ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ: ಎಂಟಿಬಿ ನಾಗರಾಜ್‌ ಶ್ಲಾಘನೆ

ಲೋಕಾಯುಕ್ತ ಅ​ಧಿಕಾರಿಗಳು ಕೆ.ಆರ್‌ ಪುರಂ ತಹಶೀಲ್ದಾರ್‌ ಆಗಿದ್ದ ಅಜಿತ್‌ ರೈರವರ ಮನೆ ಮೇಲೆ ಹಾಗೂ 11 ಕಡೆ ಲೋಕಾಯುಕ್ತ ದಾಳಿ ನಡೆದು ಬಂಧನವಾದ ವಿಚಾರ ಶ್ಲಾಘನೀಯವಾಗಿದ್ದು, ನ್ಯಾಯಸಮ್ಮತ ತನಿಖೆ ಮೂಲಕ ಭ್ರಷ್ಟಅಧಿ​ಕಾರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಎಂಟಿಬಿ ನಾಗರಾಜ್‌ ತಿಳಿಸಿದರು. 

Lokayukta attacks in different parts of the state MTB Nagaraj praised gvd

ಹೊಸಕೋಟೆ (ಜು.01): ಲೋಕಾಯುಕ್ತ ಅ​ಧಿಕಾರಿಗಳು ಕೆ.ಆರ್‌ ಪುರಂ ತಹಶೀಲ್ದಾರ್‌ ಆಗಿದ್ದ ಅಜಿತ್‌ ರೈರವರ ಮನೆ ಮೇಲೆ ಹಾಗೂ 11 ಕಡೆ ಲೋಕಾಯುಕ್ತ ದಾಳಿ ನಡೆದು ಬಂಧನವಾದ ವಿಚಾರ ಶ್ಲಾಘನೀಯವಾಗಿದ್ದು, ನ್ಯಾಯಸಮ್ಮತ ತನಿಖೆ ಮೂಲಕ ಭ್ರಷ್ಟಅಧಿ​ಕಾರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು. ಕೆ.ಆರ್‌.ಪುರಂ ತಹಶೀಲ್ದಾರ್‌ ಆಗಿದ್ದ ಅಜಿತ್‌ ರೈ ತಹಸೀಲ್ದಾರ್‌ ಆಗಿ ಕೇವಲ 6-7 ವರ್ಷಗಳಲ್ಲಿಯೇ ಅಕ್ರಮವಾಗಿ ಇಷ್ಟೊಂದು ಆಸ್ತಿಯನ್ನು ಹೇಗೆ ಮಾಡಿದರು? ನ್ಯಾಯಯು ತವಾಗಿ ಸಂಪಾದನೆ ಮಾಡಿದ್ದಂತೂ ಅಲ್ಲ. 

ತಿಂಗಳಿಗೆ 70 ರಿಂದ 80 ಸಾವಿರ ಸಂಬಳ ಪಡೆಯುವರು ಅಕ್ರಮವಾಗಿ 700 ರಿಂದ 800 ಕೋಟಿ ಆಸ್ತಿ ಮಾಡಿದ್ದಾರೆಂದರೆ ಬಡವರಿಗೆ ಎಷ್ಟುಅನ್ಯಾಯ ಮಾಡಿರಬೇಕು. ಅಜಿತ್‌ ರೈರವರು 2007ರಲ್ಲಿ ನಾನು ಹೊಸಕೋಟೆ ಶಾಸಕನಾಗಿದ್ದಾಗ ಅಲ್ಲಿ ಆರ್‌ಐ ಆಗಿ ಕೆಲಸ ಮಾಡುತ್ತಿದ್ದರು. ಆಗ 2-3 ಖಾತೆಗಳನ್ನು ಅಕ್ರಮವಾಗಿ ಮಾಡಿದ್ದಾರೆಂದು ದೂರುಗಳು ಬಂದ ಹಿನ್ನೆಲೆಯಲ್ಲಿ ನಾನೇ ಅವರನ್ನು ಅಲ್ಲಿಂದ ಬೇರೆಡೆ ವರ್ಗಾವಣೆ ಮಾಡಿಸಿದ್ದೆ ಎಂದರು. ಆದಾದ ನಂತರ ಇವರು ತಹಶೀಲ್ದಾರ್‌ ಹುದ್ದೆಗೆ ಮುಂಬಡ್ತಿ ಹೊಂದಿ ಶಿಡ್ಲಘಟ್ಟದಲ್ಲಿ ಸುಮಾರು ಒಂದೂವರೆ ವರ್ಷ, ದೇವನಹಳ್ಳಿಯಲ್ಲಿ ಒಂದೂವರೆ ವರ್ಷ ಮತ್ತು ಕಳೆದ ಮೂರು ವರ್ಷಗಳಿಂದ ಕೆ.ಆರ್‌.ಪುರಂ ನಲ್ಲಿ ತಹಶೀಲ್ದಾರ್‌ ಆಗಿ ಕೆಲಸ ಮಾಡುತ್ತಿದ್ದರು.

