Asianet Suvarna News Asianet Suvarna News

ಸಿದ್ದರಾಮಯ್ಯ ಯಾವುದೆ ಕ್ಷೇತ್ರದಲ್ಲಿ ನಿಂತ್ರೂ ಅವರನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ: ರೂಪಾ ಶಶಿಧರ್

ಕೋಲಾರ ಜಿಲ್ಲೆಯಲ್ಲಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವಿನ ಬಣ ರಾಜಕೀಯ ಜೋರಾಗಿ ಸಾಗ್ತಿದೆ. ಒಂದು ಬಣದವರು ಸೇರಿರುವ ಕಾರ್ಯಕ್ರಮಕ್ಕೆ ಮತ್ತೊಂದು ಬಣದವರು ತಲೆ ಕೂಡ ಹಾಕದೆ ಇರುವಷ್ಟು ಮಟ್ಟಿಗೆ ಬಣ ರಾಜಕೀಯ ಜೋರಾಗಿ ಸಾಗ್ತಿದೆ. 

MLA Roopa Shashidhar Talks Over Siddaramaiah At Kolar gvd
Author
First Published Dec 3, 2022, 10:59 PM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಡಿ.03): ಕೋಲಾರ ಜಿಲ್ಲೆಯಲ್ಲಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವಿನ ಬಣ ರಾಜಕೀಯ ಜೋರಾಗಿ ಸಾಗ್ತಿದೆ. ಒಂದು ಬಣದವರು ಸೇರಿರುವ ಕಾರ್ಯಕ್ರಮಕ್ಕೆ ಮತ್ತೊಂದು ಬಣದವರು ತಲೆ ಕೂಡ ಹಾಕದೆ ಇರುವಷ್ಟು ಮಟ್ಟಿಗೆ ಬಣ ರಾಜಕೀಯ ಜೋರಾಗಿ ಸಾಗ್ತಿದೆ. ಭಾರತ್ ಜೋಡೋ ಕಾರ್ಯಕ್ರಮದ ವೇಳೆ ಸ್ವತಃ ರಾಹುಲ್ ಗಾಂಧಿ ಅವರೇ ಮಧ್ಯಸ್ಥಿಗೆ ವಹಿಸಿ ಡಿ.ಕೆ ಶಿವಕುಮಾರ್ ರನ್ನು ಮುಂದಿಟ್ಟುಕೊಂಡು ಕೆ.ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್‌ರನ್ನು ಸಮಾಧಾನ ಪಡಿಸಿದ್ರು ಸಹ ಸಹ ಇವರಿಬ್ಬರ ಬಣ ರಾಜಕೀಯ ಇನ್ನು ಮುಂದುವರೆದಿದೆ.

ಇನ್ನು ಈ ನಡುವೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಅನ್ನೋ ಕೂಗು ಜೋರಾಗಿದ್ದು, ಒಂದು ವೇಳೆ ಸ್ಪರ್ಧೆ ಮಾಡಿದ್ರೆ ಆದ್ರೆ ಇವರಿಬ್ಬರ ಬಣ ರಾಜಕೀಯದಿಂದ ಸೋಲುವ ಸಾಧ್ಯತೆ ಸಹ ಇದೆ ಅನ್ನೋ ಅಂಶ ರಾಜಕೀಯ ವಲಯದಲ್ಲಿ  ಚರ್ಚೆ ಸಹ ಆಗ್ತಿದೆ.ಈಗಾಗಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಶಾಸಕರು, ಮುಖಂಡರು ಸಿದ್ದರಾಮಯ್ಯ ಪರ ಪ್ರಚಾರ ಆರಂಭಿಸಿದ್ದು, ಎರಡಮೂರು ಬಾರಿ ಕಾರ್ಯಕರ್ತರ,ಮುಖಂಡರ ಸಭೆ ಸಹ ನಡೆಸಿದ್ದಾರೆ.ಆದ್ರೆ ಆ ಎರಡುಮೂರು ಸಭೆಯಲ್ಲಿ ಕೆ.ಎಚ್ ಮುನಿಯಪ್ಪ ಹಾಗೂ ಬೆಂಬಲಿಗರನ್ನು ದೂರವಿಟ್ಟು ಚರ್ಚೆ ನಡೆಸಿದ್ದು,ಇದು ಕೆ.ಎಚ್ ಮುನಿಯಪ್ಪ ಬಣದವರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಿ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಸರಿ ಇಲ್ಲ ಅನ್ನೋದು ಜಗತ್ ಜಾಹೀರವಾಗಿದೆ.

