ತಳಮಟ್ಟದಿಂದ ಬಲಿಷ್ಠಗೊಳ್ಳಬೇಕಿದೆ ಜೆಡಿಎಸ್‌: ಬಂಡೆಪ್ಪ ಖಾಶೆಂಪೂರ್‌

ಪಕ್ಷದ ರಾಷ್ಟ್ರಾಧ್ಯಕ್ಷರ, ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ಮಾರ್ಗದರ್ಶನದೊಂದಿಗೆ ಕೆಲಸ ಮಾಡಬೇಕು. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಾಗಿದೆ: ಖಾಶೆಂಪೂರ

MLA Bandeppa Kashempur Talks Over JDS Party in Karnataka grg

ಬೀದರ್‌(ನ.23): ಜೆಡಿಎಸ್‌ ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಬಲಿಷ್ಠಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್‌ ಹೇಳಿದರು. ಅವರು ನೂತನವಾಗಿ ನೇಮಕಗೊಂಡ ಮೂರು ತಾಲೂಕುಗಳ ಜೆಡಿಎಸ್‌ ತಾಲೂಕು ಅಧ್ಯಕ್ಷರಿಗೆ ಖಾಶೆಂಪೂರ ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ ಅವರೊಂದಿಗೆ ಆದೇಶ ಪತ್ರ ನೀಡಿ ಸನ್ಮಾನಿಸಿ ಮಾತನಾಡಿ, ನೂತನವಾಗಿ ನೇಮಕಗೊಂಡ ಅಧ್ಯಕ್ಷರು ಪಕ್ಷ ಸಂಘಟನೆ, ಬಲವರ್ಧನೆಗೆ ಒತ್ತು ನೀಡಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕು. ಪ್ರತಿಯೊಬ್ಬರಿಗೂ ಜೆಡಿಎಸ್‌ ಪಕ್ಷದ ದೇಯೋದ್ದೇಶಗಳನ್ನು ತಿಳಿಸಿ ಹೇಳುವ ಕೆಲಸ ಮಾಡಬೇಕು.

ಪಕ್ಷದ ರಾಷ್ಟ್ರಾಧ್ಯಕ್ಷರ, ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ಮಾರ್ಗದರ್ಶನದೊಂದಿಗೆ ಕೆಲಸ ಮಾಡಬೇಕು. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಎಲ್ಲರೂ ಸೇರಿ ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಾಗಿದೆ ಎಂದು ಖಾಶೆಂಪೂರ ಅವರು ನೂತನ ಅಧ್ಯಕ್ಷರಿಗೆ ತಿಳಿಸಿದರು.

ಬೀದರ್‌: ಡಿಸಿ ಗ್ರಾಮ ವಾಸ್ತವ್ಯ ಯೋಜನೆ ಸದುಪಯೋಗವಾಗಲಿ, ಈಶ್ವರ ಖಂಡ್ರೆ

ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ್‌ ಮಾತನಾಡಿ, ಪಕ್ಷದ ನಾಯಕರೆಲ್ಲರೂ ಚರ್ಚಿಸಿ ನೂತನ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ. ಪಕ್ಷ ಸಂಘಟನೆಯೇ ನೂತನ ಪದಾಧಿ​ಕಾರಿಗಳ ಪ್ರಮುಖ ಆದ್ಯತೆಯಾಗಿರುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಬೀದರ್‌ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟುಬಲಿಷ್ಠಗೊಳಿಸಬೇಕಾಗಿದೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ನಮ್ಮ ಪಕ್ಷ ಅ​ಧಿಕಾರದಲ್ಲಿದ್ದಾಗ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾಹಿತಿ ನೀಡೋಣ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಅ​ಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದರು.

ಇದೇ ಸಂದರ್ಭದಲ್ಲಿ ಔರಾದ್‌ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ತಾನಾಜಿ ತೋರಣೆಕರ್‌, ಭಾಲ್ಕಿ ತಾಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ ನೆಳಗೆ ಹಾಗೂ ಬಸವಕಲ್ಯಾಣ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ಹರ್ಷದ್‌ ಅಲಿ ಮಾಗಾವೆ ಅವರಿಗೆ ಆದೇಶ ಪತ್ರ ನೀಡಿ ಅಭಿನಂದಿಸಲಾಯಿತು.

ಮನೆ ಕಸಿದ ಬಿಜೆಪಿಗರು: ಮತ ಕೇಳಲು ಬಂದ್ರೆ ಬಿಡದೇ ಪ್ರಶ್ನಿಸಿ: ಈಶ್ವರ ಖಂಡ್ರೆ

ಪಕ್ಷದ ಪ್ರಮುಖರಾದ ಅಸದೋದ್ದೀನ್‌, ಶಿವಪುತ್ರ ಮಾಳಗೆ, ಬಸವಣ್ಣಪ್ಪ ನೆಲಗೆ, ಶ್ರೀನಿವಾಸರೆಡ್ಡಿ ನಾರಾಯಣಪುರ್‌, ಸಂಜುಕುಮಾರ್‌ ಸಂಗನೂರೆ, ಇಸ್ಮಾಯಿಲ್‌ ಕಮಠಾಣೆ, ಧನರಾಜ್‌ ರಾಜೋಳೆ, ಗೌತಮ್‌ ಕಾಂಬಳೆ, ವಿನೋದ ದಾದೆ, ಸಲಿಂ, ರಾಜಕುಮಾರ ಬಟಾರೆ, ದೇವದತ್ತ ಒಡೆಯರ್‌, ಬೊಮ್ಮಗೊಂಡ ಚಿಟ್ಟಾವಾಡಿ, ಅನಿಲ್‌ ಕುಮಾರ್‌, ಶರಣಪ್ಪ ಖಾಶೆಂಪುರ್‌, ರವಿಂದ್ರ ಗುಮಾಸ್ತಿ, ರಾಜು ಮಂದಾ, ಶಂಕರ್‌ ಪಂಡಿತ್‌ ಜಿ, ರಾಜು ರಾಯಗೊಂಡ ಸೇರಿದಂತೆ ಅನೇಕರಿದ್ದರು.

ಮೂರು ತಾಲೂಕುಗಳಿಗೆ ನೂತನವಾಗಿ ನೇಮಕಗೊಂಡ ತಾಲೂಕು ಅಧ್ಯಕ್ಷರಿಗೆ ಖಾಶೆಂಪೂರ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಶಾಸಕ ಬಂಡೆಪ್ಪ ಖಾಶೆಂಪೂರ ಅವರು ಜೆಡಿಎಸ್‌ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ ಅವರೊಂದಿಗೆ ಆದೇಶ ಪತ್ರ ನೀಡಿದರು.
 

Latest Videos
Follow Us:
Download App:
  • android
  • ios