ಸಂಸದ ಮುನಿಸ್ವಾಮಿ ಹೇಳಿಕೆಗೆ ಕಿಮ್ಮತ್ತಿನ ಬೆಲೆ ಇಲ್ಲ: ಶಾಸಕ ನಂಜೇಗೌಡ

ಸಂಸದ ಮುನಿಸ್ವಾಮಿ ಅವರು ಇತ್ತೀಚೆಗೆ ಕಾಂಗ್ರೆಸ್‌ ಪಕ್ಷವನ್ನು ಭ್ರಷ್ಟಾಚಾರದ ಪಿತಾಮಹ ಎಂದಿರುವುದು ಸರಿ ಅಲ್ಲ. ಅದು ಅವರ ಬಾಯಿ ಚಪಲದ ಮಾತಾಗಿದ್ದು, ಅವರ ಮಾತನ್ನು ವಾಸ್ತವ ತಿಳಿದಿರುವ ಜನರೇ ಕಿಮ್ಮತ್ತಿನ ಬೆಲೆ ನೀಡುವುದಿಲ್ಲ ಎಂದು ಶಾಸಕ ನಂಜೇಗೌಡ ಹೇಳಿದರು. 

MLA KY Nanjegowda Slams On MP S Muniswamy At Malur gvd

ಮಾಲೂರು (ಜು.01): ಸಂಸದ ಮುನಿಸ್ವಾಮಿ ಅವರು ಇತ್ತೀಚೆಗೆ ಕಾಂಗ್ರೆಸ್‌ ಪಕ್ಷವನ್ನು ಭ್ರಷ್ಟಾಚಾರದ ಪಿತಾಮಹ ಎಂದಿರುವುದು ಸರಿ ಅಲ್ಲ. ಅದು ಅವರ ಬಾಯಿ ಚಪಲದ ಮಾತಾಗಿದ್ದು, ಅವರ ಮಾತನ್ನು ವಾಸ್ತವ ತಿಳಿದಿರುವ ಜನರೇ ಕಿಮ್ಮತ್ತಿನ ಬೆಲೆ ನೀಡುವುದಿಲ್ಲ ಎಂದು ಶಾಸಕ ನಂಜೇಗೌಡ ಹೇಳಿದರು. ತಾಲೂಕಿನ ಲಕ್ಕೂರು ಹೋಬಳಿಯ ಬಾಳಿಗಾನಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯಲಯದ ನೂತನ ಕಟ್ಟಡ ಹಾಗೂ ರಾಜೀವ್‌ ಗಾಂಧಿ ಭಾರತ ನಿರ್ಮಾಣ ಸೇವಾ ಕೇಂದ್ರ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವು ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲಾ ಜಾತಿ ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುತ್ತಿದೆ. 

ಬಿಜೆಪಿ ಪಕ್ಷವು ಸುಳ್ಳು ಭ್ರಷ್ಟಾಚಾರ ಪಕ್ಷವಾಗಿದ್ದು ರಾಜ್ಯದಲ್ಲಿ ಅವರ ಆಡಳಿತ ಅವಧಿಯಲ್ಲಿ ಹಗರಣಗಳನ್ನು ಮಾಡಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಉಚಿತ ಅಕ್ಕಿ ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೆ ವಿನಃ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲ. ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ 7 ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಅದನ್ನು ಕಡಿತಗೊಳಿಸಿ ಬಡವರ ಹೊಟ್ಟೆಯ ಮೇಲೆ ಹೊಡೆಯಿತು ಎಂದರು.

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಎಂಪಿ ಟಿಕೆಟ್‌ಗೆ ಸ್ಪರ್ಧೆ ಪ್ರಾರಂಭ: ಗರಿಗೆದರಿದ ಆಕಾಂಕ್ಷಿಗಳ ಚಟುವಟಿಕೆ

ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಬಡವರು ಸಾಮಾನ್ಯ ವರ್ಗದವರಿಗೆ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿರಲಿಲ್ಲ. ನಮ್ಮ ಕಾರ್ಯಕರ್ತರು ಕಚೇರಿಯ ಕೆಲಸ ಕಾರ್ಯಗಳಿಗೆ ಹೋದಾಗ ಅಧಿಕಾರಿಗಳು ಸ್ಪಂದಿಸದೆ ವಾರಾನುಗಟ್ಟಲೆ ಅಲೆಸುತ್ತಿದ್ದರು. ಸರ್ಕಾರಿ ಕಚೇರಿಗಳಲ್ಲಿ ಕೇವಲ ದಲ್ಲಾಳಿಗಳ ದರ್ಬಾರ್‌ ಆಗಿತ್ತು. ಈಗ ರಾಜ್ಯದಲ್ಲಿ ಮತ್ತು ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿದ್ದು, ಬಡವರು ಮತ್ತು ಸಾಮಾನ್ಯ ವರ್ಗದವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕರಿಸುವ ಒಳ್ಳೆಯ ಅಧಿಕಾರಿಗಳನ್ನು ತಾಲೂಕಿಗೆ ಹಾಕಿಸ್ಕೊಂಡು ಬರುತ್ತಿದ್ದು, ತಾಲೂಕಿನ ಅಭಿವೃದ್ಧಿಯ ಬಗ್ಗೆ ಸಹಕಾರ ನೀಡದಂತಹ ಅಧಿಕಾರಿಗಳನ್ನು ಬೇರೆ ಕಡೆ ಕಳಿಸಲಾಗುತ್ತಿದೆ ಎಂದರು.

ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ: ಎಂಟಿಬಿ ನಾಗರಾಜ್‌ ಶ್ಲಾಘನೆ

ಕಾರ್ಯಕ್ರಮದಲ್ಲಿ ಮಾಸ್ತಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯ ನರಸಿಂಹ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಆರ್‌.ಶ್ರೀನಿವಾಸ್‌, ಗ್ರಾ.ಪಂ ಅಧ್ಯಕ್ಷೆ ಬೇಬಮ್ಮ, ರಾಮಪ್ಪ, ಉಪಾಧ್ಯಕ್ಷ ಪಿ.ವಿ.ನಾರಾಯಣಸ್ವಾಮಿ, ಸದಸ್ಯರುಗಳಾದ ಅಶ್ವಥ್‌, ಯಶೋದಮ್ಮ, ಪುಷ್ಪಾ, ಆಶಾ, ಸುಧಾಕರ್‌, ಅನಂತಮ,್ಮ ಕೆ.ಲೋಕೇಶ್‌, ವಿ ನಾರಾಯಣಪ್ಪ, ಪ್ರಭಾವತಿ, ಆನಂದ್‌, ಮೋಹನ್‌, ಮಂಜುಳಮ್ಮ, ನೀಲಮ್ಮ, ನೇತ್ರಾವತಿ, ಮುನಿರಾಜು ಮೂರ್ತಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್‌ ನೊಸಗೆರೆ, ಪಿಡಿಒ ಅಂಬರೀಶ್‌, ಲಕ್ಕೂರು ಪಿಡಿಒ ಕೃಷ್ಣಪ್ಪ, ಚಿಕ್ಕ ಅಕ್ಕಂಡಳ್ಳಿ ಪಿಡಿಒ ಚಿತ್ರ, ಕರ ವಸೂಲಿಗಾರ ತ್ಯಾಗರಾಜ್‌, ತಾಂತ್ರಿಕ ಅಭಿಯಂತರ ಪ್ರದೀಪ್‌, ಕಂಪ್ಯೂಟರ್‌ ಆಪರೇಟರ್‌ ಮಾರಪ್ಪ, ಸಿಬ್ಬಂದಿ ಶ್ರೀರಾಮಪ್ಪ, ಬಾಳಿಗಾನಹಳ್ಳಿ, ಗ್ರಾಮದ ಮುಖಂಡರು ಇನ್ನಿತರರು ಹಾಜರಿದ್ದರು.

Latest Videos
Follow Us:
Download App:
  • android
  • ios