ರಾಮನಗರ ಜಿಲ್ಲೆ ವಿಚಾರ ಮುಂದಿಟ್ಟುಕೊಂಡು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಾಡಿದ ಟೀಕೆ ಕುರಿತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ (ಅ.29): ರಾಮನಗರ ಜಿಲ್ಲೆ ವಿಚಾರ ಮುಂದಿಟ್ಟುಕೊಂಡು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಾಡಿದ ಟೀಕೆ ಕುರಿತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಅವರು ಏನೇನು ಮಾಡಿದ್ದಾರೆಂಬುದು ದಾಖಲೆಗಳನ್ನು ತೆಗೆದು ನೋಡಿದರೆ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದ್ದಾರೆ. 

ಹೊಳೆನರಸೀಪುರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡಬೇಕು, ಕೆಂಪೇಗೌಡರ ಹೆಸರಿಡಬೇಕು ಎಂದು ಕುಮಾರಸ್ವಾಮಿ ತೀರ್ಮಾನ ಮಾಡಿದ್ದರು. ಆದರೆ, ಕೆಲವರು ರಾಮನಗರ ಎಂದೇ ನಾಮಕರಣ ಮಾಡುವಂತೆ ಹೇಳಿದ ಹಿನ್ನೆಲೆಯಲ್ಲಿ ಆ ಹೆಸರು ಇಡಲಾಯಿತು ಎಂದರು. ರಾಮನಗರ ಜಿಲ್ಲೆಯ ಮೆಡಿಕಲ್ ಕಾಲೇಜು, ರಾಜೀವ್‌ಗಾಂಧಿ ವಿಶ್ವವಿದ್ಯಾಲಯವನ್ನು 10 ವರ್ಷದಿಂದ ಯಾರು ತಡೆದಿದ್ದಾರೆ ಎಂಬ ಕುರಿತು ಕಾಲ ಬಂದಾಗ ಮಾತನಾಡುತ್ತೇನೆ ಎಂದು ಇದೇ ವೇಳೆ ರೇ‍ವಣ್ಣ ತಿಳಿಸಿದರು.

ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್‌ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ

ರೈತರಿಂದಲೇ ನೇರವಾಗಿ ಮುಸುಕಿನ ಜೋಳ ಖರೀದಿಸಿ: ರಾಜ್ಯ ಕೆಎಂಎಫ್‌ಗೆ ಅಗತ್ಯವಾಗಿರುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಶಾಸಕ ಹಾಗೂ ಹಾಸನ ಜಿಲ್ಲೆ ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜನೆ ಮಾಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಮುನ್ನ ಮಾಧ್ಯಮದ ಜತೆ ಮಾತನಾಡಿದರು. ರಾಜ್ಯದಲ್ಲಿ ಪಶು ಆಹಾರಕ್ಕೆ ಪ್ರತಿವರ್ಷ 174 ಸಾವಿರ ಕ್ವಿಂಟಾಲ್ ಮೆಕ್ಕೇಜೋಳ ಬಳಕೆ ಮಾಡಲಾಗುತ್ತದೆ. 

ಈ ಮೆಕ್ಕೆಜೋಳವನ್ನು 3 ವ್ಯಕ್ತಿಗಳಿಂದ ಪ್ರತಿ ಕ್ವಿಂ.ಗೆ 2,500 ರು. ದರದಲ್ಲಿ ಕೆಎಂಎಫ್ ಖರೀದಿ ಮಾಡುತ್ತದೆ. ಇವರುಗಳು ರೈತರಿಂದ 1900 ಅಥವಾ 2000 ರು.ಗೆ ಖರೀದಿ ಮಾಡಿ, ಕೆಎಂಎಫ್‌ಗೆ ನೀಡಿ ಕೋಟಿ ಕೋಟಿ ರು. ಸಂಪಾದಿಸುತ್ತಿದ್ದಾರೆ. ಇವರನ್ನು ಉದ್ದಾರ ಮಾಡುವುದು ಬಿಟ್ಟು 2400 ರು. ರೈತರಿಗೆ ನೀಡಿ, ಈ ವಿಷಯ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿ, ನಡೆದಿರಬಹುದಾದ ಗೋಲ್‌ಮಾಲ್ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ ಎಂದರು.

ಜಿಲ್ಲೆಯ ಹೇಮಾವತಿ ನಾಲೆಗಳಿಗೆ 15 ದಿನ ನೀರು ಬಿಟ್ಟು, ರೈತರ ಅರೆಕಾಲಿಕ ಬೆಳೆಗಳು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಬೇಕು ಎಂದರು. ಹಾಸನ ಡೈರಿಯಿಂದ 350 ಕೋಟಿ ರೂ.ಗಳನ್ನು ಹಾಲು ನೀಡುವ ರೈತರಿಗೆ ನೀಡಿದ್ದೇವೆ. ಅವರಿಗೆ ಬೆಳೆ ಕಟಾವು ಯಂತ್ರ ಖರೀದಿಸಲು ಹಾಗೂ ಕೊಟ್ಟಿಗೆ ಮ್ಯಾಟ್ ಸಬ್ಸಿಡಿ ದರದಲ್ಲಿ ಖರೀಧಿಸಲು ಸಹಕಾರ ನೀಡಿದ್ದೇವೆ ಎಂದರು. ಜಿಲ್ಲೆಯಲ್ಲಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಬೇಕಾದ ಲಸಿಕೆಯನ್ನು ಕೊಡಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಔಷಧಿ ಹಾಗೂ ವಾಹನಗಳನ್ನು ಒದಗಿಸಲಾಗಿದೆ ಎಂದರು.

ಶಿಕ್ಷಣದಿಂದ ಹೆಣ್ಣು ಮಕ್ಕಳ ಪ್ರಗತಿ: ಸಚಿವ ಮುನಿಯಪ್ಪ

ವಾಲ್ಮೀಕಿ ಮಹರ್ಷಿ ಅವರ ಜಯಂತಿ ಆಚರಣೆ ಕುರಿತಂತೆ ಶಾಸಕರು ಮಾತನಾಡಿ, ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜ್ಯ ಜಯಂತಿ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ನಾಯಕ ಜನಾಂಗದ ಸಮಾಜ ಸೇವಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಎಂದು ಸಲಹೆ ನೀಡಿದರು. ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಕೃಷಿ ಇಲಾಖೆ ಉಪ ನಿರ್ದೇಶಕಿ ಸಪ್ನ, ಮೀನುಗಾರಿಕೆ ಇಲಾಖೆಯ ಅಧಿಕಾರಿ ಸುಮಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೌಸರ್ ಆಹಮದ್, ಹೊಳೆನರಸೀಪುರ, ಆನ್ನೆಕನ್ನಂಬಾಡಿ, ಜಕ್ಕವಳ್ಳಿ ಹಾಗೂ ಇತರೆ ಗ್ರಾಮಗಳ ನಾಯಕ ಜನಾಂಗದ ಮುಖಂಡರು ಇದ್ದರು.