ಯುವತಿಯೊಬ್ಬರ ಜೊತೆಗಿನ ಸಾಮಾನ್ಯ ವಿಡಿಯೋ ಕರೆಯನ್ನು ಅಶ್ಲೀಲವೆಂದು ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕಾಲ್ ಕುರಿತಂತೆ, ಯುವತಿಯ ಜೊತೆ ತಾವು ಮಾತನಾಡಿದ ಸಾಮಾನ್ಯ ವಿಡಿಯೋ ಕರೆಯನ್ನು ದುರುದ್ದೇಶಪೂರ್ವಕವಾಗಿ ಅಶ್ಲೀಲ ವಿಡಿಯೋ ಎಂಬಂತೆ ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ವಿಜಯಾನಂದ ಕಾಶಪ್ಪನವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಅಧಿಕೃತ ಹಾಗೂ ಖಡಕ್ ಸ್ಪಷ್ಟನೆ ನೀಡಿದ್ದಾರೆ.

ಯುವತಿಯೊಬ್ಬರ ಜೊತೆ ತಾವು ಮಾತನಾಡಿದ ಸಾಮಾನ್ಯ ವಿಡಿಯೋ ಕರೆಯನ್ನು ದುರುದ್ದೇಶಪೂರ್ವಕವಾಗಿ ಅಶ್ಲೀಲ ವಿಡಿಯೋ ಎಂಬಂತೆ ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಚಿವರು ಕಿಡಿಕಾರಿದ್ದಾರೆ.

ಆಕೆ ಮಗು, ಸುಖಾಸುಮ್ಮನೆ ತೇಜೋವಧೆ ಮಾಡಬೇಡಿ

ವೈರಲ್ ಆಗಿರುವ ವಿಡಿಯೋ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್, 'ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಓಡಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲಿ ನಾನು ಯುವತಿಯೊಬ್ಬರ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದೇನೆ. ಆಕೆ ಹುಬ್ಬಳ್ಳಿಯ ಹುಡುಗಿ, ನಮಗೆ ಬಹಳ ಚೆನ್ನಾಗಿ ಗೊತ್ತಿರುವ ಕುಟುಂಬದ ಹುಡುಗಿ. ಆಕೆ ಇನ್ನೂ ಮಗು, ಸುಖಾಸುಮ್ಮನೆ ಆ ಮಗುವಿನ ಚಾರಿತ್ರ್ಯ ವಧೆ (ತೇಜೋವಧೆ) ಮಾಡುವಂತಹ ನೀಚ ಕೆಲಸವನ್ನು ಯಾರೂ ಮಾಡಬೇಡಿ, ಎಂದು ಮನವಿ ಮಾಡಿದರು.

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು – ಸಚಿವರ ಎಚ್ಚರಿಕೆ:

ಸಾಮಾನ್ಯ ಸಂಭಾಷಣೆಯ ವಿಡಿಯೋವನ್ನು ಇಟ್ಟುಕೊಂಡು, ರಾಜಕೀಯ ದುರುದ್ದೇಶದಿಂದ 'ಅಶ್ಲೀಲ ವಿಡಿಯೋ ಲೀಕ್' ಎಂಬಂತೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ಸಚಿವರು ಕಠಿಣ ಎಚ್ಚರಿಕೆ ನೀಡಿದ್ದಾರೆ. 'ಅಮಾಯಕ ಹೆಣ್ಣುಮಕ್ಕಳು ಹಾಗೂ ಮಕ್ಕಳನ್ನು ಇಟ್ಟುಕೊಂಡು ತೇಜೋವಧೆ ಮಾಡುವ ವಿಕೃತಿಯನ್ನು ಯಾರೂ ಪ್ರದರ್ಶಿಸಬಾರದು. ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಹಂಚಿಕೊಳ್ಳುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಪೊಲೀಸರಿಗೆ ಅಧಿಕೃತ ದೂರು ನೀಡಲಾಗುವುದು. ಸೈಬರ್ ಕ್ರೈಂ ಪೊಲೀಸರ ಮೂಲಕ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಅಪಪ್ರಚಾರಕ್ಕೆ ಕಿವಿಗೊಡದಂತೆ ಮನವಿ:

ರಾಜಕೀಯ ಲಾಭಕ್ಕಾಗಿ ಹಾಗೂ ತೇಜೋವಧೆ ಮಾಡಲೆಂದೇ ವ್ಯವಸ್ಥಿತವಾಗಿ ಇಂತಹ ಸುಳ್ಳು ಕಥೆಗಳನ್ನು ಕಟ್ಟಿ ಹರಿಬಿಡಲಾಗುತ್ತಿದೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಇಂತಹ ದೃಢೀಕರಿಸದ ಮತ್ತು ತಿರುಚಿದ ವಿಡಿಯೋಗಳಿಗೆ ಕಿವಿಗೊಡಬಾರದು ಎಂದು ಸಚಿವ ಕಾಶಪ್ಪನವರ್ ವಿನಂತಿಸಿದ್ದಾರೆ.

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್, ಹನಿಟ್ರ್ಯಾಪ್ ಸದ್ದು

ಇದೀಗ ರಾಜ್ಯದಲ್ಲಿ ಮಾಜಿ ಸಿಎಂ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ ಪ್ರಕರಣ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಸಿಸಿಬಿ ಇಲಾಖೆಯು ತನಿಖಾ ವರದಿಯಲ್ಲಿ ಇದೊಂದು ಕಟ್ಟುಕಥೆ ಎಂದು ಕ್ಲೀನ್ ಚಿಟ್ ನೀಡಿತ್ತು. ಜೊತೆಗೆ, ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಅವರು, ತಮ್ಮ ಕುರಿತಾದ ಖಾಸಗಿ ವಿಡಿಯೋವನ್ನು ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.