Asianet Suvarna News Asianet Suvarna News

ಇಂಡಿಯಾ ಹೆಸರು ಬದಲಾವಣೆ ಚುನಾವಣಾ ಗಿಮಿಕ್‌: ಸಚಿವ ಜಮೀರ್‌ ಅಹ್ಮದ್‌

ಇಡೀ ಪ್ರಪಂಚದಲ್ಲೇ ಇಂಡಿಯಾ ಎಂದೇ ನಮ್ಮ ದೇಶ ಪ್ರಸಿದ್ಧಿ ಪಡೆದಿದೆ. ಹಾಗಿರುವಾಗ ಈಗ ಕೇಂದ್ರ ಸರ್ಕಾರ ಈ ಹೆಸರು ಬದಲಾವಣೆ ಮಾಡುತ್ತಿರುವುದು ಸರಿಯಲ್ಲ. ಇದೆಲ್ಲ ಬಿಜೆಪಿಯವರ ಚುನಾವಣಾ ಗಿಮಿಕ್ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. 

Minister Zameer Ahmed Khan Reaction On Republic of Bharat gvd
Author
First Published Sep 6, 2023, 12:26 PM IST

ಮಂಗಳೂರು (ಸೆ.06): ಇಡೀ ಪ್ರಪಂಚದಲ್ಲೇ ಇಂಡಿಯಾ ಎಂದೇ ನಮ್ಮ ದೇಶ ಪ್ರಸಿದ್ಧಿ ಪಡೆದಿದೆ. ಹಾಗಿರುವಾಗ ಈಗ ಕೇಂದ್ರ ಸರ್ಕಾರ ಈ ಹೆಸರು ಬದಲಾವಣೆ ಮಾಡುತ್ತಿರುವುದು ಸರಿಯಲ್ಲ. ಇದೆಲ್ಲ ಬಿಜೆಪಿಯವರ ಚುನಾವಣಾ ಗಿಮಿಕ್ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಮಂಗಳೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್‌ ಅಹ್ಮದ್ ಖಾನ್, ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಅವರಿಗೆ ಈ ರೀತಿಯ ಹೆಸರು ಬದಲಾವಣೆ ಯೋಚನೆ ಬರುತ್ತಿದೆ. 

ಚುನವಣಾ ಸಂದರ್ಭದಲ್ಲೇ ರಾಮಮಂದಿರ ನೆನಪಾಗುತ್ತದೆ, ರಾಮಮಂದಿರ ನಿರ್ಮಿಸಿ ಎಷ್ಟೋ ಸಮಯ ಕಳೆದಿದೆ. ಈಗ ಚುನಾವಣೆ ಸಂದರ್ಭ ಉದ್ಘಾಟನೆ ಮಾಡುತ್ತಾರಂತೆ. ನರೇಂದ್ರ ಮೋದಿ ಅವರು ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಆಗ ಅವರಿಗೆ ಇದೆಲ್ಲಾ ಮಾಡಬಹುದಿತ್ತು, ಆದರೆ ಈಗ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ವಕ್ಫ್‌ ಬೋರ್ಡ್ ಭೂಮಿ ಅಕ್ರಮ ಬಗ್ಗೆ ನಾವೂ ಸರ್ವೆ ಮಾಡುತ್ತಿದ್ದೇವೆ. ಎಲ್ಲೆಲ್ಲಿ ಅಕ್ರಮ ಆಗುತ್ತಿದೆ ಎನ್ನುವುದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.

ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ: ಇಂಡಿಯಾ ಹೆಸರು ಬದಲಾವಣೆಗೆ ಜಗ್ಗೇಶ್​ ಹೇಳಿದಿಷ್ಟು..

ಕುರುಬರ ಸಮ್ಮೇಳನ ಯಶಸ್ವಿಗೆ ಎಚ್.ವಿಶ್ವನಾಥ ಕರೆ: ಶೆಪರ್ಢ ಇಂಡಿಯಾ ಇಂಟರ್ ನ್ಯಾಷನಲ್ ವತಿಯಿಂದ ಅ. 2 ಮತ್ತು 3 ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಹಾಗೂ ರಾಷ್ಟ್ರೀಯ ಸಮಾವೇಶಕ್ಕೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿ ಎಂದು ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಎಚ್.ವಿಶ್ವನಾಥ ಕರೆ ನೀಡಿದರು. ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಕರೆಯಲಾಗಿದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯದಲ್ಲಿ ಕುರುಬ ಸಮುದಾಯದವರು ವಾಸವಾಗಿದ್ದು, ಕರ್ನಾಟಕದಲ್ಲಿ ಕುರುಬ, ಮಹಾರಾಷ್ಟ್ರದಲ್ಲಿ ಧನಗರ ಹೀಗೇ ಬೇರೆ ಬೇರೆ ರಾಜ್ಯಗಳಲ್ಲಿ ಅವರದ್ದೇ ಆದ ಭಾಷೆಗಳಲ್ಲಿ ಕರೆಯಲ್ಪಡುತ್ತಾರೆ. 

ಈ ರೀತಿಯಲ್ಲಿ ಕರೆಯಲ್ಪಡುವ ಎಲ್ಲ ಕುರುಬ ಸಮುದಾಯದವರನ್ನು ಒಂದು ಸಾಮಾನ್ಯ ಹೆಸರಿನಲ್ಲಿ ಕರೆಯುವಂತಾಗಬೇಕು ಹಾಗೂ ಒಂದೆ ನೆಲೆಯಲ್ಲಿ ತರಬೇಕು ಎಂಬ ಉದ್ದೇಶದಿಂದ 2014 ರಲ್ಲಿ "ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಎಂದು ನಾಮಕರಣ ಮಾಡುವುದರ ಮೂಲಕ ಅದರ ಅಡಿಯಲ್ಲಿ ಈಗಾಗಲೇ ಸಂಸ್ಥೆಯು ಪ್ರಾರಂಭವಾದ ವರ್ಷದಿಂದ ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ 8 ಸಮ್ಮೇಳನ ಮಾಡಲಾಗಿದೆ. ಮಧ್ಯ ಕರ್ನಾಟಕವಾದ ದಾವಣಗರೆಯಲ್ಲಿ ಅನೇಕ ಸಮಾವೇಶ ಮಾಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಇರುವ ಕುರುಬ ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬೆಳಗಾವಿ 9ನೇ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕುರುಬ ಸಮುದಾಯಿದ್ದು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ದೇಶಕ್ಕೆ ‘ಭಾರತ’ ಎಂದು ಮರುನಾಮಕರಣ ಅನಗತ್ಯ: ಸಿದ್ದರಾಮಯ್ಯ

ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ದೇಶದಲ್ಲಿ 12 ಕೋಟಿಗೂ ಅಧಿಕ ಜನರಿದ್ದರೂ ಕೂಡಾ ಮುಖ್ಯಮಂತ್ರಿಯಾಗಿರುವುದು ಕೇವಲ ಸಿದ್ದರಾಮಯ್ಯನವರು ಮಾತ್ರ. ಹಾಗಾಗಿಯೇ ಅ. 2 ರಂದು ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಅ. 3 ರಂದು ಮುಖ್ಯಮಂತ್ರಿಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸೇರಿಕೊಂಡು ಸನ್ಮಾನಿಸಲಾಗುತ್ತದೆ ಎಂದರು.

Follow Us:
Download App:
  • android
  • ios