Asianet Suvarna News Asianet Suvarna News

ಬಿಜೆಪಿ ಅ​ಧಿಕಾರ ಬಂದ ಮೇಲೆ ಹೆಚ್ಚಿದ ದಾರಿದ್ರ್ಯ: ಶಾಸಕ ಶರತ್‌ ಬಚ್ಚೇಗೌಡ

ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿ​ಕಾರಕ್ಕೆ ಬಂದಾಗಿನಿಂದ ದೇಶ ಹಾಗೂ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ದಾರಿದ್ರ್ಯ ಹೆಚ್ಚಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. 

MLA Sharath Bachegowda Outraged Against BJP Govt At Hoskote gvd
Author
First Published Dec 30, 2022, 8:08 PM IST

ಹೊಸಕೋಟೆ (ಡಿ.30): ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿ​ಕಾರಕ್ಕೆ ಬಂದಾಗಿನಿಂದ ದೇಶ ಹಾಗೂ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ದಾರಿದ್ರ್ಯ ಹೆಚ್ಚಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ತಾಲೂಕಿನ ಕಸಬಾ ಹೋಬಳಿಯ ವೆಂಕಟಾಪುರದಲ್ಲಿ ಶಾಸಕರ ಅನುದಾನದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ, ಬೆಲೆ ಹೆಚ್ಚಳ ಹಾಗೂ ಸಾರ್ವಜನಿಕ ಉದ್ದಿಮೆಗಳ ಮಾರಾಟದಿಂದ ದೇಶವನ್ನೇ ದಾರಿದ್ರ್ಯಕ್ಕೆ ನೂಕಿರುವ ಬಿಜೆಪಿ ಸರ್ಕಾರ, ಕೊರೋನಾ ಸಂದರ್ಭದಲ್ಲಿ ಔಷ​ಧ ಸೇರಿದಂತೆ ಎಲ್ಲದರಲ್ಲೂ ಲೂಟಿ ಮಾಡಿದ್ದಾಯಿತು. 

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ, ಬೆಲೆ ಏರಿಕೆ ಬಿಸಿ ತಟ್ಟುವಂತೆ ಮಾಡಿ ಜನಸಾಮಾನ್ಯರು ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದು ಹೇಳಿದರು. ಕಾಂಗ್ರೆಸ್‌ ದೀನ ದಲಿತರ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಎಲ್ಲ ಸಮುದಾಯದವರ ಏಳಿಗೆಗಾಗಿ ದುಡಿಯುವ ಪಕ್ಷವಾಗಿದೆ. ಪಕ್ಷದ ತತ್ವ ಸಿದ್ಧಾಂತ ಅರಿತು, ತಾಲೂಕಿನ ಜನಪರ ಕಾರ್ಯಗಳನ್ನು ಮೆಚ್ಚಿ ಸಾಕಷ್ಟುಜನರು ಕಾಂಗ್ರೆಸ್‌ ಪಕ್ಷದ ಜೊತೆ ಕೈಜೋಡಿಸುತ್ತಿದ್ದಾರೆ. ನನ್ನ ಅಧಿ​ಕಾರ ಅವ​ಧಿಯಲ್ಲಿ ನುಡಿದಂತೆ ನಡೆದು ನಿಷ್ಠೆಯಿಂದ ಮತದಾರರ ಆಶೋತ್ತರಗಳನ್ನು ಈಡೇರಿಸುತ್ತೇನೆ ಎಂದರು. 

ಕಮಲ ಅರ​ಳಿ​ಸಲು ಬಿಜೆ​ಪಿ​ಯಿಂದ ಶ್ರೀರಾ​ಮನ ಜಪ: ಎಚ್‌ಡಿಕೆ, ಡಿಕೆ​ಶಿ ಕಟ್ಟಿಹಾಕುವ ಪ್ಲಾನ್‌

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ಮಾತನಾಡಿ, ಅಭಿವೃದ್ಧಿ ಎಂದರೆ ರಸ್ತೆ, ನೀರು ಕೊಟ್ರೆ ಆಗುತ್ತಾ, ಬದಲಾಗಿ ಉದ್ಯೋಗ ಸೃಷ್ಟಿಮಾಡುವ ಕೆಲಸ ಆಗಬೇಕು. ಕೈಗಾರಿಕೆ ಸ್ಥಾಪನೆ ಮಾಡಬೇಕು. ಇದ್ಯಾವುದನ್ನಾದರೂ ಮಾಡಿದ್ದಾರಾ? ವಿನಾಕಾರಣ ಅಭಿವೃದ್ಧಿಯನ್ನು ಅವರೇ ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಡಬೇಕು ಎಂದು ಸಚಿವ ಎಂಟಿಬಿ ನಾಗರಾಜ್‌ ಅವರ ಹೆಸರೇಳದೆ ಟಾಂಗ್‌ ಕೊಟ್ಟರು. ಈ ವೇಳೆ ಗ್ರಾಪಂ ಅಧ್ಯಕ್ಷ ಮುನಿನಂಜೇಗೌಡ, ಉಪಾಧ್ಯಕ್ಷೆ ಮುನಿಯಮ್ಮ, ಸದಸ್ಯರಾದ ಬೈರೇಗೌಡ, ಮಾಜಿ ಅಧ್ಯಕ್ಷ ಆನಂದ್‌, ಯುವ ಮುಖಂಡ ಬಿ.ಜಿ.ನಾರಾಯಣಗೌಡ, ಮುಖಂಡರಾದ ಚಿಕ್ಕಪ್ಪಯ್ಯಣ್ಣ, ರಾಜಣ್ಣ, ಚನ್ನಕೇಶವ, ಜಗದೀಶ್‌, ರಾಮಚಂದ್ರಪ್ಪ, ಮಂಜುನಾಥ್‌ ಇತರರು ಹಾಜರಿದ್ದರು.

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 2 ಎಕರೆ ಜಾಗ: ಹೊಸಕೋಟೆ ನಗರದಲ್ಲಿ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಿಸಲು ಎರಡು ಎಕರೆ ಜಾಗ ಗುರುತಿಸಿ ಈಗಾಗಲೇ ಜಿಲ್ಲಾ​ಧಿಕಾರಿ ಅವರಿಗೆ ಮನವಿ ಪತ್ರ ನೀಡಲಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಮಾದಿಗ ಸಮುದಾಯದ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ನಗರದಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲಾಗಿರುವ ಅಂಬೇಡ್ಕರ್‌ ಭವನ ಅ​ಧಿಕಾರಿಗಳ ನಿರ್ಲಕ್ಷ್ಯದಿಂದ ಕಲ್ಯಾಣ ಮಂಟಪದ ರೀತಿ ಮಾಡಿದ್ದಾರೆ. 

ಕಾಂಗ್ರೆಸ್‌ ಭ್ರಷ್ಟಾಚಾರಿಗಳ, ಭಯೋತ್ಪಾದಕರ ಪಕ್ಷ: ನಳಿನ್‌ ಕುಮಾರ್‌ ಕಟೀಲ್‌

ಆದರೆ ದೇವನಹಳ್ಳಿಯಲ್ಲಿ ಮಾದರಿಯಾಗಿ ನಿರ್ಮಾಣ ಮಾಡಿದ್ದು, ಅದೇ ರೀತಿಯ ಆಡಿಟೋರಿಯಂ ನಿರ್ಮಿಸಲು ಅಗ್ನಿಶಾಮಕ ಠಾಣೆ ಜಾಗದ ಬಳಿ ಎರಡು ಎಕರೆ ಜಾಗ ಗುರುತಿಸಲಾಗಿದೆ. ಆದಷ್ಟುಬೇಗ ಸಮುದಾಯ ಭವನಕ್ಕೆ ಈ ಜಾಗ ನೀಡಲಾಗುತ್ತದೆ. ಬಚ್ಚೇಗೌಡರು ತಾಲೂಕಿನಲ್ಲಿ ಶಾಸಕರಾಗಿ ಸಚಿವರಾಗಿದ್ದ ಸಂದರ್ಭದಲ್ಲಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್‌ ಪುತ್ಥಳಿ ತರಲು ಶ್ರಮ ಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಾಬು ಜಗಜೀವನ್‌ ರಾಂ ಅವರ ಪುತ್ಥಳಿ ಸ್ಥಾಪಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

Follow Us:
Download App:
  • android
  • ios