ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂಗ್ರೆಸ್‌ ಪಕ್ಷವನ್ನು ಸೀಮೆಎಣ್ಣೆ ಪಕ್ಷ ಮತ್ತು ಬಿಜೆಪಿಯನ್ನು ಬೆಂಕಿ ಪೊಟ್ಟಣ ಪಕ್ಷ ಎಂಬುದಾಗಿ ಜರಿದಿದ್ದರು. ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಕುರಿತು ಮನಬಂದಂತೆ ಹೇಳಿಕೆ ನೀಡಿದ್ದರು. ನಂತರ ಯಾರ ಜತೆಗೆ ಸೇರಿಕೊಂಡರು ಎಂದು ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಸೆ.02): ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂಗ್ರೆಸ್‌ ಪಕ್ಷವನ್ನು ಸೀಮೆಎಣ್ಣೆ ಪಕ್ಷ ಮತ್ತು ಬಿಜೆಪಿಯನ್ನು ಬೆಂಕಿ ಪೊಟ್ಟಣ ಪಕ್ಷ ಎಂಬುದಾಗಿ ಜರಿದಿದ್ದರು. ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಕುರಿತು ಮನಬಂದಂತೆ ಹೇಳಿಕೆ ನೀಡಿದ್ದರು. ನಂತರ ಯಾರ ಜತೆಗೆ ಸೇರಿಕೊಂಡರು ಎಂದು ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ‘ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಿ’ ಎಂಬ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು? ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಅವರ ಜತೆಗೆ ಸೇರಲಿಲ್ಲವೇ? 1983ರಲ್ಲಿ ಅವರನ್ನು ಗೆಲ್ಲಿಸಿದ್ದ ಸಮುದಾಯ ಯಾವುದು? ಗೆಲ್ಲಿಸಿದವರ ಹೆಸರನ್ನೂ ಹೇಳಲಿಲ್ಲ, ಕನಿಷ್ಠ ನೆನಪು ಸಹ ಮಾಡಿಕೊಳ್ಳಲಿಲ್ಲ. ಯಾರಿಗೂ ಅಗೌರವ ತೋರಬಾರದು. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಒಳ್ಳೆಯ ಬಟ್ಟೆ ಹಾಕಿದವರನ್ನು, ಅಧಿಕಾರ ಮಾಡಿದವರನ್ನು ಸಹಿಸುವುದಿಲ್ಲ. ಸುಮ್ಮನೆ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ: ಕಾಡಿನಿಂದ ನಾಡಿಗೆ ದಸರಾ ಗಜಪಯಣ...

ನಾನು ನಿಮ್ಮನ್ನು ಗೆಲ್ಲಿಸುವುದಕ್ಕೆ ಏನೇನು ಮಾಡಿದೆ. ಉಪಚುನಾವಣೆಯಲ್ಲಿ ಗೆಲ್ಲಿಸಲು ಏನೇನು ಮಾಡಿದ್ದೆ ಎಂಬುದು ಗೊತ್ತಿಲ್ಲವೇ? ನೀವು ಬೇರೆಯವರಿಗೆ ಅಧಿಕಾರ ಮಾಡಲು ಬಿಡುವುದಿಲ್ಲ. ಜಿಲ್ಲಾ ಪಂಚಾಯಿತಿ ಅಧಿಕಾರ ಐದು ವರ್ಷ ಇದ್ದಿದ್ದನ್ನು 20 ತಿಂಗಳಿಗೆ ಇಳಿಸಿದಿರಿ. ನೀವು ನನಗೆ ಅನ್ಯಾಯ ಮಾಡಿದಿರಿ. ನಾನೂ ನಾಯಕನೇ. ಸುಮ್ಮನೆ ಏಕವಚನದಲ್ಲಿ ಮಾತನಾಡಬೇಡಿ. ಜವಾನನೇ ಆಗಿರಲಿ, ಅವರಿಗೆ ಗೌರವ ಕೊಡಬೇಕು. ಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಕೆಂಡಾಮಂಡಲರಾದರು.

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ನಾನು ಯಾರ ಸಹವಾಸದಲ್ಲಿದ್ದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಾನು ಐದು ಬಾರಿ ಗೆದ್ದಿದ್ದೇನೆ. ರಾಜಶೇಖರ ಮೂರ್ತಿ ವಿರುದ್ಧ ಸೋತಿರುವುದು ನೀವು. ನನ್ನ ವಿರುದ್ಧ ಸಹ ಸೋಲನುಭವಿಸಿದ್ದೀರಿ. 2013ರಲ್ಲಿ ನನ್ನನ್ನು ಸೋಲಿಸಲು ಬಂದಿದ್ದೀರಿ. ಆದರೆ, ಸೋಲಿಸಲು ಆಯಿತಾ? ನೀವು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದೀರಿ ಎಂದು ದೇವೇಗೌಡ ಕಿಡಿಕಾರಿದರು.