ಚುನಾವಣಾ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಕಡ್ಡಾಯ: ಡಿಸಿ ವೆಂಕಟ್‌ ರಾಜಾ ಸೂಚನೆ

ಇಂದು ಈ ಬಗ್ಗೆ ಕೆ.ಎಚ್ ಮುನಿಯಪ್ಪ ಪುತ್ರಿ ಹಾಗೂ ಕೆಜಿಎಫ್ ಕ್ಷೇತ್ರದ ಶಾಸಕಿಯೂ ಆಗಿರುವ ರೂಪಕಲಾ ಶಶಿಧರ್ ಅವರು ಮಾತನಾಡಿ, ತಂದೆ ಮುನಿಯಪ್ಪ ಪರ ಪರೋಕ್ಷವಾಗಿ ಬ್ಯಾಟ್ ಬೀಸುವ ಮೂಲಕ,ಸಿದ್ದರಾಮಯ್ಯನವರಿಗೆ ನಾಜೂಕಾಗಿಯೇ ಕೆಲ ಸಲಹೆಗಳನ್ನು ನೀಡಿದ್ದಾರೆ.ಪಕ್ಷದ ಸಂಘಟನೆ ಮಾಡುವ‌ ನಿಟ್ಟಿನಲ್ಲಿ ಸಿದ್ದರಾಮಯ್ಯ ಇಡೀ ರಾಜ್ಯ ಪ್ರವಾಸ ಮಾಡಬೇಕಿದೆ. ಯಾವುದೆ ಕ್ಷೇತ್ರದಲ್ಲಿ ನಿಂತ್ರೂ ಅವರನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ.ಯಾವ ಮುಖಂಡರು, ಕಾರ್ಯಕರ್ತರು ವಿರುದ್ದ ಹೇಳಿಕೆಗಳನ್ನ ಕೊಡುವುದಿಲ್ಲ.ಇಡೀ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ,ಪಕ್ಷದ ಗೊಂದಲ ಗಳನ್ನ ನಿವಾರಣೆ ಮಾಡುವ ಕೆಲಸ ನಡೆಯಬೇಕಿದೆ.ಇಡೀ ರಾಜ್ಯ ಕಟ್ಟುವ ನಾಯಕರು ಅವರಾಗಿದ್ದು,ಪಕ್ಷದಲ್ಲಿ ಕೆಲ ಆಂತರಿಕ ವಿಚಾರಗಳನ್ನ ಅವರು ಚರ್ಚೆ ಮಾಡಬೇಕಿದೆ ಅಂತ ತಿಳಿಸಿದ್ರು.

