ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಗಂಜಾಂ ಗುಂಬಜ್‌ಗೆ ಭೇಟಿ ನೀಡಿದ ಸಚಿವ ಬಿ.ಜೆಡ್‌. ಜಮೀರ್‌ ಅಹ್ಮದ್‌ ಖಾನ್‌, ಟಿಪ್ಪು ಸುಲ್ತಾನ್‌ ಸಮಾಧಿಗೆ ವಿಶೇಷ ಹೂವುಗಳ ಚಾದರ ಹೊದಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಟಿಪ್ಪು ವಿಶ್ವ ವಿದ್ಯಾಲಯ ತೆರೆಯುವ ಉದ್ದೇಶವಿದ್ದು, ರಾಜ್ಯ ಸರ್ಕಾರದೊಂದಿಗೆ ಶೀಘ್ರವಾಗಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಶ್ರೀರಂಗಪಟ್ಟಣ: ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ನಿಲ್ಲಿಸಿದ್ದರೂ ಇಂದು ದೇಶದ ಗಲ್ಲಿಗಲ್ಲಿಯೂ ನಮ್ಮ ಜನರೇ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಹೇಳಿದರು.

ಟಿಪ್ಪು ಜಯಂತಿ ಹಿನ್ನೆಲೆ ಪಟ್ಟಣ ಸಮೀಪದ ಗಂಜಾಂನ ಗುಂಬಸ್‌ಗೆ ಬುಧವಾರ ಕ್ಷೇತ್ರದ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ಜೊತೆಗೆ ಬೆಂಬಲಿಗರೊಂದಿಗೆ ಭೇಟಿ ನೀಡಿ, ಹಜರತ್ ಟಿಪ್ಪುಸುಲ್ತಾನ್ ಅವರ ಸಮಾಧಿಗೆ ವಿಶೇಷ ಹೂವುಗಳ ಚಾದರ ಹೊದಿಸಿ ಪುಷ್ಪಾರ್ಚನೆ ಮತ್ತು ಶ್ರೀಗಂಧಾರ್ಪಣೆಯೊಂದಿಗೆ ಮುಸ್ಲಿಂ ಧಾರ್ಮಿಕ ಗುರುಗಳೊಂದಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾತನಾಡಿದರು.

ಟಿಪ್ಪು ಜಯಂತಿಯನ್ನು 2013ರಿಂದ 2018ರವರೆಗೂ ಸರ್ಕಾರದ ವತಿಯಿಂದ ಬೆಂಗಳೂರಿನ ಬ್ಲಾಂಕೆಟ್ ಹಾಲ್‌ನಲ್ಲಿ ಆಚರಿಸಲಾಗ್ತಿತ್ತು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜಯಂತಿ ನಿಲ್ಲಿಸಿದೆ. ಟಿಪ್ಪು ಜಯಂತಿ ಆಚರಣೆ ನಮ್ಮ ಹಕ್ಕು ಇದನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಟಿಪ್ಪು ವಿವಿ ಆರಂಭಿಸುವ ಚಿಂತನೆ ಇದ್ದು, ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಗುಂಬಸ್‌ಗೆ ಆಗಮಿಸಿದ ಸಚಿವ ಜಮೀರ್ ಅಹಮದ್ ಅವರಿಗೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಟೋಪಿ ತೊಡಿಸಿ ಹೂವಿನ ಹಾರಗಳೊಂದಿಗೆ ಪಟಾಕಿ ಸಿಡಿಸಿ ಅದ್ದೂರಿ ಜಯಘೋಷ ಮೊಳಗಿಸಿ ಸ್ವಾಗತ ಕೋರಿ ಸಿಹಿ ಹಂಚಿದರು.

ಈ ವೇಳೆ ಅಲ್ಪಸಂಖ್ಯಾತ ಸಮಿತಿ ರಾಜ್ಯಾಧ್ಯಕ್ಷ ಬಿ.ಕೆ.ಅಲ್ತಾಫ್, ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟ ಜಿಲ್ಲಾಧ್ಯಕ್ಷ ಎಂ.ನಂದೀಶ್, ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್, ಟಿಎಪಿಸಿಎಂಎಸ್ ನಿರ್ದೇಶಕ ಎಲ್.ನಾಗರಾಜು, ಮುಖ್ಯಾಧಿಕಾರಿ ಎಂ.ರಾಜಣ್ಣ, ಮುಖಂಡರಾದ ಸನಾಉಲ್ಲಾ ಷರೀಫ್, ಇಮ್ರಾನ್, ಮುಜೀಬ್ ಶಾಲಿಮಾರ್, ಸೈಯದ್ ಝಲ್ಫೀಕರ್, ಸೈಯದ್ ಇಫ್ತಿಕರ್, ಅಕ್ರಮ್, ಕಾಬೂಲ್ ಇತರರು ಈ ವೇಳೆ ಉಪಸ್ಥಿತರಿದ್ದರು.

ಟಿಪ್ಪು ವಿವಿ ಸ್ಥಾಪನೆ ಬಗ್ಗೆ ಶೀಘ್ರ ಚರ್ಚೆ: ಜಮೀರ್‌

ರಾಜ್ಯದಲ್ಲಿ ಟಿಪ್ಪು ವಿಶ್ವ ವಿದ್ಯಾಲಯ ತೆರೆಯುವ ಉದ್ದೇಶವಿದ್ದು, ರಾಜ್ಯ ಸರ್ಕಾರದೊಂದಿಗೆ ಶೀಘ್ರವಾಗಿ ಚರ್ಚಿಸಲಾಗುವುದು ಎಂದು ಸಚಿವ ಬಿ.ಜೆಡ್‌. ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಬುಧವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಗಂಜಾಂ ಗುಂಬಜ್‌ಗೆ ಭೇಟಿ ನೀಡಿ ಟಿಪ್ಪು ಸುಲ್ತಾನ್‌ ಸಮಾಧಿಗೆ ವಿಶೇಷ ಹೂವುಗಳ ಚಾದರ ಹೊದಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು. ಟಿಪ್ಪು ಜಯಂತಿಯನ್ನು 2013ರಿಂದ 2018ರವರೆಗೂ ಸರ್ಕಾರದ ವತಿಯಿಂದ ಬೆಂಗಳೂರಿನ ಬ್ಲಾಂಕೆಟ್ ಹಾಲ್‌ನಲ್ಲಿ ಆಚರಿಸಲಾಗುತ್ತಿತ್ತು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜಯಂತಿ ನಿಲ್ಲಿಸಿದೆ. ಟಿಪ್ಪು ಜಯಂತಿ ಆಚರಣೆ ನಮ್ಮ ಹಕ್ಕು ಇದನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಹೇಳಿದರು.

ಸಚಿವ ಯು.ಟಿ.ಖಾದರ್ , ಶಾಸಕ ತನ್ವೀರ್ ಸೇಠ್ ಭೇಟಿ

ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಗುಂಬಸ್‌ಗೆ ಟಿಪ್ಪು ಜಯಂತಿ ಪ್ರಯುಕ್ತ ಆರೋಗ್ಯ ಹಾಗೂ ರಾಜ್ಯ ಅಲ್ಪಸಂಖ್ಯಾತ ಖಾತೆ ಸಚಿವ ಯು.ಟಿ.ಖಾದರ್ ಹಾಗೂ ಮೈಸೂರಿನ ಶಾಸಕ ತನ್ವೀರ್ ಸೇಠ್ ಬೆಂಬಲಿಗರೊಂದಿಗೆ ಭೇಟಿ ನೀಡಿ ಹಜರತ್ ಟಿಪ್ಪು ಸುಲ್ತಾನ್ ಅವರ ಸಮಾಧಿಗೆ ಹೂವಿನ ಚಾದರ ಹೊದಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Scroll to load tweet…