*  ಫೋನ್‌ ಮೂಲಕ ಹಣದ ಆಮಿಷ ಇಟ್ಟಿದ್ದ ರೌಡಿಶೀಟರ್‌ ಆನಂದ್‌ *  ಲೊಕೇಶನ್‌ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು*  ರೈಲ್ವೆ ನಿಲ್ದಾಣದಲ್ಲಿ ಆರೋಪಿ ಬಂಧನ 

ಮಡಿಕೇರಿ(ಜ.14):  ವಿರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ(KG Bopaiah) ಅವರ ಮನೆಯ ಮೇಲೆ ಎಸಿಬಿ ದಾಳಿ(ACD Raid) ನಡೆಸುತ್ತೇವೆ ಎಂದು ಬೆದರಿಕೆ ಹಾಕಿ ಒಂದು ಕೋಟಿ ರುಪಾಯಿ ಹಣದ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು(Police) ಯಶಸ್ವಿಯಾಗಿದ್ದಾರೆ. ತುಮಕೂರಿನ(Tumakuru) ಕೊರಟಗೆರೆ ನಿವಾಸಿ ರೌಡಿಶೀಟರ್‌ ಆನಂದ್‌ (31) ಬಂಧಿತ(Arrest) ಆರೋಪಿ(Accused). ಕೆಲವು ದಿನಗಳ ಹಿಂದೆಯಷ್ಟೇ ನಿಮ್ಮ ಮೇಲೆ ಎಸಿಬಿ ದಾಳಿಯಾಗಲಿದ್ದು, ಅದನ್ನು ತಡೆಯಲು ಕೆ.ಜಿ. ಬೋಪಯ್ಯ ಅವರಿಗೆ ಫೋನ್‌ ಮೂಲಕ ಹಣದ ಆಮಿಷ ಇಟ್ಟಿದ್ದ ವ್ಯಕ್ತಿಯನ್ನು ಮಡಿಕೇರಿ ಕ್ರೈಂ ಪೊಲೀಸರು(Madikeri Crime Police) ಬಂಧಿಸಿದ್ದಾರೆ.

ತನಗೆ ವ್ಯಕ್ತಿಯೊಬ್ಬ ಕರೆ ಮಾಡಿ ಹಣದ ಆಮಿಷವೊಡ್ಡಿರುವ ಬಗ್ಗೆ ಕೆ.ಜಿ. ಬೋಪಯ್ಯ ಅವರು ಎಡಿಜಿಪಿ ಅವರ ಗಮನಕ್ಕೆ ತಂದಿದ್ದರು. ಕರೆ ಮಾಡಿದ ಸಂಖ್ಯೆಯ ಫೋನ್‌ ಲೊಕೇಶನ್‌ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಆಂಧ್ರಪ್ರದೇಶ(Anadhra Pradesh) ಗಡಿಯಲ್ಲಿ ಪತ್ತೆಯಾಗಿದ್ದು, ನಂತರ ರೈಲು ಮೂಲಕ ಬೆಂಗಳೂರು(Bengaluru) ಕಡೆಗೆ ವಾಪಸ್ಸಾಗುತ್ತಿರುವುದು ತಿಳಿದಿದೆ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಆನಂದನನ್ನು ಬಂಧಿಸಲಾಗಿದೆ.

Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

ಕೊಡಗಿನ ಕ್ರೈಂ ಬ್ರಾಂಚ್‌ನ ಸಿದ್ದಾಪುರದ ಎಸ್‌ಐ ಮೋಹನ್‌ ರಾಜ್‌, ಕಾನ್ಸ್‌ ಟೇಬಲ್‌ ವಸಂತ್‌, ಮಡಿಕೇರಿಯ ನಾಗರಾಜ್‌, ನಂದಕುಮಾರ್‌ ನೇತೃತ್ವದ ಆರು ಮಂದಿಯ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮನೆಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಆರೋಪಿಗಳ ಸೆರೆ

ಬೆಂಗಳೂರು: ನಗರದಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದ ಇಬ್ಬರನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರದ ಹೇಮಂತ್‌ ಹಾಗೂ ಕುಮಾರಸ್ವಾಮಿ ಲೇಔಟ್‌ನ ಮಂಜುನಾಥ್‌ ಬಂಧಿತರಾಗಿದ್ದು, ಆರೋಪಿಗಳಿಂದ 48.6 ಗ್ರಾಂ ಚಿನ್ನದ ಆಭರಣ, 6 ಬೈಕ್‌ಗಳು, ಕಾರು ಹಾಗೂ ಆಟೋ ಜಪ್ತಿ ಮಾಡಲಾಗಿದೆ.

Theft Cases: ಮನೆಗಳುವು ಮಾಡುತ್ತಿದ್ದ ಮೂವರು ಜೈಲ್‌ ಫ್ರೆಂಡ್ಸ್‌ ಮತ್ತೆ ಜೈಲು ಪಾಲು..!

ಹೇಮಂತ್‌ ಹಾಗೂ ಮಂಜುನಾಥ್‌ ವೃತ್ತಿಪರ ಮನೆಗಳ್ಳರಾಗಿದ್ದು, ಅವರ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತಿನಲ್ಲಿ ವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು, ಆ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಈ ಮನೆಗಳಿಗೆ ರಾತ್ರಿ ವೇಳೆ ಆರೋಪಿಗಳು ಕನ್ನ ಹಾಕುತ್ತಿದ್ದರು. ಈ ಇಬ್ಬರ ಬಂಧನದಿಂದ ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಸುಬ್ರಹ್ಮಣ್ಯಪುರ, ಕೆ.ಜಿ.ನಗರ ಹಾಗೂ ಕೋರಮಂಗಲ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಬೈಕ್‌ ಮತ್ತು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸ್ವಿಗ್ಗಿ ಬಾಯ್‌ ಮೇಲೆ ಹಲ್ಲೆ ನಡೆಸಿ ಸ್ಕೂಟರ್‌ ದೋಚಿದ್ದವನ ಬಂಧನ

ಬೆಂಗಳೂರು: ಇತ್ತೀಚೆಗೆ ಸ್ವಿಗ್ಗಿ ಡೆಲವರಿ ಬಾಯ್‌ಗೆ ಬೆದರಿಕೆ ಹಾಕಿ ಸ್ಕೂಟರ್‌ ಹಾಗೂ ಮೊಬೈಲ್‌ ದೋಚಿದ್ದ ಕಿಡಿಗೇಡಿಯೊಬ್ಬನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಾಸಿಪಾಳ್ಯದ ಗುಣನಾಥ್‌ ಬಂಧಿತನಾಗಿದ್ದು, ಆರೋಪಿಯಿಂದ ಸ್ಕೂಟರ್‌ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಚಾಮರಾಜಪೇಟೆಯ ಗಿರೀಶ್‌, ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಜ.4ರಂದು ರಾತ್ರಿ ಕಲಾಸಿಪಾಳ್ಯದಲ್ಲಿ ಗ್ರಾಹಕರಿಗೆ ಆಹಾರ ತಲುಪಿಸಿ ಗಿರೀಶ್‌ ಹಿಂತಿರುಗುತ್ತಿದ್ದ. ಆಗ ದಾರಿ ಮಧ್ಯೆ ಗಿರೀಶ್‌ನನ್ನು ಅಡ್ಡಗಟ್ಟಿದ ಆರೋಪಿಗಳು, ಗಿರೀಶ್‌ ಬಳಿ ಇದ್ದ ಫುಡ್‌ ಪ್ಯಾಕ್‌ನಲ್ಲಿ ಊಟ ಇದೆಯಾ ಎಂದು ಪರಿಶೀಲಿಸಿದರು. ಬಳಿಕ ತಮ್ಮನ್ನು ಜೆ.ಸಿ.ರಸ್ತೆಯ ಸಿಗ್ನಲ್‌ವರೆಗೆ ಡ್ರಾಪ್‌ ಕೊಡುವಂತೆ ಒತ್ತಾಯಿಸಿ ಬಲವಂತವಾಗಿ ಇಬ್ಬರು ಸ್ಕೂಟರ್‌ ಹತ್ತಿದ್ದಾರೆ. ನಂತರ ರಾಜಗೋಪಾಲ ಲೇಔಟ್‌ನಲ್ಲಿ ಗಿರೀಶ್‌ಗೆ ಬೆದರಿಕೆ ಹಾಕಿ ಆತನಿಂದ ಮೊಬೈಲ್‌ ಕಸಿದುಕೊಂಡು ಸ್ಕೂಟರ್‌ ಸಮೇತ ಕಿಡಿಗೇಡಿಗಳು ಪರಾರಿಯಾಗಿದ್ದರು.