'ಸಚಿವ ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಒಂದಷ್ಟು ನಷ್ಟ ಆಗಿದೆ' ಎಂದ ಸಿಪಿವೈ; ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸೈನಿಕ?

ಇದು ನನ್ನ ರಾಜಕೀಯ ಜೀವನದ ದೊಡ್ಡ ಚುನಾವಣೆಯಾಗಿದೆ. ನನ್ನ ಈ ಚುನಾವಣೆಯಲ್ಲಿ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಧನ್ಯವಾದ ತಿಳಿಸಿದರು.

Channapattana by election 2024 congress candidate cp yogeshwar statement rav

ಚನ್ನಪಟ್ಟಣ (ನ.14): ಇದು ನನ್ನ ರಾಜಕೀಯ ಜೀವನದ ದೊಡ್ಡ ಚುನಾವಣೆಯಾಗಿದೆ. ನನ್ನ ಈ ಚುನಾವಣೆಯಲ್ಲಿ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಧನ್ಯವಾದ ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆ ಹಿನ್ನಲೆ ಇಂದು ಸ್ವನಿವಾಸದಲ್ಲಿಸುದ್ದಿಗೋಷ್ಠಿ ಕರೆದು ಮಾತನಾಡಿದ ಸಿಪಿ ಯೋಗೇಶ್ವರ್ ಅವರು, ನನ್ನ ಈ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಸೇರಿ ಹಲವು ಸಚಿವರು ಶಾಸಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಅದರಲ್ಲೂ ಡಿ.ಕೆ.ಸುರೇಶ್ ವಿಶೇಷವಾಗಿ ಕೆಲಸ ಮಾಡಿದ್ದಾರೆ. ಈ ಚುನಾವಣೆ ಇಷ್ಟೊಂದು ತೀವ್ರತೆ ಪಡೆಯುತ್ತೆ ಅಂದುಕೊಂಡಿರಲಿಲ್ಲ. ಇದು ಕುಮಾರಸ್ವಾಮಿ ರಿಂದ ತೆರವಾದ ಕ್ಷೇತ್ರ, ಅವರು ಕುಟುಂಬಕ್ಕೆ ಉಳಿಸಿಕೊಳ್ಳಲು ಮುಂದಾದ್ರು. ರಾಜಕೀಯ ದೈತ್ಯ ನಾಯಕ ದೇವೇಗೌಡರ ಹಠ, ಮೊಮ್ಮಗನ ಗೆಲ್ಲಿಸುವ ಶಪಥ ಮಾಡಿದ್ರು. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರನನ್ನ ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಿದ್ರು.
ಎರಡೂ ಕಡೆಯೂ ಸಮಬಲದ ಹೋರಾಟ ನಡೆದಿದೆ ಎಂದರು. 

ಬೊಂಬೆನಾಡಲ್ಲಿ ಸೂತ್ರದಾರರ ಪ್ರತಿಷ್ಠೆ ಪಣಕ್ಕೆ: ಇಬ್ಬರೂ ಅಭ್ಯರ್ಥಿಗಳಿಗೆ ಸಿನಿಮಾ ನಂಟು

ಈ ಚುನಾವಣೆ ವೇಳೆ ಕೆಲವರ ಹೇಳಿಕೆಗಳು ಹಾಗೂ ಮಾತುಗಳು ಜನರ ಭಾವನೆಗೆ ಘಾಸಿ ಮಾಡಿದ್ದು ನಿಜ. ಸಚಿವ ಜಮೀರ್ ಅವರ ಹೇಳಿಕೆಯಿಂದ ನಮಗೆ ಒಂದಷ್ಟು ಲಾಭ ಆದ್ರೆ, ಒಂದಷ್ಟು ನಷ್ಟ ಆಗಿದೆ. ಮುಸ್ಲಿಂ ಮತಗಳ ಕ್ರೂಡೀಕರಣ ಒಂದುಕಡೆ ಆದ್ರೆ ಜಮೀರ್ ಹೇಳಿಕೆಯಿಂದ ಇನ್ನೊಂದು ಸಮುದಾಯಕ್ಕೆ ಹೊಡೆತ ಬಿದ್ದಿದೆ ಅವರ ಹೇಳಿಕೆಯಿಂದ ಆಘಾತವಾಗಿದೆ ಎಂದು ಅಸಮಾಧಾನ ಹೊರಹಾಕಿದರು, ಮುಂದುವರಿದು. ಆದರೂ ನಿರಾಶಾದಾಯಕ ವಿಷಯ ಏನಿಲ್ಲ, ಯಾರೇ ಗೆದ್ರೂ ಕೂದಲೆಳೆ ಅಂತರದಲ್ಲಿ ಗೆಲ್ತೀವಿ ಎಂದರು.

Latest Videos
Follow Us:
Download App:
  • android
  • ios