ಬೆಂಗಳೂರಿನಲ್ಲಿ ಮೂರು ಬೀದಿ ನಾಯಿಗಳು ನಾಪತ್ತೆ: ಹುಡುಕಿ ಕೊಟ್ಟರೆ ₹35 ಸಾವಿರ ಬಹುಮಾನ!

ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಹೊಡೆದು ಓಡಿಸೋರೇ ಹೆಚ್ಚಿನವರು ಇದ್ದಾರೆ.ಆದ್ರೆ ಇಲ್ಲೊಬ್ಬರು ಬೀದಿ ನಾಯಿ ಸಾಕಿ ಸಲಹಿ ಊಟ ನೀಡಿ ಪ್ರೇಮಿಸೋ ನಾಯಿ ಪ್ರೀತಿಸೋ ಮಹಿಳೆ ಇದ್ದಾರೆ. ಅತೀ ಹೆಚ್ಚು ಪ್ರೀತಿ ತೋರಿಸುತ್ತಿದ್ದ ಬೀದಿ ನಾಯಿಗಳು ನಾಪತ್ತೆಯಾಗಿದ್ದಾವೆ. 

Dog Lover Appeals To Police Station For Stray Dogs In Bengaluru gvd

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ನ.05): ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಹೊಡೆದು ಓಡಿಸೋರೇ ಹೆಚ್ಚಿನವರು ಇದ್ದಾರೆ.ಆದ್ರೆ ಇಲ್ಲೊಬ್ಬರು ಬೀದಿ ನಾಯಿ ಸಾಕಿ ಸಲಹಿ ಊಟ ನೀಡಿ ಪ್ರೇಮಿಸೋ ನಾಯಿ ಪ್ರೀತಿಸೋ ಮಹಿಳೆ ಇದ್ದಾರೆ. ಅತೀ ಹೆಚ್ಚು ಪ್ರೀತಿ ತೋರಿಸುತ್ತಿದ್ದ ಬೀದಿ ನಾಯಿಗಳು ನಾಪತ್ತೆಯಾಗಿದ್ದಾವೆ. ಇವುಗಳನ್ನು ಹುಡುಕಿಕೊಡಿ ಅಂತ ಪೊಲೀಸ್ ಠಾಣೆ ಮೆಟ್ಟೇಲೇರಿದ್ದಾರೆ..ತಮ್ಮ ಆತ್ಮೀಯ ನಾಯಿಗಾಗಿ ಬೀದಿ ಬೀದಿ ಹುಡುಕಾಟ ಮಾಡ್ತೀದ್ದಾರೆ‌. ಬೆಂಗಳೂರಿನಲ್ಲಿ ಮೂರು ಬೀದಿ ನಾಯಿಗಳು ನಾಪತ್ತೆಯಾಗಿವೆ.. ಮೂರು ಬೀದಿ ನಾಯಿಗಳನ್ನ ಕದ್ದು ಬೇರೆಡೆ ಬಿಟ್ಟು ಬಂದ ಆರೋಪ ಕೇಳಿ ಬಂದಿದೆ. 

ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಸಹ ನಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಬಳಿ ಇದ್ದ ಲೊಂಬಿ ,ದಂತ,ರಿಬಾ ಎಂಬ ಬೀದಿ ನಾಯಿಗಳು.  ಯುಕೆಯಲ್ಲಿರೋ ವಕೀಲೆ ವಿಪ್ಲವಿ ಮಹೇಂದ್ರ ಅವರ ಕಚೇರಿ ಕುಮಾರಪಾರ್ಕ್ ರಸ್ತೆಯಲ್ಲಿ ಇದೆ..ಇದರ  ಮುಂದೆ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕಿ ಆಫೀಸ್  ಸಿಬ್ಬಂದಿ ಸಂಭವ ಪ್ರಕಾಶ್ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ. ಕುಮಾರಪಾರ್ಕ್ ಕಚೇರಿಯಲ್ಲಿ ಪ್ರಕಾಶ್ ಕೆಲಸ ಮಾಡುತ್ತಿದ್ದ.

ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ: ಸಚಿವ ಶರಣ ಪ್ರಕಾಶ ಪಾಟೀಲ

ಕಳೆದ ಹತ್ತು ವರ್ಷಗಳಿಂದ ನಾಯಿಗಳಿಗೆ ಊಟ ಹಾಕಿ ನೋಡಿಕೊಳ್ಳುತ್ತಿದ್ದ ಪ್ರಕಾಶ್. ಆದ್ರೆ ಆಕ್ಟೋಬರ್ 4ರ ನಂತರ ಮೂರು ನಾಯಿಗಳು ಕಾಣಿಯಾಗಿದ್ದವು. ಬೀದಿ ನಾಯಿಗಳಿಗಾಗಿ ನಗರದ ಹಲವೆಡೆ ಹುಡುಕಾಡಿದ್ದ ದೂರುದಾರ ಪ್ರಕಾಶ್ ಕೊನೆಗೆ ಶೇಷಾಂದ್ರಿಪುರ ಠಾಣೆಗೆ ದೂರು ನೀಡಿದ್ರು.. ಸ್ಥಳೀಯ ವ್ಯಕ್ತಿ ನಾಯಿಗಳನ್ನ ಬೇರೆಡೆ ತೆಗೆದುಕೊಂಡು ಹೋಗಿ ಬಿಟ್ಟಿರಬೇಕು ಎಂದು ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಿ ನಾಯಿಗಳನ್ನ ಪತ್ತೆ ಹೆಚ್ಚುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ರು.

ದೂರು ಪಡೆದು ಎಫ್ಐಆರ್ ದಾಖಲಿಸಿದ ಶೇಷಾದ್ರಿಪುರಂ ಪೊಲೀಸರು ಮೂರು ಬೀದಿ ನಾಯಿಗಳನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ. ನಾಯಿ ಹುಡುಕಿ ಕೊಟ್ಟವರಿಗೆ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.ಒಂದು ನಾಯಿ ಹುಡುಕಿಕೊಟ್ಟರೇ 10 ಸಾವಿರ ಬಹುಮಾನ ಕೊಡಲಾಗುವುದು. ಮೂರು ಬೀದಿ ನಾಯಿ ಹುಡುಕಿ ಕೊಟ್ಟರೇ 35 ಸಾವಿರ ಬಹುಮಾನ ನೀಡಲಾಗುವುದು ಎಂದು ಪಾಪ್ಲೆಟ್ ಮುದ್ರಿಸಿ ಎಲ್ಲಾ ಕಡೆ ಹಂಚಿದ್ದಾರೆ.

ವಿಶೇಷ ಅಂದ್ರೆ ಯುಕೆಯಲ್ಲಿರೋ ವಕೀಲೆ ವಿಪ್ಲವಿ ಮಹೇಂದ್ರ ನಾಯಿ ಹುಡುಕಾಟಕ್ಕೆ ನಾಲ್ಕು ಟೀಮ್ ರಚನೆ ಮಾಡಿದ್ದಾರೆ. ಒಂದು ಟೀಮ್ ನಲ್ಲಿ ಒಬ್ಬೊಬರು ಒಂದೊಂದು ಕಡೆ ಹುಡುಕಾಟ ಮಾಡ್ತೀದ್ದಾರೆ. ಇನ್ನೊಂದು ಟೀಮ್ ನಲ್ಲಿ  ಇಬ್ಬರು ಬೆಂಗಳೂರಿನಾದ್ಯಂತ ಹುಡುಕಾಟ ಮಾಡುತ್ತಿದ್ದಾರೆ. ವಿದೇಶದಲ್ಲಿರೋ ವಕೀಲೆ ವಿಪ್ಲವಿ ಮಹೇಂದ್ರ ಟೀಮ್ ಜೊತೆ ಹಗಲು ರಾತ್ರಿ ಸಂಪರ್ಕ ಮಾಡುತ್ತಿದ್ದಾರೆ. ನಾಯಿ ಕಳೆದು ಹೋದ ಮೇಲೆ ನಗರದ ಮೆಜೆಸ್ಟಿಕ್ ನಲ್ಲಿ 2 ದಿನ 11 ಗಂಟೆ ಹುಡುಕಾಟ , ಗುಡ್ ಶೆಡ್ ರೋಡ್ ನಲ್ಲಿ 3 ದಿನ 11 ಗಂಟೆ ಹುಡುಕಾಟ .ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಸಾಪುರ,ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. 

ಕಳೆದ ಎರಡು ವಾರದಿಂದ ನಾಯಿಗಳು ಕಾಣಿಯಾಗಿದ್ದಾವೆ ಎಂಬ ಮಾಹಿತಿ ನಮಗೆ ಸಿಗುತ್ತೆ. ಅಲ್ಲೇ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಕಲ್ಪನಾ ಪಾಳೆಗಾರ್ ಡ್ರೈವರ್ ದಿಲೀಪ್ ಕಾರಿನಲ್ಲಿ ಹಾಕ್ಕೊಂಡು ನಾಯಿಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂಬುದು ತಿಳಿಯಿತ್ತು.ಆ ಮೇಲೆ ಡ್ರೈವರ್ ದಿಲೀಪ್ ವಿಚಾರಿಸಿದ್ರೇ ನನಗೆ ಗೊತ್ತಿಲ್ಲ. ಜಾಸ್ತಿ ಒತ್ತಾಯ ಮಾಡಿ ಕೇಳಿದ್ರೆ ಗುಡ್ ಶೆಡ್ ರೋಡ್ ನಲ್ಲಿ ಬಿಟ್ಟಿದ್ದೇನೆ ಅಂತ ಹೇಳಿದ್ದ.ಆದರೆ ಅಲ್ಲೂ ಬಿಟ್ಟಿಲ್ಲ, ಆತ ಸರಿಯಾಗಿ ರಿಸ್ಪಾನ್ಸ್ ಮಾಡಲಿಲ್ಲ.ಕೊನೆಗೆ ಶೇಷಾಂದ್ರಿಪುರಂ ಠಾಣೆಗೆ ದೂರು ನೀಡಿದ್ದೇವೆ.ಪೊಲೀಸರು ಸಹ ಹುಡುಕಾತ್ತಾ ಇದ್ದಾರೆ. 

ಯತ್ನಾಳ ನಾನು ಜಗಳವಾಡಿಲ್ಲ, ಚೆನ್ನಾಗಿದ್ದೇವೆ: ಸಂಸದ ರಮೇಶ ಜಿಗಜಿಣಗಿ

ನಮ್ಮ ಆಫೀಸ್ ಸಿಬ್ಬಂದಿ ಪಾಪ್ಲೆಟ್ ಗಳನ್ನು ಬೆಂಗಳೂರಿನಾದ್ಯಂತ ಹಂಚಿ ನಾಯಿಗಳನ್ನು ಹುಡುಕಾತ್ತಾ ಇದ್ದಾರೆ.ಪಾಪ್ಲೆಟ್ ನಲ್ಲಿರೋ ನಾಯಿ ತೋರಿಸಿ ಎಲ್ಲಿಯಾದ್ರು ನೋಡಿದ್ರಾ ಅಂತ ಕೇಳ್ತಾ ಇದ್ದಾರೆ. ನಮ್ಮ ನಾಯಿ ನೋಡಿದ್ರೆ ,ಕಾಲ್ ಮಾಡಿ ತಿಳಿಸಿ ನಾವು ಬಂದು ಕರೆದುಕೊಂಡು ಹೋಗುತ್ತೇವೆ ಎಂದು ವಕೀಲೆ ವಿಟ್ಲವಿ ಮಹೇಂದ್ರ ಮನವಿ. ಒಟ್ನಲ್ಲಿ ಇದು ಕೆಲವರಿಗೆ ತಮಾಷೆ ಅನಿಸಬಹುದು.ಆದ್ರೆ ಅತೀ ಆತ್ಮೀಯವಾಗಿದ್ದ ಬೀದಿ ನಾಯಿಗಳು ಕಾಣದೇ ಇರೋದು ವಕೀಲೆ ವಿಪ್ಲವಿ ಮಹೇಂದ್ರ ಹಾಗೂ ಕುಟುಂಬಸ್ಥರಿಗೆ ದುಃಖ ತಂದಿದೆ‌. ಸದ್ಯ ಎಲ್ಲಾ ಕಡೆ ನಾಯಿ ಹುಡುಕುತ್ತಿದ್ದು, ಬೆಂಗಳೂರಿನಾದ್ಯಂತ ಪಾಪ್ಲೆಟ್ ಹಂಚಿ ನಮ್ಮ ಬೀದಿ ನಾಯಿ ನೋಡಿದವರು ಮಾಹಿತಿ ನೀಡಿ ನಾವು ಬಂದು ಕರೆದುಕೊಂಡು ಹೋಗ್ತೀವಿ ಅಂತ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios