Asianet Suvarna News Asianet Suvarna News

ನನ್ನ ಸಾಯಿಸಿ ಉಪಚುನಾವಣೆ ಕುತಂತ್ರ: ಪ್ರಭು ಚವ್ಹಾಣ್‌ ಆರೋಪ

ನಡು ರಸ್ತೆಯಲ್ಲಿ ನನಗೆ ಗುಂಡು ಹೊಡೆದು ಆರು ತಿಂಗಳಲ್ಲಿ ಉಪಚುನಾವಣೆ ನಡೆಸುವ ಮಾತುಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ, ಅವರ ಬೆಂಬಲಿಗರು ಆಡಿದ್ದಾರೆಂದು ತಿಳಿದು ಬಂದಿದೆ. ನನ್ನನ್ನು ಮುಗಿಸಿ. ಆದರೆ, ತಾಯಿಯಂತಿರುವ ಪಕ್ಷವನ್ನು ಮುಗಿಸಬೇಡಿ ಎಂದು ಔರಾದ್‌ ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

Mla Prabhu Chavan Slams On Union Minister Bhagwanth Khuba gvd
Author
First Published Aug 10, 2023, 8:31 PM IST

ಬೀದರ್‌ (ಆ.10): ನಡು ರಸ್ತೆಯಲ್ಲಿ ನನಗೆ ಗುಂಡು ಹೊಡೆದು ಆರು ತಿಂಗಳಲ್ಲಿ ಉಪಚುನಾವಣೆ ನಡೆಸುವ ಮಾತುಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ, ಅವರ ಬೆಂಬಲಿಗರು ಆಡಿದ್ದಾರೆಂದು ತಿಳಿದು ಬಂದಿದೆ. ನನ್ನನ್ನು ಮುಗಿಸಿ. ಆದರೆ, ತಾಯಿಯಂತಿರುವ ಪಕ್ಷವನ್ನು ಮುಗಿಸಬೇಡಿ ಎಂದು ಔರಾದ್‌ ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ. ಔರಾದ್‌ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪ್ರಥಮ ಬಿಜೆಪಿ ತಾಲೂಕು ಕಾರ್ಯಕಾರಿಣಿ ಉದ್ಘಾಟಿಸಿ ಖೂಬಾ ಅವರ ವಿರುದ್ಧದ ಮುನಿಸನ್ನು ಪ್ರಭು ಚವ್ಹಾಣ್‌ ಮತ್ತೊಮ್ಮೆ ಹೊರಹಾಕಿದ್ದಾರೆ. 

ನನಗೆ ಲಕ್ಕಿ ಶಾಸಕ, ಚುನಾವಣೆಗೂ ಮುನ್ನ ಔರಾದ್‌ಗೆ ಬಂದು ಒಂದೇ ತಿಂಗಳಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡವನು ಎಂದೆಲ್ಲ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯವಾಡಿದ್ದು ಖೂಬಾ ಅವರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನನ್ನ ತಾಯಿಯಿದ್ದಂತೆ, ಕಾರ್ಯಕರ್ತರು ನನ್ನ ಕುಟುಂಬ ಸದಸ್ಯರು. 34 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೇನೆ ಎಂದರು. ಔರಾದ್‌ ಕ್ಷೇತ್ರಕ್ಕೆ ಸಿಪೆಟ್‌ ಕಾಲೇಜು ತಂದಿದ್ದು ನಾನು, ಮುಖ್ಯಮಂತ್ರಿಯಿಂದ ಶಂಕುಸ್ಥಾಪನೆ ಸಹ ಆಗಿದೆ. ಆದರೆ, ತಮ್ಮ ಇಲಾಖೆಯಿಂದ ಮಂಜೂರಾತಿ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿದ್ದರೂ ಅದಕ್ಕೂ ನನ್ನನ್ನೇ ಹೊಣೆ ಎಂಬಂತೆ ಮಾತನಾಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು.

