ಮದ್ದೂರು ಕ್ಷೇತ್ರದ ಅಭಿವೃದ್ಧಿಯೇ ನನ್ನ ಅಜೆಂಡಾ: ಶಾಸಕ ತಮ್ಮಣ್ಣ

ಕ್ಷೇತ್ರದ ಜನರು ಅಪಪ್ರಚಾರಕ್ಕೆ ಕಿವಿಗೊಡಬಾರದು. ಮದ್ದೂರು ಕ್ಷೇತ್ರದ ಅಭಿವೃದ್ಧಿಯೇ ನನ್ನ ಅಜೆಂಡಾವಾಗಿದೆ. ಅದರಂತೆ ಕೆಲಸ ಮಾಡುತ್ತಿರುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. 

MLA DC Thammanna Talks Over Maddur Constituency Development gvd

ಭಾರತೀನಗರ (ಅ.28): ಕ್ಷೇತ್ರದ ಜನರು ಅಪಪ್ರಚಾರಕ್ಕೆ ಕಿವಿಗೊಡಬಾರದು. ಮದ್ದೂರು ಕ್ಷೇತ್ರದ ಅಭಿವೃದ್ಧಿಯೇ ನನ್ನ ಅಜೆಂಡಾವಾಗಿದೆ. ಅದರಂತೆ ಕೆಲಸ ಮಾಡುತ್ತಿರುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. ಕಾಡುಕೊತ್ತನಹಳ್ಳಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇಷ್ಟು ದಿನ ಶಾಶ್ವತವಾದ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕೆಲವು ಸಣ್ಣ-ಪುಟ್ಟಸಮಸ್ಯೆಗಳು ಗ್ರಾಮಗಳಲ್ಲಿ ಇರಬಹುದು. ಅವುಗಳ ಕೆಲಸ ಮಾಡಲು ಮುಂದಿನ ದಿನಗಳಲ್ಲಿ ಅವಕಾಶ ನೀಡಬೇಕೆಂದು ಕೋರಿದರು.

ಕ್ಷೇತ್ರದ ಪ್ರತೀಯೊಂದು ಗ್ರಾಮಗಳಿಗೂ ನಾನು ಹಲವಾರು ಬಾರಿ ಬಂದಿದ್ದೇನೆ. ಗ್ರಾಮಗಳಿಗೆ ಬರಬೇಕಾದರೆ ತಮಟೆ ನಗಾರಿ ಹೊಡೆಸಿಕೊಂಡು ಬರುವವನು ನಾನಲ್ಲ. ಗ್ರಾಮಕ್ಕೆ ಬರುವುದನ್ನು ಕಾರ್ಯಕರ್ತರಿಗೆ ತಿಳಿಸಿ ತಮಟೆ ನಗಾರಿಗಳನ್ನು ಹೊಡೆಸಿಕೊಂಡು ಮೆರವಣಿಗೆ ಮಾಡಿಸಿಕೊಂಡಿಲ್ಲ. ಅದು ನನಗೆ ಅವಶ್ಯಕತೆಯೂ ಇಲ್ಲ ಎಂದರು.

ಮಾರಾಟವಾಗಬಾರದು: ಹಣದ ಆಸೆಗೆ ನಮ್ಮನ್ನು ನಾವು ಮಾರಿಕೊಳ್ಳಬಾರದು. ಹಣವುಳ್ಳವರು ಆಸೆ -ಆಮಿಷಗಳನ್ನು ನೀಡಿ ಮತದಾರರನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಚಿಂತನೆ ನಡೆಸುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನಾವು ಮಾರಾಟವಾಗಬಾರದು. ಕ್ಷೇತ್ರಕ್ಕೆ ನಾನು ಬಂದ ಮೇಲೆ ಗ್ರಾಮಗಳು ಹೇಗೆ ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಪ್ರತಿಯೊಬ್ಬರು ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.

ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ: ಶಾಸಕ ಡಿ.ಸಿ.ತಮ್ಮಣ್ಣ

ಅಪಪ್ರಚಾರಕ್ಕೆ ಕಿವಿಕೊಡಬೇಡಿ: ಗ್ರಾಮಗಳಲ್ಲಿ ಕೆಲವು ಸಮಸ್ಯೆಗಳು ಬಂದಾಗ ನನ್ನ ಮೇಲೆ ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ಈ ಬಗ್ಗೆ ತಪ್ಪು ತಿಳಿವಳಿಕೆ ಬೇಡ. ಸತ್ಯಾಸತ್ಯತೆಗಳ ಬಗ್ಗೆ ಪರಿಶೀಲಿಸಬೇಕು. ಗ್ರಾಮಗಳ ಅಭಿವೃದ್ಧಿಗೆ ನನ್ನ ಸಹಕಾರ ಯಾವಾಗಲು ಇದ್ದೇ ಇರುತ್ತದೆ ಎಂದರು. ಗ್ರಾಮದ ಅಭಿವೃದ್ದಿಗೆ ಒಗ್ಗಟ್ಟು ಇರಬೇಕು. ಸಣ್ಣ-ಪುಟ್ಟಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಯಿಂದ ಮಾಡಿಸಿಕೊಳ್ಳಬೇಕು. ಎಲ್ಲನ್ನು ಶಾಸಕರೇ ಮಾಡಲು ಸಾಧ್ಯವಿಲ್ಲ. ಅಪಪ್ರಚಾರಗಳಿಗೆ ಕಿವಿಕೊಡಬಾರದು ಎಂದು ಕೋರಿದರು.

ಬಿಜೆಪಿಯಂತ ಕೆಟ್ಟಸರ್ಕಾರ ನೋಡಿಲ್ಲ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ 45 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡಿದ್ದರು. ಆದರೆ, ನನ್ನ 23 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿಯಂತ ಕೆಟ್ಟಸರ್ಕಾರವನ್ನು ನೋಡಿಲ್ಲ. ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೊಳಿಸುವಲ್ಲಿ ತಾರತಮ್ಯವೆಸಗುತ್ತಿದೆ ಎಂದು ದೂರಿದರು. ರೈತರ, ಕೂಲಿ ಕಾರ್ಮಿಕರ, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಜಿಲ್ಲೆಯು ಜೆಡಿಎಸ್‌ ಪಕ್ಷದ ಭದ್ರಕೋಟೆಯಾಗಿದೆ. ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ 8 ಸಾವಿರ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ ವೇಳೆ ಎರಡು ವಿರೋಧ ಪಕ್ಷಗಳು ಮಂಡ್ಯ ಜಿಲ್ಲಾ ಬಜೆಚ್‌ ಎಂದು ಅಂಗಿಸಿದ್ದನ್ನು ನಾವು ಎಂದೂ ಮರೆಯಬಾರದು ಎಂದರು.

ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ ಮಾತನಾಡಿ, ಡಿ.ಸಿ.ತಮ್ಮಣ್ಣ ಅವರು ನಮ್ಮ ಕ್ಷೇತ್ರಕ್ಕೆ ಸಿಕ್ಕಿರುವುದು ಅದೃಷ್ಟ. ರಾಜಕೀಯಕ್ಕೆ ಪ್ರವೇಶ ಮಾಡಿದಾಗ ಕಿರುಗಾವಲು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ರಾಜ್ಯದ ಎಲ್ಲಾ ಶಾಸಕರು ಕಿರುಗಾವಲು ಕ್ಷೇತ್ರವನ್ನು ತಿರುಗಿ ನೋಡುವಂತೆ ಮಾಡಿದ್ದರು. ನಂತರ ದಿನಗಳಲ್ಲಿ ಮದ್ದೂರಿನ ಜನತೆ ಇವರ ಕೆಲಸ ನೋಡಿ ಕ್ಷೇತ್ರಕ್ಕೆ ಆಯ್ಕೆ ಮಾಡಿಕೊಂಡರು. ಇಂತಹ ರಾಜಕಾರಣಿಯನ್ನು ಬೀದರ್‌, ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಕರೆಯುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮಗಳಿಗೆ ಭೇಟಿ: ಮದ್ದೂರು ತಾಲೂಕಿನ ಭುಜುವಳ್ಳಿ, ಕಪರೇಕೊಪ್ಪಲು, ಗೋಪನಹಳ್ಳಿ, ಯಡಗನಹಳ್ಳಿ, ಸಬ್ಬನಹಳ್ಳಿ, ಲಕ್ಷ್ಮೇಗೌಡನದೊಡ್ಡಿ, ಕಡಿಲುವಾಗಿಲು, ಸಿಂಗಟಕೆರೆ, ಮಾದರಹಳ್ಳಿ, ಅರಳಹಳ್ಳಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಹಾಲಿಸಿ ಜನರಿಂದ ಮನವಿ ಸ್ವೀಕರಿಸಿದರು.

ಜನ ಸೇವೆಗೆ ನನ್ನ ಆಸ್ತಿಪಾಸ್ತಿ ಕಳೆದುಕೊಂಡೆ: ಶಾಸಕ ಡಿ.ಸಿ.ತಮ್ಮಣ್ಣ

ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಜಿಲ್ಲಾ ಗೌರವಾಧ್ಯಕ್ಷ ಎಚ್‌.ಎಂ.ಮರಿಮಾದೇಗೌಡ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಹೊನ್ನೇಗೌಡ, ಭುಜುವಳ್ಳಿ ಆರ್‌ಐ ಪುಟ್ಟಸ್ವಾಮಿ, ಅಪ್ಪಾಜೀಗೌಡ, ಕಪರೇಕೊಪ್ಪಲು ಪುಟ್ಟಸ್ವಾಮಿ, ಜುಂಜಯ್ಯ, ಗಾಳಿಹೊನ್ನಯ್ಯ, ಕಾಡುಕೊತ್ತನಹಳ್ಳಿ ತಾಪಂ ಮಾಜಿ ಸದಸ್ಯ ಕೆಂಪರಾಜು, ದಯಾನಂದ್‌, ಸ್ವಾಮಿಯಣ್ಣ, ಯಡಗನಹಳ್ಳಿ ಕೆಂಚೇಗೌಡ, ವೈ.ಎಂ.ಹನುಮೇಗೌಡ, ಕೆಂಪರಾಜು, ಸಬ್ಬನಹಳ್ಳಿ ಹೊನ್ನೇಗೌಡ, ಕೃಷ್ಣ, ಲಾಯರ್‌ ಶಿವಲಿಂಗ, ಕುಳ್ಳೇಗೌಡ, ಪುಟ್ಟಲಿಂಗಾಚಾರಿ ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios