Chamarajanagar: ತಾತ, ಅಪ್ಪನಂತೆ ಸೋಲದೆ ಗೆದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್!
ಕಾಕತಾಳೀಯ ಎಂಬಂತೆ ಎಚ್.ಎನ್.ಶ್ರೀಕಂಠಶೆಟ್ಟಿ,ಎಚ್.ಎಸ್. ಮಹದೇವಪ್ರಸಾದ್ ಹಾಗು ಸಿ.ಎಂ.ಶಿವಮಲ್ಲಪ್ಪ, ಸಿ.ಎಸ್.ನಿರಂಜನ್ ಕುಮಾರ್ ಸೋತು ಗೆದ್ದವರಾಗಿ ಹೋಗಿದ್ದಾರೆ. ಆದರೆ ನೂತನ ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತ್ರ ಮೊದಲ ಚುನಾವಣೆಯಲ್ಲೇ ಬಿಜೆಪಿ ಪ್ರಭಾವಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್‌ರನ್ನು ಮಣಿಸಿ ಮನೆಗೆ ಕಳುಹಿಸಿದ್ದಾರೆ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ (ಮೇ.22): ತಾಲೂಕಿನ ಅಮ್ಮ ಎಂದೇ ಹೆಸರಾದ ಕೆ.ಎಸ್.ನಾಗರತ್ನಮ್ಮ ಹಾಗು ಎಚ್.ಎಸ್.ಮಹದೇವಪ್ರಸಾದ್ ವಿರುದ್ಧ ಅಪ್ಪ,ಮಗ ಸೋಲು ಕಂಡಿದ್ದು ಇತಿಹಾಸ. ಕೆ.ಎಸ್.ನಾಗರತ್ಮಮ್ಮ ಬದುಕಿರೋ ತನಕ ಎಚ್.ಎನ್.ಶ್ರೀಕಂಠಶೆಟ್ಟಿ, ಎಚ್.ಎಸ್. ಮಹದೇವಪ್ರಸಾದ್ ಗೆಲ್ಲಲಿಲ್ಲ. ಕಾಕತಾಳೀಯ ಎಂದರೆ ಎಚ್.ಎಸ್.ಮಹದೇವಪ್ರಸಾದ್ ಬದುಕಿರೋ ತನಕ ಸಿ.ಎಂ.ಶಿವಮಲ್ಲಪ್ಪ, ಸಿ.ಎಸ್.ನಿರಂಜನ್‌ಕುಮಾರ್ ಕೂಡ ಗೆಲ್ಲಲಿಲ್ಲ.
ಕೆ.ಎಸ್.ನಾಗರತ್ನಮ್ಮ ನಿಧನದ ಬಳಿಕ ಎಚ್.ಎಸ್.ಮಹದೇವಪ್ರಸಾದ್ 1994 ರಲ್ಲಿ ಗೆದ್ದರು. ನಂತರ 1999, 2004, 2008, 2013 ತನಕ ಗೆಲ್ಲುತ್ತಲೇ ಬಂದರು. ಆದರೆ ಎಚ್.ಎಸ್.ಮಹದೇವಪ್ರಸಾದ್ ನಿಧನದ ಬಳಿಕ ಸಿ.ಎಸ್.ನಿರಂಜನ್‌ಕುಮಾರ್ ಗೆಲ್ಲಲಿಲ್ಲ. 2017 ರ ಬೈ ಎಲೆಕ್ಷನ್‌ನಲ್ಲಿ ಡಾ.ಗೀತಾ ಮಹದೇವಪ್ರಸಾದ್ ವಿರುದ್ಧ ಸೋತರು.
ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲಕೃಷ್ಣ
ನಂತರದ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿ.ಎಸ್.ನಿರಂಜನ್‌ಕುಮಾರ್ ಗೆದ್ದು ಶಾಸಕರಾದರು. ಎರಡನೇ ಚುನಾವಣೆ(2023)ಯಲ್ಲಿ ಹೀನಾಯವಾಗಿ ಸೋತು ಮನೆ ಸೇರಿದ್ದಾರೆ. ಇದು ಎಚ್.ಎನ್. ಶ್ರೀಕಂಠಶೆಟ್ಟಿ,ಎಚ್.ಎಸ್.ಮಹದೇವಪ್ರಸಾದ್ ಹಾಗು ಸಿ.ಎಂ.ಶಿವಮಲ್ಲಪ್ಪ ಹಾಗು ಸಿ.ಎಂ.ಶಿವಮಲ್ಲಪ್ಪ, ಸಿ.ಎಸ್.ನಿರಂಜನ್‌ಕುಮಾರ್ ಕಥೆ, ವ್ಯಥೆ.
ಸೋಲದೆ ಗೆದ್ದ ಗಣೇಶ್: ಕಾಕತಾಳೀಯ ಎಂಬಂತೆ ಎಚ್.ಎನ್.ಶ್ರೀಕಂಠಶೆಟ್ಟಿ,ಎಚ್.ಎಸ್. ಮಹದೇವಪ್ರಸಾದ್ ಹಾಗು ಸಿ.ಎಂ.ಶಿವಮಲ್ಲಪ್ಪ, ಸಿ.ಎಸ್.ನಿರಂಜನ್ ಕುಮಾರ್ ಸೋತು ಗೆದ್ದವರಾಗಿ ಹೋಗಿದ್ದಾರೆ. ಆದರೆ ನೂತನ ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತ್ರ ಮೊದಲ ಚುನಾವಣೆಯಲ್ಲೇ ಬಿಜೆಪಿ ಪ್ರಭಾವಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್‌ರನ್ನು ಮಣಿಸಿ ಮನೆಗೆ ಕಳುಹಿಸಿದ್ದಾರೆ.
ಎರಡು ಬಾರಿ ಸೋತ್ರು: ಮಾಜಿ ಸ್ಪೀಕರ್ ಕೆ.ಎಸ್.ನಾಗರತ್ನಮ್ಮ ವಿರುದ್ಧ ಎಚ್.ಎನ್.ಶ್ರೀಕಂಠಶೆಟ್ಟಿ1978,1983,ಎಚ್.ಎಸ್. ಮಹದೇವಪ್ರಸಾದ್ 1985,1989 ಸೋತರು.1994 ರಲ್ಲಿ ಎಚ್.ಎಸ್.ಮಹದೇವಪ್ರಸಾದ್ ಸಿ.ಎಂ.ಶಿವಮಲ್ಲಪ್ಪ ವಿರುದ್ಧ ಗೆದ್ದರು. ಆದರೆ ಎಚ್.ಎಸ್.ಮಹದೇವಪ್ರಸಾದ್ ವಿರುದ್ಧ ಸಿ.ಎಂ.ಶಿವಮಲ್ಲಪ್ಪ 1994,1999, ಸಿ.ಎಸ್.ನಿರಂಜನ್‌ಕುಮಾರ್ 2008, 2013, ಡಾ.ಗೀತಾಮಹದೇವಪ್ರಸಾದ್ ವಿರುದ್ಧ 2017(ಬೈ ಎಲೆಕ್ಷನ್) ಸೋಲು ಕಂಡರು. 2018 ರ ಚುನಾವಣೆಯಲ್ಲಿ ಡಾ.ಗೀತಾಮಹದೇವಪ್ರಸಾದ್ ವಿರುದ್ಧ ಗೆದ್ದರು.
ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಜೀವಾಳ: ಸಚಿವ ಮುನಿಯಪ್ಪ
ಗೆದ್ದೂ ಸೋತ ನಿರಂಜನ್: 2018 ರಲ್ಲಿ ಗೆದ್ದ ಸಿ.ಎಸ್.ನಿರಂಜನ್‌ಕುಮಾರ್ ಬಿಜೆಪಿ ಶಾಸಕರಾದರು. ಬಿಜೆಪಿ ಸರ್ಕಾರ 2019 ರಲ್ಲಿ ಬಂದ ನಂತರ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದರು. ಆದರೆ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವಿರುದ್ಧ ಸೋಲು ಕಂಡಿದ್ದಾರೆ.