ಕಾಂಗ್ರೆಸ್ ಭ್ರಷ್ಟಾಚಾರಿಗಳ, ಭಯೋತ್ಪಾದಕರ ಪಕ್ಷ: ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಿಗಳು ಹಾಗೂ ಭಯೋತ್ಪಾದಕರ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ನಗರದಲ್ಲಿ ನಡೆದ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದು ಮಹಾತ್ಮ ಗಾಂಧಿ ಹೇಳಿದ್ದರು.
ಚಾಮರಾಜನಗರ (ಡಿ.30): ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಿಗಳು ಹಾಗೂ ಭಯೋತ್ಪಾದಕರ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ನಗರದಲ್ಲಿ ನಡೆದ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದು ಮಹಾತ್ಮ ಗಾಂಧಿ ಹೇಳಿದ್ದರು.
ಯಾಕೆಂದರೆ ಕಾಂಗ್ರೆಸ್ ಆಡಳಿತ ಮಾಡಿದರೆ ರಾಮರಾಜ್ಯ ನಿರ್ಮಾಣ ಆಗಲ್ಲ, ರಾವಣನ ರಾಜ್ಯ ನಿರ್ಮಾಣಆಗುತ್ತೆ ಅಂತ ಅವರಿಗೆ ಗೊತ್ತಿತ್ತು. ಇಂದಿರಾಗಾಂಧಿ ಕಾಲ ಘಟ್ಟದಲ್ಲಿ ಭಯೋತ್ಪಾದನೆ ಆರಂಭವಾಯ್ತು, ಬಿಂದ್ರನ್‌ವಾಲೆ ಸೃಷ್ಟಿಯಾದ. ಬಾಂಬಿನ ಕಾರ್ಖಾನೆಗಳು ಪ್ರಾರಂಭವಾದವು ಭ್ರಷ್ಟಾಚಾರಕ್ಕೆ ಮೂಲ ಕಾರಣ ಕಾಂಗ್ರೆಸ್. ಅದೊಂದು ಭ್ರಷ್ಟಾಚಾರಿಗಳ ಕೂಟವಾಗಿದೆ. ಪಸಂರ್‍ಟೇಜ್ ಅಂದ್ರೆ ಕಾಂಗ್ರೆಸ್. ಲಾಲ್ ಬಹದ್ದೂರು ಶಾಸ್ತ್ರಿ ಹೊರತುಪಡಿಸಿ ನೆಹರುಯಿಂದ ಹಿಡಿದು ಮನಮೋಹನ್ ಸಿಂಗ್ ವರೆಗಿನ ಕಾಂಗ್ರೆಸ್ ಪ್ರಧಾನ ಮಂತ್ರಿಗಳ ಕಾಲದಲ್ಲಿ ಅತಿಹೆಚ್ಚು ಹಗರಣಗಳು ನಡೆದಿವೆ.
Chamarajanagar: ಮಡಹಳ್ಳಿ ದುರಂತ ಬಳಿಕವೂ ಷರತ್ತಿನಂತೆ ಗಣಿಗಾರಿಕೆ ನಡೆಯುತ್ತಿಲ್ಲ!
40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣಗೆ ದಾಖಲೆ ಒದಗಿಸಲಾಗದೆ. ಅವರು ಜೈಲಿಗೆ ಹೋಗಿದ್ದರು. ಅವರ ಹಿಂದೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ಜೈಲಿಗೆ ಹೋಗುವ ಭಯದಿಂದಲೇ ಸಿದ್ದರಾಮಣ್ಣ ಲೋಕಾಯುಕ್ತ ಮುಚ್ಚಿಸಿದ್ದರು ಎಂದು ವ್ಯಂಗ್ಯವಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರನ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಕಾಸ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಪ್ರಕೋಷ್ಟಗಳ ರಾಜ್ಯ ಸಂಯೋಜಕ ಭಾನುಪ್ರಕಾಶ್ ಇದ್ದರು.