ತಿಮ್ಮಾಪೂರಗೆ ನೂರಂದ್ರು ಗೊತ್ತಿಲ್ಲ..ಸಾವಿರ ಅಂದ್ರೂ ಗೊತ್ತಿಲ್ಲ: ಗೋವಿಂದ ಕಾರಜೋಳ

ಪ್ರಭು ಲಕ್ಕಿ; ಪಕ್ಷ ಸೇವೆ ಮೊದಲೇ ಶಾಸಕ, ಮಂತ್ರಿಯಾದ್ರು: ಸಚಿವ ಈಶ್ವರ ಖಂಡ್ರೆ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯ ಕಿತ್ತಾಟ ಜಗಜ್ಜಾಹೀರ. ಆದರೀಗ ಈಶ್ವರ ಬಿಟ್ಟು ಪ್ರಭು ಬೆನ್ನಟ್ಟಿದನೇ ಭಗವಂತ ಎಂಬಂತೆ ಈಶ್ವರ ಖಂಡ್ರೆ ಬದಲಾದಂತೆ ಕಾಣ್ತಾರೆ. ಬಿಜೆಪಿಯ ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್‌ ವಿರುದ್ಧ ಪರೋಕ್ಷವಾಗಿ ಮಾತಿನ ದಾಳಿ ಭಗವಂತ ಖೂಬಾ ನಡೆಸಿದ್ದಾರೆ. ಕೇಂದ್ರದ ಮಹತ್ವಾಕಾಂಕ್ಷಿ ರೇಲ್ವೆ ಯೋಜನೆಗೆ ಬಿಜೆಪಿಯ ಶಾಸಕರ ಪೈಕಿ ಔರಾದ್‌ನ ಪ್ರಭು ಚವ್ಹಾಣ್‌ ಗೈರಾಗಿದ್ದು, ಕೇಂದ್ರ ಸಚಿವರ ಭಗವಂತ ಖೂಬಾ ಅವರಿಗೆ ಇರಿಸುಮುರಿಸು ಉಂಟು ಮಾಡಿದಂತಿತ್ತು. ಇಬ್ಬರ ನಡುವಿನ ಆಂತರಿಕ ಕಚ್ಚಾಟ ಮುಂದುವರೆದಿರುವ ಸೂಚಕವಾಗಿ ಸಚಿವ ಖೂಬಾ ಶಾಸಕ ಪ್ರಭು ಚವ್ಹಾಣ್‌ ಅವರನ್ನು ಲಕ್ಕಿ ಶಾಸಕ ಎಂದು ಹೇಳುವ ಮೂಲಕ ಮಾತಿನಲ್ಲಿಯೇ ತಿವಿದ ಘಟನೆ ನಡೆಯಿತು.

ಭ್ರಷ್ಟಾಚಾರದ ಪಾಪದ ಕೂಸು ಹುಟ್ಟು ಹಾಕಿದವರೇ ಕಾಂಗ್ರೆಸ್ಸಿಗರು: ಬಿ.ವೈ.ವಿಜಯೇಂದ್ರ

ರಾಜಕೀಯ ಜೀವನದಲ್ಲಿ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಭಾಳ ಲಕ್ಕಿ ಮನುಷ್ಯ. 2008ರಲ್ಲಿ ರಾಜ್ಯದ ಬಿಜೆಪಿ ಸೇರಿದ ಕೇವಲ ಒಂದು ತಿಂಗಳ ಒಳಗಾಗಿ ಬಿಜೆಪಿ ಟಿಕೆಟ್‌ ಪಡೆದು, ಅಂದಿನಿಂದ ನಾಲ್ಕು ಬಾರಿ ಶಾಸಕರಾಗಿ ನಾಲ್ಕು ವರ್ಷ ಸಚಿವರಾಗಿ ಸೇವೆ ಸಲ್ಲಿಸಿದರು ಆದರೆ ನಾವು ಅಷ್ಟುಲಕ್ಕಿ ಇಲ್ಲ. ಕಳೆದ 3 ವರ್ಷಗಳಿಂದ ಅನೇಕ ಹಂತಗಳಲ್ಲಿ ಪಕ್ಷದ ಪದಾಧಿಕಾರಿಗಳಾಗಿ, ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಅನೇಕರ ಚುನಾವಣೆಗಳಲ್ಲಿ ಜವಾಬ್ದಾರಿ ಹೊತ್ತು ಯಶಸ್ವಿಯಾದ್ದೆವು. ಅದರಂತೆ ಕ್ರಮೇಣ ಉನ್ನತ ಸ್ಥಾನಕ್ಕೆ ಬಂದು ಕಳೆದ 9ವರ್ಷಗಳಿಂದ ಕೇಂದ್ರದಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳುವ ಮೂಲಕ ಶಾಸಕ ಪ್ರಭು ಚವ್ಹಾಣ್‌ ಅವರ ಪಕ್ಷ ಸೇವೆಯನ್ನು ಪರೋಕ್ಷವಾಗಿ ಪ್ರಶ್ನಿಸಿದಂತಿತ್ತು.

Follow Us:
Download App:
  • android
  • ios