ಬಿಜೆಪಿಗೆ ಮೋದಿ ಇದ್ದಂತೆ ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದರಾಮಯ್ಯ: ಎಂಟಿಬಿ ನಾಗರಾಜ್‌ ಹೊಗಳಿಕೆ!

ಇವರಂತೆಯೇ ಇನ್ನೂ ಕೆಲವು ಅ​ಧಿಕಾರಿಗಳು ಆರ್‌ಆರ್‌ಟಿ, ಎಲ್‌ಎನ್‌ಡಿ ಪ್ರಕರಣಗಳಲ್ಲಿ ಪಾರದರ್ಶಕವಾಗಿ ಆದೇಶ ನೀಡದೇ ದುಡ್ಡು ಕೊಟ್ಟವರ ಪರ ಆದೇಶ ಮಾಡಿ ಕೊಟ್ಯಾ ಂತರ ರೂಪಾಯಿ ಹಣ ಮಾಡಿದ್ದಾರೆ. ಅಲ್ಲದೆ ಕೆಲವು ದೊಡ್ಡ ದೊಡ್ಡ ಅ​ಧಿಕಾರಿಗಳು ಕೂಡ ಭೂ ಮಾಫಿಯಾದವರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಸರ್ಕಾರಿ ಜಮೀನುಗಳು, ಕೆರೆ-ಕುಂಟೆಗಳನ್ನು ಪರಭಾರೆ ಮಾಡುವುದು ಹಾಗೂ ಸಾರ್ವಜನಿಕರಿಂದ ಸಾಕಷ್ಟು ಹಣ ವಸೂಲಿ ಮಾಡಿರುವವರು ಇದ್ದಾರೆ. ಇದರಲ್ಲಿ ರಾಜಕಾರಣಿಗಳ ಕುಮ್ಮಕ್ಕಿನಿಂದ ಕೆಲವು ಹಿರಿಯ ಅ​ಧಿಕಾರಿಗಳು ಭೂ ಮಾಫಿಯಾದವರೊಂದಿಗೆ ಶಾಮೀಲಾಗಿ ಸರ್ಕಾರಿ ಜಮೀನುಗಳನ್ನು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಳ್ಳು ಹೇಳಿ ಬಿಜೆಪಿ ಅಧಿಕಾರ ಕಸಿದುಕೊಂಡ ಕಾಂಗ್ರೆಸ್‌: ಎಂಟಿಬಿ ನಾಗರಾಜ್‌

ಪಾರದರ್ಶಕ ತನಿಖೆ ಆಗಲಿ: ಈ ರೀತಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿರುವ ಯಾರೇ ಅಧಿ​ಕಾರಿಗಳಾಗಲಿ ಅವರ ಮೇಲೆ ಲೋಕಾಯುಕ್ತ ದಾಳಿ ಆಗಲಿ, ಹಾಗೂ ಅದರ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ಯಾರೇ ಆಗಿರಲಿ ಅವರಿಗೆ ಸರಿಯಾದ ಶಿಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ಕೈಗೊಂಡಲ್ಲಿ ಭ್ರಷ್ಟಅ​ಕಾರಿ ಗಳಿಗೆ ಭಯಬರುತ್ತೆ ಇದರಿಂದ ಸಾರ್ವಜನಿಕರಿಗೂ ಕೂಡ ನ್ಯಾಯಪರವಾದ ಸೇವೆಗಳು ಸಿಗಲು ಸಾಧ್ಯವಾಗುತ್ತೆ ಎಂದು ಮಾಜಿ ಸಚಿವ ಹಾಗೂ ಎಂಎಲ್ಸಿ ಎಂಟಿಬಿ ನಾಗರಾಜ್‌ ತಿಳಿಸಿದರು.

Latest Videos
Follow Us:
Download App:
  • android
  • ios