ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪಗಿಲ್ಲ: ಶಾಸಕ ಸೋಮಶೇಖರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಕೆ.ಎಸ್. ಈಶ್ವರಪ್ಪ ಅವರಿಗಿಲ್ಲ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಿಡಿಕಾರಿದ್ದಾರೆ. ಈಶ್ವರಪ್ಪನವರು ಹೇಳಿ ಕೇಳಿ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ.
ಮೈಸೂರು (ನ.05): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಕೆ.ಎಸ್. ಈಶ್ವರಪ್ಪ ಅವರಿಗಿಲ್ಲ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕಿಡಿಕಾರಿದ್ದಾರೆ. ಈಶ್ವರಪ್ಪನವರು ಹೇಳಿ ಕೇಳಿ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಅವರ ಪಕ್ಷದಲ್ಲಿ ಸುಳ್ಳಿನ ಪ್ರಣಾಳಿಕೆ, ಸುಳ್ಳಿನ ಹೇಳಿಕೆಗಳು ಹೊಸದೇನಲ್ಲ. ಕೇಂದ್ರದ ನಾಯಕರಿಂದ ರಾಜ್ಯದ ನಾಯಕರವರೆಗೂ ಬರೀ ಸುಳ್ಳಿನ ಮೂಲಕವೇ ರಾಜಕಾರಣ ಮಾಡುವ ಕಲೆಯನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದು ದೂರಿದ್ದಾರೆ.
ಹೀಗಾಗಿ, ಆ ಒಂದು ಸುಳ್ಳಿನ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಈಶ್ವರಪ್ಪನವರು, ಆಗಾಗ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುವ ಚಾಳಿಯನ್ನು ಮುಂದುವರಿಸಿದ್ದಾರೆ. ಮೊದಲೆಲ್ಲ ಸಿದ್ದರಾಮಯ್ಯನವರಿಗೆ ಯಾವುದೇ ಕ್ಷೇತ್ರ ಇಲ್ಲ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದ ಇದೇ ಈಶ್ವರಪ್ಪನವರು, ಕೊನೆಗೆ ತಮಗೆ ಕ್ಷೇತ್ರವಿಲ್ಲದೆ ಕೊನೆಗೆ ಶಿವಮೊಗ್ಗದ ಬಿಜೆಪಿ ವಕ್ತಾರರಾಗಿ ಉಳಿದಿದ್ದಾರೆ. ಅಂತವರಿಗೆ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಉಪಹಾರ ಸಭೆಗೆ ಆಹ್ವಾನವಿತ್ತು, ಹೋಗಿರಲಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಜನಪರ ಯೋಜನೆಗಳನ್ನು ನೋಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ಪಾಠ ಕಲಿಸಲು ಮತದಾರರು ತುದಿಗಾಲಿನಲ್ಲಿ ನಿಂತಿದ್ದಾರೆ. ಅದನ್ನು ಸಹಿಸದ ಬಿಜೆಪಿಯವರು ಜನರ ದಿಕ್ಕು ತಪ್ಪಿಸಲು ಸುಳ್ಳಿನ ಸರಮಾಲೆಗಳನ್ನು ಜನರ ಮುಂದೆ ಇಡುತ್ತಿದ್ದಾರೆ. ಇಷ್ಟೇ ಅಲ್ಲದೆ ಲೋಕಸಭಾ ಚುನಾವಣೆ ಘೋಷಣೆ ಆದ ತಕ್ಷಣ ಸುಳ್ಳಿನ ಸಿಡಿಮದ್ದುಗಳನ್ನ ಸಿಡಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯವರು ನಿಜವಾಗಿ ಸಂವಿಧಾನದ ಆಶಯ, ಪ್ರಜಾಪ್ರಭುತ್ವ ಮೌಲ್ಯ, ಜನರ ತೀರ್ಪಿಗೆ ಬೆಲೆ ಕೊಡುವುದೇ ಆಗಿದ್ದರೆ ಮೋದಿ, ಅಮಿತ್ ಷಾ ಮುಂದೆ ಹೋಗಿ ಮುಖ ತೋರಿಸಿ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಂಡು ಬರಲಿ. ಜೊತೆಗೆ ರಾಜ್ಯದ ಬರಪರಿಸ್ಥಿತಿ ಮನವರಿಕೆ ಮಾಡಿ ನಮ್ಮ ರಾಜ್ಯದ ಪಾಲಿನ ಹಣ ಮಂಜೂರು ಮಾಡಿಸಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮೂರು ಬೀದಿ ನಾಯಿಗಳು ನಾಪತ್ತೆ: ಹುಡುಕಿ ಕೊಟ್ಟರೆ ₹35 ಸಾವಿರ ಬಹುಮಾನ!
ಬಿಜೆಪಿಯ ನಾಯಕರು ಅಸಹಾಯಕರಾದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಜೆಪಿ ಕಾರ್ಯಕರ್ತರನ್ನ ಯೋಜನೆಗಳ ಮೂಲಕ ರಕ್ಷಿಸಿದೆ. ಈಗ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಫಲಾನುಭವಿಗಳಿಗಳಾಗಿರುವ ಬಿಜೆಪಿಯ ಮುಖಂಡರ ಕುಟುಂಬದವರು ಸಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡಲು ನಿರ್ಧರಿಸಿದ್ದಾರೆ. ಅದು ಬಿಜೆಪಿಯ ಮುಖಂಡರಿಗೆ ತಲೆ ನೋವಾಗಿದೆ ಎಂದು ದೂರಿದ್ದಾರೆ.