈ; ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸೈನಿಕ?

ಜಮೀರ್-ಹೆಚ್‌ಡಿಕ ಗಳಸ್ಯ-ಕಂಠಸ್ಯ ದೋಸ್ತರು. ಅವ್ರದ್ದು ಇವ್ರಿಗೆ, ಇವ್ರದ್ದು ಅವ್ರಿಗೆ ಎಲ್ಲವೂ ಗೊತ್ತಿದೆ. ಎಲೆಕ್ಷನ್ ಸಮಯದಲ್ಲಿ ಒಬ್ಬ ಕ್ಯಾಬಿನೆಟ್ ಮಂತ್ರಿ ಹೇಗೆ ಮಾತಾಡ್ಬೇಕು ಅನ್ನೋದು ಗೊತ್ತಿರ್ಬೇಕು. ಇಂಥ ಮಾತು ಸಾರ್ವಜನಿಕ ವಲಯಕ್ಕೆ ಹೋದ ಸಂದರ್ಭದಲ್ಲಿ ಏನೇನು ಅನಾಹುತ ಆಗುತ್ತೆ ಅನ್ನೋದ್ನ ಯೋಗೇಶ್ವರ್ ಮಾತಾಡಿದ್ದಾನೆ. ಈಗ ಮಾತಾಡಿ ಆಗಿದೆ ಮುಂದೆ ಯೋಚನೆ ಮಾಡಿ ಮಾತನಾಡಬೇಕು ಎಂದು ಜಮೀರ್‌ಗೆ ಸಲಹೆ ನೀಡಿದರು.

Latest Videos
Follow Us:
Download App:
  • android
  • ios