ಇಂದಿರಾಗಾಂಧಿಗೂ ಮಹಾತ್ಮ ಗಾಂಧಿಗೂ ಏನ್ ಸಂಬಂಧ?: ಇಂದಿರಾಗಾಂಧಿ ಪತಿ ಹೆಸರು ಫಿರೋಜ್‌ಖಾನ್. ಹಾಗಿದ್ರೆ ಅವರ ಹೆಸರಿನ ಮುಂದೆ ಖಾನ್ ಬರಬೇಕು. ರಾಜೀವ್ ಗಾಂಧಿ ಹೆಸರು ರಾಜೀವ್ ಖಾನ್ ಆಗಬೇಕು. ರಾಹುಲ್‌ಗಾಂಧಿ ಹೆಸರು ರಾಹುಲ್‌ಖಾನ್ ಆಗಬೇಕಿತ್ತು. ಆದರೆ ಗಾಂಧಿ ಪರಿವಾರದ ಹೆಸರಿನಲ್ಲಿ ರಾಷ್ಟ್ರಭಕ್ತಿ ಮೆರೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಟೀಕಿಸಿದರು.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಶ್ರಮ ನೋಡಿ ಅವಕಾಶ: ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಭ್ಯರ್ಥಿಗಳಿಗಾಗಿ ಅರ್ಜಿ ಕರೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ನೀಡಿ ಅರ್ಜಿ ಹಾಕಬೇಕು. ನಮ್ಮಲ್ಲಿ ಕಾರ್ಯಕರ್ತನ ಶ್ರಮವನ್ನು ನೋಡಿ ಅವಕಾಶ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ನಗರದ ನಿಜಗುಣ ರೆಸಾರ್ಚ್‌ನಲ್ಲಿ ನಡೆದ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಜೆಪಿ ಪಕ್ಷ ಸನ್ಯಾಸಿಗಳ ಸಂಘಟನೆಯಲ್ಲ ರಾಜಕಾರಣದ ಪಕ್ಷ ಕಾರ್ಯಕರ್ತರಲ್ಲಿ ಆಸೆಗಳು ಆಕಾಂಕ್ಷೆಗಳು ಇರುತ್ತವೆ. ಆಸೆಗಳು ಇರಬೇಕು ಆದರೆ ಅತಿ ಆಸೆ ಇರಬಾರದು ಎಂದರು.
ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಹೆಮ್ಮೆ ವಿಚಾರ. ಇದಕ್ಕೆ ಕಾರಣ ಕ್ಷೇತ್ರದಲ್ಲಿ ಪಕ್ಷ ದೊಡ್ಡದಾಗಿ ಬೆಳೆದಿರುವುದು. ಬಿಜೆಪಿ ಪಕ್ಷ ಕಾರ್ಯಕರ್ತರ ಶ್ರಮ ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದರು. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಆದರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ಮಾಡಿಸುವ ಮೂಲಕ ದೇಶವನ್ನು ಜೋಡಣೆ ಮಾಡಿದವರು ಅಟಲ್‌ಬಿಹಾರಿ ವಾಜಪೇಯಿ ಎಂದು ತಿಳಿಸಿದರು.
ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತನ್ನಿ: ಶಾಸಕ ನರೇಂದ್ರ
ಭಾರತ ದೇಶ ಆರ್ಥಿಕವಾಗಿ ಸದೃಢವಾಗಿದ್ದು, ಇದಕ್ಕೆ ಮೋದಿ ಅವರ ವಿಶಿಷ್ಠ ಮತ್ತು ವಿಭಿನ್ನ ಆಡಳಿತ ಕಾರಣವಾಗಿದ್ದು, 2014ರ ನಂತರ ದೇಶದಲ್ಲಿ ನಕ್ಸಲ್ ಚಟುವಟಿಕೆಗೆ ಅವಕಾಶವಿಲ್ಲದಂತೆ ನೋಡಿಕೊಂಡಿದ್ದಾರೆ ನವಭಾರತ ನಿರ್ಮಾಣವಾಗಿದೆ. ನವ ಕರ್ನಾಟಕ ಸ್ಥಾಪನೆಗೆ 2023ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದರು. ಅಂಬೇಡ್ಕರ್ ಅವರ ಹೆಸರಿನಲ್ಲಿ ಅಧಿಕಾರವನ್ನು ಪಡೆದ ಕಾಂಗ್ರೆಸ್ ಅವರಿಗೆ ಚುನಾವಣೆಗೆ ನಿಲ್ಲಲು ಅವರಿಗೆ ಅವಕಾಶ ನೀಡಲಿಲ್ಲ. ಅವರು ಮೃತರಾದ ಸಂದರ್ಭದಲ್ಲಿ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೂ ಸೂಕ್ತ ಬೆಂಬಲ ನೀಡಿರಲಿಲ್ಲ. ಈ ಮೂಲಕ ಅಂಬೇಡ್ಕರ್‌ಗೂ ಕಾಂಗ್ರೆಸ್ ಅವಮಾನ ಮಾಡಿತ್ತು ಎಂದು ದೂರಿದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ. ಭಾನುಪ್ರಕಾಶ್, ಸಹ ಸಂಯೋಜಕ ಜಯತೀರ್ಥ ಕಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲೆಯ ಸಂಘಟನಾ ಉಸ್ತುವಾರಿ ರಾಜೇಂದ್ರ, ಜಿಲ್ಲಾಧ್ಯಕ್ಷ ಆರ್. ಸುಂದರ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಡಾ.ಎ.ಆರ್.ಬಾಬು, ರಾಷ್ಟ್ರೀಯ ಒಬಿಸಿ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಹಾಜರಿದ್ದರು.