ಕೋಲಾರದಲ್ಲಿ ಸ್ಪರ್ಧಿಸುವಂತೆ ಸಿದ್ದುಗೆ ಮನವಿ ಮಾಡಿದ್ದೇ ನಾನು: ಶಾಸಕ ಶ್ರೀನಿವಾಸಗೌಡ

ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆಯಾಗಿ ನೀಡಬೇಕು ಅಂತಾನೆ ನಾನು ಶಾಸಕನಾಗಿದ್ದರೂ ತ್ಯಾಗ ಮಾಡಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮೊದಲು ಮನವಿ ಮಾಡಿದ್ದೇ ನಾನು ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

Mla K Srinivas Gowda Talks Over Siddaramaiah At Kolar gvd

ಕೋಲಾರ (ನ.30): ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆಯಾಗಿ ನೀಡಬೇಕು ಅಂತಾನೆ ನಾನು ಶಾಸಕನಾಗಿದ್ದರೂ ತ್ಯಾಗ ಮಾಡಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮೊದಲು ಮನವಿ ಮಾಡಿದ್ದೇ ನಾನು ಎಂದು ಶಾಸಕ ಕೆ. ಶ್ರೀನಿವಾಸಗೌಡ ತಿಳಿಸಿದರು.

ತಾಲೂಕಿನ ಅರಾಭಿಕೊತ್ತನೂರು ಮತ್ತು ಸೂಲೂರು ಗ್ರಾಪಂಗಳಲ್ಲಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಿಂದ ಕೆ.ಸಿ ರೆಡ್ಡಿ ಮುಖ್ಯಮಂತ್ರಿಯಾಗಿದ್ದು ಬಿಟ್ಟರೆ ನಂತರ ಅಂತಹ ಅವಕಾಶಗಳು ಎರಡು ಜಿಲ್ಲೆಗೆ ಸಿಕ್ಕಿಲ್ಲ. ನಾನು ಶಾಸಕನಾಗಿದ್ದರೂ ಸಿದ್ದರಾಮಯ್ಯರನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಿದ್ದೇನೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮತ್ತು ಮುಖಂಡರ ಮೇಲಿದೆ ಎಂದರು.

ಸುಳ್ಳು ಭರವಸೆ ನೀಡುವವರನ್ನು ನಂಬಬೇಡಿ: ಸಿದ್ದರಾಮಯ್ಯ

ಎಂಎಲ್‌ಸಿ ಎಂ.ಎಲ್‌. ಅನಿಲ್‌ ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ಉದ್ದುದ್ದ ಭಾಷಣ ಮಾಡತ್ತಾರೆ, ಆದರೆ ಮಾಜಿ ಸಚಿವ ದಿ. ಸಿ.ಭೈರೇಗೌಡರು ಹಾಗೂ ಶಾಸಕ ಕೆ. ಶ್ರೀನಿವಾಸಗೌಡರು ಇಲ್ಲದ ಜನತಾದಳವನ್ನು ಊಹೆ ಮಾಡಲಿಕ್ಕೆ ಸಾಧ್ಯವಿಲ್ಲ, ಹೆಸರಿಗೆ ಮಾತ್ರ ಜಾತ್ಯತೀತ ತತ್ವಗಳು ಅಂತ ಹೇಳತ್ತಾರೆ, ಆದರೆ ನಡೆದುಕೊಳ್ಳುವುದು ಮಾತ್ರ ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಪಕ್ಷ ಮಾತ್ರ ಜಾತ್ಯತೀತ ಮನೋಭಾವದಲ್ಲಿ ಎಲ್ಲಾ ಸಮುದಾಯಗಳೊಂದಿಗೆ ನಾಯಕತ್ವದ ಗುಣಗಳನ್ನು ಹೊಂದಿದೆ. ಅದರ ಭಾಗವಾಗಿಯೇ ಕಾಂಗ್ರೆಸ್‌ ಪಕ್ಷದ ಉನ್ನತ ಹುದ್ದೆಯಾದ ಅಧ್ಯಕ್ಷ ಸ್ಥಾನ ದಲಿತರಿಗೆ ನೀಡಿದ್ದಾರೆ ಎಂದರು.

ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದರಿಂದ ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರವಾಸ ಮಾಡಿ ಹೋಗಿದ್ದಾರೆ, ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ನಾಯಕರು ಕಾರ್ಯಕರ್ತರ ಸಭೆ ಮಾಡಿ ಪಕ್ಷವನ್ನು ಬೂತ್‌ ಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ಮಾಡಲಾಗುತ್ತಿದೆ, ಎರಡನೇ ಹಂತದಲ್ಲಿ ಹಿರಿಯ ನಾಯಕರು ನಿಮ್ಮ ಗ್ರಾಮಗಳಿಗೆ ಬರುತ್ತಾರೆ, ಮೂರನೇ ಹಂತವಾಗಿ ಸಿದ್ದರಾಮಯ್ಯ ಕೋಲಾರಕ್ಕೆ ಬರಲಿದ್ದಾರೆ, ಈಗಿನಿಂದಲೂ ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಬೇಕು ಪಕ್ಷದಿಂದ ದೂರ ಉಳಿದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಬೇಕು ಅವಶ್ಯಕತೆ ಇದ್ದ ಕಡೆ ನಾವು ಬರುತ್ತೇವೆ, ಕಾಂಗ್ರೆಸ್‌ ಶಾಸಕರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಬೇಕು ಅಷ್ಟೇ ಎಂದರು.

ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, ರಾಜ್ಯದಲ್ಲಿ ಭಾವನಾತ್ಮಕ ವಿಷಯಗಳ ಮೂಲಕ ಅಭಿವೃದ್ಧಿ ಕುಂಠಿತವಾಗಿದೆ, ಜನರ ಹಿತದೃಷ್ಟಿಯಿಂದ ಬಿಜೆಪಿ ಸರಕಾರ ಬದಲಾಗಬೇಕಾಗಿದೆ, ಕ್ಷೇತ್ರದಲ್ಲಿ ಅನೇಕ ಕಾರಣಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಪಕ್ಷದ ಬೂತ್‌ ಮಟ್ಟದ ಮೂಲಕ ಸಂಘಟನೆಗೆ ಒತ್ತು ನೀಡಬೇಕು. ರಾಜ್ಯದಲ್ಲಿ ಜೆಡಿಎಸ್‌ಗೆ ಸ್ವಂತ ಶಕ್ತಿಯಿಂದ 123 ಸ್ಥಾನ ಬರುವುದಿಲ್ಲ ಯಾರಿಗೂ ಬಹುಮತ ಪಡೆಯಬಾರದು ಎಂದು ಜೆಡಿಎಸ್‌ ಕಾಯುತ್ತಾ ಇದೆ. ಕಾಂಗ್ರೆಸ್‌ 2023ರಲ್ಲಿ ಸಮರ್ಥವಾಗಿ ಎದುರಿಸಿ ಅ​ಧಿಕಾರಕ್ಕೆ ಬರುವಂತೆ ಮಾಡಬೇಕು ಎಂದರು.

ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಮಾತನಾಡಿ, ನನಗೂ ಕಾಂಗ್ರೆಸ್‌ ಪಕ್ಷಕ್ಕೂ ಏನು ಸಂಬಂಧ ಅಂತ ಕೆಲವರು ಹೇಳುತ್ತಾರೆ, 2008 ರಿಂದ ಕ್ಷೇತ್ರದಲ್ಲಿ ಚುನಾವಣೆಯ ಪ್ರಜಾಪ್ರಭುತ್ವ ವ್ಯವಸ್ಥೆ ಸರ್ವನಾಶವಾಗುತ್ತಾ ಇದ್ದು ಕೋಟಿಗಳು ಇದ್ದವರು ಚುನಾವಣೆಯಲ್ಲಿ ನಿಲ್ಲುವಂತ ವಾತಾವರಣ ನಿರ್ಮಿಸಿದ್ದಾರೆ, ಇದಕ್ಕೆ ಎಲ್ಲಾ ಕಡಿವಾಣ ಹಾಕುವ ಉದ್ದೇಶದಿಂದ ರಾಜಕಾರಣ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ, ಸಿದ್ದರಾಮಯ್ಯರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

Kolar: ಜಿಲ್ಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಮಿಂಚಿನ ಸಂಚಾರ

ಹಿರಿಯ ಮುಖಂಡ ಶ್ರೀಕೃಷ್ಣ, ಅನ್ವರ್‌ ಪಾಷ, ವಕ್ಕಲೇರಿ ರಾಜಪ್ಪ, ಸೀಸಂದ್ರ ಗೋಪಾಲಗೌಡ, ರಾಜು ಶ್ರೀನಿವಾಸಪ್ಪ, ವರದೇನಹಳ್ಳಿ ವೆಂಕಟೇಶ್‌, ಮಾರ್ಜೇನಹಳ್ಳಿ ಬಾಬು, ಎಂಟಿಬಿ ಶ್ರೀನಿವಾಸ್‌, ಮೈಲಾಂಡಹಳ್ಳಿ ಮುರಳಿ, ಜನಪನಹಳ್ಳಿ ನವೀನ್‌, ಗಜೇಂದ್ರ, ನವೀನ್‌, ಸುರೇಶ್‌, ವೈ.ಮುನಿಯಪ್ಪ, ಚಿಕ್ಕಮುನಿಯಪ್ಪ, ಶ್ರೀನಿವಾಸ್‌, ಎಚ್‌.ನಾರಾಯಣಪ್ಪ, ಪುನೀತ್‌ ಕುಮಾರ, ಸುಹೇಲ್‌ ಇದ್ದರು.

Latest Videos
Follow Us:
Download App:
  • android
  • ios