26ರಂದು ಸಿದ್ದರಾಮಯ್ಯ ಕೊಡಗಿಗೆ ಬರಲಿ ನೋಡೋಣ: ಬೋಪಯ್ಯ
ಕೊಡಗಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆತ ಪ್ರಕರಣ ಸಂಬಂಧ ಪೊಲೀಸ್ ವೈಫಲ್ಯ ಖಂಡಿಸಿ ಆ.26ರಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿರುವ ಸಿದ್ದರಾಮಯ್ಯ ಅವರು ಕೊಡಗಿಗೆ ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಮಡಿಕೇರಿ (ಆ.20): ಕೊಡಗಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆತ ಪ್ರಕರಣ ಸಂಬಂಧ ಪೊಲೀಸ್ ವೈಫಲ್ಯ ಖಂಡಿಸಿ ಆ.26ರಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿರುವ ಸಿದ್ದರಾಮಯ್ಯ ಅವರು ಕೊಡಗಿಗೆ ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಕೊಡಗಿಗೆ ಬಂದಾಗ ಎಲ್ಲೂ ಪೊಲೀಸ್ ವೈಫಲ್ಯ ಆಗಿಲ್ಲ. ಕೊಡವರ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯವನ್ನು ಇಲ್ಲಿನ ಜನ ಮರೆತಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ನ್ಯಾಯಾಲಯವೇ ಹೇಳಿದೆ ಎಂದರು.
ಸಿದ್ದರಾಮಯ್ಯ ಅವರೇ ಸವಾಲು ಹಾಕೋದು ಬಿಟ್ಟುಬಿಡಿ, ಅದೆಲ್ಲ ಕೊಡಗಿನಲ್ಲಿ ನಡೆಯುವುದಿಲ್ಲ. ಆ.26 ರಂದು ಪ್ರತಿಭಟನೆಗೆ ಬರುತ್ತೇನೆ ಎಂಬ ನಿಮ್ಮ ಹೇಳಿಕೆಯನ್ನು ನಾವೂ ಸವಾಲಾಗಿ ಸ್ವೀಕರಿಸುತ್ತೇವೆ. ಅವರು ಬರಲಿ ನೋಡೋಣ ಎಂದು ಇದೇ ವೇಳೆ ಹೇಳಿದರು. ಬಿಜೆಪಿ ಮತ್ತು ಸಂಘ ಪರಿವಾರಕ್ಕೂ ಯಾವುದೇ ಸಂಬಂಧ ಇಲ್ಲ. ಬೇಕಂತಲೇ ಕಾಂಗ್ರೆಸ್‌ನವರೇ ಮೊಟ್ಟೆಎಸೆದುಕೊಂಡಿರಬಹುದು ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.
‘ಬಂದೂಕು ಹಿಡಿಯೋದು ನಮ್ಮ ಹಕ್ಕು, ಕೇಳೋಕ್ಕೆ ಸಿದ್ದು ಯಾರು?’
ಜತೆಗೆ, ಸಿದ್ದರಾಮಯ್ಯ ವಿರುದ್ಧ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಇದು ಅವರ ಕುರಿತು ಸಹಜವಾದ ಕೊಡಗಿನ ಜನರ ಆಕ್ರೋಶವಾಗಿದೆ. ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆದಿಲ್ಲ. ಬೇಕು ಬೇಕು ಅಂತ ಕಾಂಗ್ರೆಸ್ ಕಡೆಯವರೇ ಮೊಟ್ಟೆಎಸೆದುಕೊಂಡಿರಬಹುದು. ಮುಖ್ಯಮಂತ್ರಿ ಪೈಪೋಟಿಯಲ್ಲಿ ಅವರ ಕಡೆಯವರೇ ಮೊಟ್ಟೆಹೊಡೆಸಿದರೋ ಏನೋ ಗೊತ್ತಿಲ್ಲ ಎಂದರು.
ಸಾವರ್ಕರ್ ಫೋಟೋ ಮುಸಲ್ಮಾನ ಮೆಜಾರಿಟಿ ಇರುವೆಡೆ ಹಾಕಿದ್ಯಾಕೆ ಅಂದಿದ್ದು..? ಟಿಪ್ಪು ಫೋಟೋ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಹಾಕಿ ಅಂತ ಸಿದ್ದು ಹೇಳಿರುವುದು ಇದೆಲ್ಲವೂ ಕೊಡಗಿನ ಜನ ಹಾಗೂ ಬಿಜೆಪಿ ಕಾರ್ಯಕರ್ತರನ್ನ ಕೆರಳಿಸಿದೆ ಎಂದರು. ಸಿದ್ದರಾಮಯ್ಯ ಕೊಡಗಿಗೆ ಬಂದಾಗ ಎಲ್ಲೂ ಪೊಲೀಸ್ ವೈಫಲ್ಯತೆ ಆಗಿಲ್ಲ. ಕೊಡಗಿನಲ್ಲಿ ಕೊಡವರ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯವನ್ನು ಕೊಡಗಿನ ಜನ ಮರೆತಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ನ್ಯಾಯಾಲಯವೇ ಹೇಳಿದೆ.
ಬಿಜೆಪಿ ಶಾಸಕ ಬೋಪಯ್ಯಗೆ 1 ಕೋಟಿಗೆ ಬೇಡಿಕೆ ಇಟ್ಟಿದ್ದವನ ಬಂಧನ
ಕೊಡಗಿನ ಕಾಂಗ್ರೆಸ್ನವರು ಟಿಪ್ಪು ಬಗ್ಗೆ ತಮ್ಮ ನಿಲುವನ್ನ ಸ್ಪಷ್ಟಪಡಿಸಲಿ. ತಾಕತ್ತಿದ್ದರೆ ಟಿಪ್ಪು ಜಯಂತಿ ಮಾಡುತ್ತೇವೆ ಅಂತ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಲಿ ಎಂದರು. ಕೊಡಗಿನಲ್ಲಿ ಅದೆಲ್ಲ ನಡೆಯಲ್ಲ: ಸಿದ್ದರಾಮಯ್ಯರೇ ಸವಾಲು ಹಾಕೋದು ಬಿಟ್ಟುಬಿಡಿ ಅದೆಲ್ಲಾ ಕೊಡಗಿನಲ್ಲಿ ನಡೆಯುವುದಿಲ್ಲ. ಆ.26 ರಂದು ಬರುತ್ತೇನೆ ಎಂಬುದನ್ನು ನಾವೂ ಕೂಡ ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಬೋಪಯ್ಯ ಹೇಳಿದರು.