ಇನ್ನು ಸಿದ್ದರಾಮಯ್ಯನವರಿಗೆ ಎಲ್ಲಾ ವಿಚಾರಗಳು ಗಮನದಲ್ಲಿದೆ.ಯಾರೂ ಕಾಂಗ್ರೇಸ್ ಕಟ್ಟಿದ್ದಾರೆ, ಕಷ್ಟದಲ್ಲಿದ್ದಾಗ ಪಕ್ಷ ಬೆಳೆಸಿದ್ದಾರೆ ಅನ್ನೋದನ್ನು ಅವರು ಮರೆಯಬಾರದು ಅಂತ ಪರೋಕ್ಷವಾಗಿ ತಂದೆ ಹಾಗೂ ಮಾಜಿ ಸಂಸದ ಮನಿಯಪ್ಪರನ್ನ ಕಡೆಗಣನೆ ಮಾಡದಂತೆ ರೂಪಕಲಾ ಶಶಿಧರ್ ಹೇಳಿಕೆ ನೀಡಿದರಲ್ಲದೇ,ಜಿಲ್ಲೆಯಲ್ಲಿ ಪಕ್ಷವನ್ನ ಪ್ರಾಮಾಣಿಕವಾಗಿ ನಡೆಸಿಕೊಂಡು ಬಂದವರನ್ನ ರಕ್ಷಣೆ ಮಾಡಬೇಕಿದೆ.ಯಾರೂ ಎಂತಹ ದಿನಗಳಲ್ಲಿ ಕಾಂಗ್ರೆಸ್ ಕಟ್ಟಿದ್ದಾರೆ,ಕಾಪಾಡಿದ್ದಾರೆ, ಗೌರವಿಸಿದ್ದಾರೆ ಅನ್ನೋದನ್ನು ಅರಿತು ನಿಷ್ಠೆಯಿಂದ ಇರುವವರನ್ನ ಗಣನೆಗೆ ಪಡೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ.ರಾಜ್ಯ, ರಾಷ್ಟ್ರೀಯ ನಾಯಕರು ಜಿಲ್ಲೆಯ ಕಾಂಗ್ರೆಸ್ ನಾಯಕರನ್ನ ವಿಶ್ವಾಸಕ್ಕೆ ಪಡೆಯಬೇಕು ಎಂದು ತಂದೆಯ ಪರ ಪರೋಕ್ಷವಾಗಿ ಬ್ಯಾಟ್ ಬೀಸಿದ್ರು.

ಕೋಲಾರದಲ್ಲಿ ಸ್ಪರ್ಧಿಸುವಂತೆ ಸಿದ್ದುಗೆ ಮನವಿ ಮಾಡಿದ್ದೇ ನಾನು: ಶಾಸಕ ಶ್ರೀನಿವಾಸಗೌಡ

ಇನ್ನು ಎಲ್ಲಾ ನಾಯಕರು ಪರಿಗಣನೆ ಮಾಡಿ ಕ್ಷೇತ್ರ ಆಯ್ಕೆ ಮಾಡಿಕೊಂಡು ಹಾರಿಸಿ ಬರುತ್ತೇನೆ ಎಂದಾಗ ಎಲ್ಲರೂ ಸ್ವಾಗತ ಮಾಡುತ್ತೇವೆ.ಅದು ಬಿಟ್ಟು ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತಳಾಗಿ ಅವರನ್ನ ಸ್ವಾಗತ ಮಾಡುತ್ತೇನೆ.ಕಾಂಗ್ರೇಸ್ ಎಲ್ಲರಿಗೂ ಅವಕಾಶ ಕೊಡಲ್ಲ,ಆದ್ರೆ ಪಕ್ಷದ ಗೌರವವನ್ನ ಎತ್ತಿ ಹಿಡಿಯುವ ವರಿಗೆ ಎಲ್ಲವೂ ಸಿಗುತ್ತೆ.ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ವನ್ನ ಆಂತರಿಕವಾಗಿ ಚರ್ಚೆ ಮಾಡಿ ಬಗೆ ಹರಿಸಿಕೊಳ್ಳಬೇಕಿದೆ.ಪಕ್ಷ ಅಂತ ಬಂದಾಗ ಎಲ್ಲಾ ಕುಟುಂಬದಲ್ಲೂ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ.ಕಾಂಗ್ರೆಸ್ ಪಕ್ಷ ಆಲದ ಮರ ಇದ್ದಂತೆ ಅದರ ನೆರಳಲ್ಲಿ ಸಾಕಷ್ಟು ಜನರಿಗೆ ಪರಿಹಾರ ಸಿಗುತ್ತೆ.ಎಲ್ಲವೂ ಆಂತರಿಕವಾಗಿ ಬಗೆ ಹರಿಸಿಕೊಳ್ಳಲು ನನಗೆ ಒಂದಷ್ಟು ಜವಾಬ್ದಾರಿ ನೀಡಿದೆ. ಅದರಂತೆ ನಾಯಕರನ್ನ ಗೌರವಿಸುತ್ತೇನೆ,ಅವರಿಗೆ ಗೌರವ ಸೂಚಿಸುತ್ತೇನೆ ಎಂದು ಶಾಸಕಿ ರೂಪಕಲಾ ಶಶಿಧರ್ ಅವರು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ರು.

Follow Us:
Download App:
  • android
  • ios