Asianet Suvarna News Asianet Suvarna News

ಸ್ಟಾಲಿನ್-ಡಿಕೆಶಿ ಒಳಒಪ್ಪಂದದಿಂದ ತಮಿಳುನಾಡಿಗೆ ನೀರು: ಅಶ್ವಥ್ ನಾರಾಯಣ್ ಆರೋಪ

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಬಿಜೆಪಿ ಹೋರಾಟ ಮಾಡುತ್ತಿದ್ದು, ಇದೇ ಸೋಮವಾರ ಮೈ-ಬೆಂ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಪ್ರತಿಭಟನೆ ಮಾಡಿಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ. 

Mla Dr CN Ashwath Narayan Slams On Congress Govt gvd
Author
First Published Aug 19, 2023, 6:04 PM IST

ಮಂಡ್ಯ (ಆ.19): ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಬಿಜೆಪಿ ಹೋರಾಟ ಮಾಡುತ್ತಿದ್ದು, ಇದೇ ಸೋಮವಾರ ಮೈ-ಬೆಂ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಪ್ರತಿಭಟನೆ ಮಾಡಿಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ. ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಅದರ ನಡುವೆ ತಮಿಳುನಾಡು ಕುರುವೈ ಬೆಳೆಗೆ ನೀರನ್ನ ಕೇಳ್ತಿದ್ದಾರೆ. ನಿಯಮದ ಪ್ರಕಾರ 1.8 ಲಕ್ಷ ಹೆಕ್ಟರ್ ಗೆ ಮಾತ್ರ ನೀರು‌ ಕೊಡಬೇಕಿದೆ. ಆದ್ರೆ ತಮಿಳುನಾಡಿನಲ್ಲಿ 3 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕುರವೈ ಬೆಳೆ ಬೆಳೆಯುತ್ತಿದ್ದಾರೆ. ಇದರ ನಡುವೆಯು ಸುಪ್ರೀಂಕೋರ್ಟ್‌ಗೆ ಅಪೀಲು ಹಾಕಲಾಗಿದೆ ಎಂದರು.

ಕಾವೇರಿ ನಿರ್ವಹಣಾ ಮಂಡಳಿ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಕೇವಲ ತಿಂಡಿ, ಕಾಫಿ ಕುಡಿದು ಬರುತ್ತಿದ್ದಾರೆ. ಸ್ಟಾಲಿನ್ ಹಾಗೂ ಡಿಕೆಶಿ ಒಳ ಒಪ್ಪಂದಿದ ಡ್ಯಾಂನಿಂದ ನೀರು ಬಿಡಲಾಗ್ತಿದೆ. ಮೆಟ್ಟೂರು ಡ್ಯಾಂನಲ್ಲಿ 65 ಟಿಎಂಸಿ ನೀರು ಸ್ಟಾಪ್ ಇದೆ. ಆದ್ರು KRS ಡ್ಯಾಂನಿಂದ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗ್ತಿದೆ. ಯಾವ ಆಧಾರದ ಮೇಲೆ ನೀರು ಬಿಡ್ತಿದ್ದಾರೆ. ಡಿಕೆಶಿ ಸ್ಟಾಲಿನ್‌ರನ್ನ ಓಲೈಕೆ ಮಾಡಿಕೊಳ್ಳಲು ನೀರು ಬಿಡಿಸಿದ್ದಾರೆ ಎಂದು ಡಿಸಿಎಂ ಡಿಕೆಶಿ ವಿರುದ್ದ ಗಂಭೀರ ಆರೋಪ ಮಾಡಿದರು.

ಮಠಗಳು ಮನುಷ್ಯರ ಪಾಪ ತೊಳೆವ ಮಾರ್ಗದರ್ಶನ ಕೇಂದ್ರ: ಕೋಡಿಮಠ ಸ್ವಾಮೀಜಿ

ಡಿಕೆಶಿ, ಚಲುವರಾಯಸ್ವಾಮಿ ರಾಜ್ಯದ ರೈತರ ಹಿತಕಾಯುತ್ತಿಲ್ಲ. ಇಬ್ಬರು ರಾಜಕೀಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ‌. ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸ್ತೇವೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಮೈಸೂರು ಗ್ರಾಮಾಂತರ ಜಿಲ್ಲೆ ಜನರು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ನಿಲ್ಲಿಸುವಂತೆ ಖಂಡಿಸಿ ಹೋರಾಟ ಮಾಡುತ್ತೇವೆ. ಸೋಮವಾರ ಬೆಳಿಗ್ಗೆ ಇಂಡುವಾಳು ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುತ್ತೇವೆ ಎಂದರು.

ರಾಜ್ಯ​ದಲ್ಲಿ ವಿಚಿತ್ರವಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಸರ್ಕಾರ: ಶಾಸಕ ಬಿ.ವೈ.ವಿಜಯೇಂದ್ರ

ನಮ್ಮ ಹೋರಾಟಕ್ಕೆ ರೈತರ ಸಂಘಟನೆ, ಕನ್ನಡಪರ ಸಂಘಟನೆ, ಆಟೋ ಚಾಲಕರು, ಮಾಲೀಕರಿಗು ಬೆಂಬಲಿಸುವಂತೆ‌ ಮನವಿ ಮಾಡ್ತೇವೆ. ಮಂಡ್ಯ ಸಂಸದರ ನೇತೃತ್ವದಲ್ಲಿ ನಮ್ಮ ಹೋರಾಟ ನಡೆಯುತ್ತೆ. ಹೋರಾಟಕ್ಕೆ ಮಾಜಿ ಸಿಎಂ ಯಡಿಯೂರಪ್ಪರನ್ನ ಪ್ರತಿಭಟನೆಗೆ ಕರೆತರಲು ಪ್ರಯತ್ನಿಸುತ್ತೇವೆ. ಚಲುವರಾಯಸ್ವಾಮಿ-ಡಿಕೆಶಿ ಕೇಂದ್ರದ ಬಳಿ ಕಾವೇರಿ ಕೊಳ್ಳದ ಕೀ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios