ಲೋಕಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಅಭ್ಯರ್ಥಿಗಳು ಯಾರೂ ಎಂಬ ಪಿಸುಗುಸು ಮಾತುಗಳು ಪ್ರಾರಂಭವಾಗಿವೆ. 

ಚಿಕ್ಕಬಳ್ಳಾಪುರ (ಜು.01): ಲೋಕಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಅಭ್ಯರ್ಥಿಗಳು ಯಾರೂ ಎಂಬ ಪಿಸುಗುಸು ಮಾತುಗಳು ಪ್ರಾರಂಭವಾಗಿವೆ. ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಸೋತ ವೀರಪ್ಪ ಮೊಯಿಲಿ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧವಾಗುತ್ತಿದ್ದರೆ, ಇನ್ನೊಂದೆಡೆ ಕ್ಷೇತ್ರಕ್ಕೆ ಹೊಸ ಮುಖ ರಾಹುಲ್‌ ಗಾಂಧಿ ಮಿತ್ರ, ರಕ್ಷ ರಾಮಯ್ಯ ಸಹ ಈ ಬಾರಿ ಟಿಕೆಟ್‌ ಪಡೆದು ಲೋಕಸಭೆಗೆ ಪ್ರವೇಶಿಸುವ ತವಕದಲ್ಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಪಕ್ಷಕ್ಕೆ ಆನೆ ಬಲ ಬಂದಿದೆ. ಇದೆ ಹುಮ್ಮಸ್ಸಲ್ಲಿ ಲೋಕಸಭೆಗೆ ಕನಿಷ್ಠ ಇಪ್ಪತ್ತು ಸದಸ್ಯರನ್ನ ಗೆಲ್ಲಿಸಿ ಕಳುಹಿಸುವ ಪಣ ತೊಟ್ಟಮುಖ್ಯಮಂತ್ರಿ ಸಿದ್ದರಾಮಯ್ಯ ಟಾರ್ಗೆಟ್‌ ಫಿಕ್ಸ್‌ ಮಾಡಿದ್ದಾರೆ. ಇದೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಕ್ಷದ ಚಟುವಟಿಕೆಗಳು ಪ್ರಾರಂಭವಾಗಿವೆ. ಈಗಾಗಲೆ ರಾಜ್ಯದಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಲು ಮುಖಂಡರು ಸಿದ್ಧತೆ ಮಾಡಿಕೊಳ್ಳುತಿದ್ದಾರೆ.

Ramanagara: ಜನ​ಪ್ರ​ತಿ​ನಿ​ಧಿ​ಗಳ ಸಹ​ಕಾರವಿದ್ದರೆ ಆಂಗ್ಲ ಶಾಲೆಗೆ ಶಂಕು: ಶಾಸಕ ಬಾಲಕೃಷ್ಣ

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ ಸೋತಿದ್ದ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ನಗರದಲ್ಲಿ ಈಗಾಗಲೆ ತಮ್ಮ ಕಚೇರಿ ತೆರೆದಿದ್ದು, ಜನಸೇವೆ ಪ್ರಾರಂಭ ಮಾಡಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್‌ ಗೆದ್ದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ ನಾಯಕ ರಕ್ಷಾ ರಾಮಯ್ಯ ಸಹ ಕಣಕ್ಕಿಳಿಯುವ ಉತ್ಸುಕತೆಯಲ್ಲಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.

ರಕ್ಷಾ ರಾಮಯ್ಯ ಟಿಕೆಟ್‌ ಪಡೆಯಲು ಪ್ರಯತ್ನ ಮಾಡುತ್ತಿದ್ದು ಮತ್ತೊಂದೆಡೆ ವೀರಪ್ಪ ಮೋಯ್ಲಿ ಟಿಕೆಟ್‌ಗೆ ಡಿಮ್ಯಾಂಡ್‌ ಮಾಡ್ತಿದ್ದಾರೆ. ಆದ್ರೆ ನಾನು ಮಾಡಿಲ್ಲ ಪಕ್ಷವೇ ನನ್ನನ್ನ ಗುರ್ತಿಸಿ ಟಿಕೆಟ್‌ ಕೊಡ್ತಾರೆ ಅಂತ ಹೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಪಾಳಯದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಮತ್ತು ಯುವ ನಾಯಕನ ನಡುವೆ ಟಿಕೆಟ್‌ ನಡೆಯಲಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಈ ಭಾರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಲಿದೆ ಅನ್ನೋದಂತು ಸತ್ಯ.

ಟಿಕೆಟ್ ಕೇಳುತ್ತೇವೆ: ಶುಕ್ರವಾರ ಬಕ್ರೀದ್‌ ಹಬ್ಬದ ಅಂಗವಾಗಿ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಬಿಎಸ್‌ ರಫೀಉಲ್ಲಾ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಂ.ಆರ್‌. ಸೀತಾರಾಮ್‌ ಮತ್ತು ಅವರ ಮಗ ರಕ್ಷಾ ರಾಮಯ್ಯ ಟಿಕೆಟ್‌ ಆಕಾಂಕ್ಷೆ ಹೊಂದಿರುವುದನ್ನು ಖಚಿತ ಪಡಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಸಚಿವ ಸೀತಾರಾಮ್‌, 2009 ರಲ್ಲಿ ನನಗೆ ಟಿಕೆಟ್‌ ತಪ್ಪಿಸಿದ್ದರು. 

ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್‌

ವೀರಪ್ಪಮೊಯ್ಲಿ ಗೆದ್ದರು. 2014 ರಲ್ಲಿ ಮತ್ತೆ ನನ್ನ ಸ್ಪರ್ಧೆಯನ್ನು ತಪ್ಪಿಸಿದ ಮೊಯ್ಲಿ ಸ್ಪರ್ಧಿಸಿ ಸೋತರು. ಈ ಬಾರಿ ನಮ್ಮ ರಕ್ಷಾ ರಾಮಯ್ಯ ಪಕ್ಷದಲ್ಲಿ ಗುರುತಿಸಿಕೊಂಡು ಮುಂದೆ ಬಂದಿದ್ದಾರೆ. ಮೇಲಾಗಿ ರಾಹುಲ್‌ ಗಾಂಧಿಯವರೊಂದಿಗೆ ರಾಜಕೀಯವಾಗಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಯುವಕರಿಗೆ ಸ್ಪೂರ್ತಿಯಾಗಿ ಕೆಲಸ ಮಾಡುತಿದ್ದಾರೆ ಗೆಲ್ಲುವ ಅವಕಾಶವೂ ಇದೆ. ಅದಕ್ಕಾಗಿ ಈ ಬಾರಿ ನಮಗೆ ಟಿಕೆಟ್‌ ಬೇಕು ಎಂದು ಕೇಳುತ್ತೇವೆ ಎಂದು ಹೇಳುವ ಮೂಲಕ ರಕ್ಷಾ ರಾಮಯ್ಯ ಅವರ ಸ್ಪರ್ಧೆ ಖಚಿತವೆಂಬುದನ್ನು ಸ್ಪಷ್ಟಪಡಿಸಿದರು.