ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಆರೋಪಕ್ಕೆ ನವದೆಹಲಿಯಿಂದ ಸಚಿವರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ನವದೆಹಲಿ, (ಸೆ.23): ಸಿಎಂ ಬಿಎಸ್‌ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾಡಿರುವ ಆರೋಪಕ್ಕೆ ಸಚಿವ ಸೋಮಣ್ಣ ಅವರು ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವದೆಹಲಿಯಲ್ಲಿಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಮುಖ್ಯಮಂತ್ರಿಗಳ ಮಕ್ಕಳ ಮೇಲೆ ಆರೋಪ ಮಾಡೋದು ದೇವರಾಜು ಅರಸು ಕಾಲದಿಂದ ಬಂದಿದೆ. ಎಲ್ಲಾ ಮುಖ್ಯಮಂತ್ರಿಗಳ ಮಕ್ಕಳ ಮೇಲೂ ಆರೋಪಗಳು ಬಂದಿವೆ. ಇದೇನು ಹೊಸದಲ್ಲ. ಆರೋಪಗಳು ನಿರಾಧಾರ ಎಂದು ಹೇಳಿದರು.

ನನ್ನ ಗುರಿ ಸ್ಪಷ್ಟವಾಗಿದೆ ಎಂದ ವಿಜಯೇಂದ್ರ: ಏನಿರಬಹುದು ತಂತ್ರ..?

ವಿಜಯೇಂದ್ರ ಬಿಎಸ್ ವೈಗೆ ಅರ್ಜಿ ಹಾಕಿಕೊಂಡು ಜನ್ಮ ಪಡೆದಿಲ್ಲ. ಆ ಯುವಕ ಪಕ್ಷ, ಸಂಘಟನೆ ಅಂತಾ ಓಡಾಡಿಕೊಂಡು ಕೆಲಸ ಮಾಮಾಡುತ್ತಿದ್ದಾನೆ. ಇಂಥ ಹೊತ್ತಲ್ಲಿ ಆರೋಪಗಳು ಬರೋದು ಸಹಜ ಎಂದರು.

ಇನ್ನು ವಿವಿಧ ಇಲಾಖೆಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರು ಕೈಹಾಕುತ್ತಾರೆ ಎನ್ನುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು, ನನ್ನ ಇಲಾಖೆಯಲ್ಲಿ ವಿಜಯೇಂದ್ರ ಯಾವತ್ತು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.